25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮರಕಡದಿಂದ -ಮಿಯಾರು ವರೆಗೆ ಹದಗೆಟ್ಟ ರಸ್ತೆ : ಕಳೆಂಜ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆಕ್ರೋಶ: ಅಧಿಕಾರಿಗಳು ಬರಬೇಕೆಂದು ಗ್ರಾಮಸ್ಥರ ಒತ್ತಾಯ

ಕಳೆಂಜ: ಕಳೆಂಜ ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಕಳೆಂಜ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಗಿರಿಜ ರವರ ಅಧ್ಯಕ್ಷತೆಯಲ್ಲಿ ಆ.30 ರಂದು ಕಾಯರ್ತ್ತಡ್ಕ ದ.ಕಜಿ.ಪ.ಹಿ.ಪ್ರಾ ಶಾಲೆಯಲ್ಲಿ ಜರುಗಿತು.

ಈ ವೇಳೆ ಮರಕಡದಿಂದ -ಮಿಯಾರು ವರೆಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು ಪಿಡಬ್ಲ್ಯೂಡಿ ಅಧಿಕಾರಿಗಳ ಬರದ ಹಿನ್ನಲೆಯಲ್ಲಿ ರಿಕ್ಷಾ ಚಾಲಕರು ಮತ್ತು ಗ್ರಾಮಸ್ಥರು ಅವರು ಗ್ರಾಮಸಭೆಗೆ ಬರಲೇಬೇಕು ಎಂದು ಹಠ ಹಿಡಿದು ಬರದಿದ್ದರೆ ಅವರು ಬರುವ ದಿನ ಗ್ರಾಮಸಭೆ ಮುಂದುವರಿಸುವಂತೆ ಹೇಳಿ ಹೋರಟರು.

ಅಷ್ಟರಲ್ಲಿ ಗ್ರಾ.ಪಂ. ಸದಸ್ಯ ಹರೀಶ್ ಕೆ.ಬಿ ಶಾಸಕ ಹರೀಶ್ ಪೂಂಜರಿಗೆ ಕರೆ ಮಾಡಿ ತಿಳಿಸಿ ಅವರು ಒಂದು ವಾರದೊಳಗೆ ರಸ್ತೆ ಸರಿಪಡಿಸುವಂತೆ ಭರವಸೆ ನೀಡಿದಂತೆ ಗ್ರಾಮಸಭೆಯು ಮುಂದುವರಿಯಿತು.

ಒಂದು ವಾರದೊಳಗೆ ರಸ್ತೆ ಸರಿಪಡಿಸದಿದ್ದರೆ ಪ್ರತಿಭಟನೆ ಮಾಡುವುದು ಅದಕ್ಕೆ ಗ್ರಾ.ಪಂ. ಸಹಕಾರ ನೀಡಬೇಕೆಂದು ಗ್ರಾಮಸ್ಥರು ಹೇಳಿದರು.

Related posts

ಉಪನಯನದಲ್ಲಿ ಗಾನವೈಭವ

Suddi Udaya

ಬೆಳ್ತಂಗಡಿ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಆಕರ್ಷಕ ಗಿಫ್ಟ್ ಗಳು

Suddi Udaya

ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ವಿದ್ಯಾರ್ಥಿ ಪರಿಷತ್ತು ಮತ್ತು ಶೈಕ್ಷಣಿಕ ಸಂಘಗಳ ಉದ್ಘಾಟನೆ

Suddi Udaya

ನಿಡ್ಲೆ ಗ್ರಾ.ಪಂ. ವ್ಯಾಪ್ತಿಯ ‘ನಮ್ಮ ನಡೆ ಮತಗಟ್ಟೆಯ ಕಡೆ’ ಕಾರ್ಯಕ್ರಮದ ಅಂಗವಾಗಿ ಧ್ವಜಾರೋಹಣ

Suddi Udaya

ಅ.3-12 : ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ ನವರಾತ್ರಿ ವಿಶೇಷ ಪೂಜೆ

Suddi Udaya

ಬೆಳ್ತಂಗಡಿ ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

Suddi Udaya
error: Content is protected !!