September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ವಿದ್ಯಾರ್ಥಿ ಪರಿಷತ್ತು ಮತ್ತು ಶೈಕ್ಷಣಿಕ ಸಂಘಗಳ ಉದ್ಘಾಟನೆ

ವೇಣೂರು: ಶಿಕ್ಷಣ ಕ್ಷೇತ್ರದಲ್ಲಿ ದುಡಿಯುವ ಕನಸು ಎಳವೆಯಲ್ಲೇ ನನಗಿತ್ತು. ಮೂಲತಃ ಹಳ್ಳಿಗಾಡಿನವನಾಗಿ ಕನ್ನಡ ಕಲಿತ ನನಗೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯ ಶಿಕ್ಷಣ ಸುಲಭವಾಗಿ ದೊರೆಯುವಂತೆ ಮಾಡುವ ಹಂಬಲವಿತ್ತು. ಎಕ್ಸೆಲ್ ಟೆಕ್ನೋ ಸ್ಕೂಲ್ ವೇಣೂರು ಮುಖೇನ ಅದು ಸಾಕಾರಗೊಂಡಿದೆ ಎಂದು ಎಕ್ಸೆಲ್ ಟೆಕ್ನೋ ಸ್ಕೂಲ್ ಗುರುವಾಯನಕೆರೆ ಇದರ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ ಅಭಿಪ್ರಾಯ ಪಟ್ಟರು.

ಅವರು ಜೂ.28ರಂದು ಎಕ್ಸೆಲ್ ಟೆಕ್ನೋ ಸ್ಕೂಲ್ ವೇಣೂರು, ಇದರ ವಿದ್ಯೋದಯ ಕ್ಯಾಂಪಸ್ ನಲ್ಲಿ ನಡೆದ – ವಿದ್ಯಾರ್ಥಿ ಪರಿಷತ್ತು ಮತ್ತು ಶೈಕ್ಷಣಿಕ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿ ಬೆಳ್ತಂಗಡಿ ಜ್ಯೂನಿಯರ್ ಕಾಲೇಜಿನ ಪ್ರಾಚಾರ್ಯರಾದ ಸುಕುಮಾರ್ ಜೈನ್, ವಿಶೇಷ ಜ್ಞಾನ ಯಾವುದು ಇವೆಯೋ ಅವೆಲ್ಲವೂ ವಿಜ್ಞಾನವೇ ಆಗಿದೆ. ಮನುಷ್ಯನ ಮೆದುಳಿಗಿಂತ ಅದ್ವಿತೀಯ ಶಕ್ತಿಯುಳ್ಳ ವಿಜ್ಞಾನ ಮತ್ತೊಂದಿಲ್ಲ ಎಂದರು.‌

ವಿದ್ಯೋದಯ ಸಂಸ್ಥೆಯ ಅಧ್ಯಕ್ಷ ಕೆ.ಶಿವರಾಮ ಹೆಗ್ಡೆ ಮಾತನಾಡಿ ವಿದ್ಯೆ ಉದಯಿಸಿ ವಿದ್ಯೋದಯ ಆದಂತೆ ಮುಂದೆ ಎಕ್ಸೆಲ್ ಆಗಿ ಬೆಳಗಲಿ ಎಂದು ಆಶಿಸಿದರು. ಸಂಚಾಲಕಿ ಶೀಲಾ ಎಸ್. ಹೆಗ್ಡೆ ಮಾತನಾಡಿ, ಶಿಸ್ತು ಮತ್ತು ಪರಿಶ್ರಮ ವಿದ್ಯಾರ್ಥಿ ಸಾಧನೆಗೆ ಪೂರಕ ಎಂದರು. ವೇದಿಕೆಯಲ್ಲಿ ಯಕ್ಷಗಾನದ ಮೇರು ಕಲಾವಿದ ಸದಾಶಿವ ಕುಲಾಲ್, ಎಕ್ಸೆಲ್ ಸಂಸ್ಥೆಯ ಶಿಕ್ಷಣ ಸಂಯೋಜಕಿ ಕು.ನಿಶಾ ಪೂಜಾರಿ, ಆಡಳಿತ ಮಂಡಳಿ ನಿರ್ದೇಶಕಿ ಸಹನಾ ಜೈನ್, ವಿದ್ಯೋದಯ ಕ್ಯಾಂಪಸ್ ಮೆನೇಜರ್ ಶಾಂತಿರಾಜ್ ಜೈನ್, ಎಕ್ಸೆಲ್ ಟೆಕ್ನೋ ಸ್ಕೂಲ್ ವೇಣೂರು ಇದರ ಮುಖ್ಯ ಶಿಕ್ಷಕಿ ಸುಜಾತಾ ಬಿ ಉಪಸ್ಥಿತರಿದ್ದು, ಈ ಸಂದರ್ಭದಲ್ಲಿ ವಿಜಯವಾಣಿ ಸಮೂಹ ಸಂಸ್ಥೆಯ 2025ನೇ ಸಾಲಿನ ‘ವಿಜಯ ರತ್ನ’ ಪ್ರಶಸ್ತಿ ಪುರಸ್ಕೃತ ಸುಮಂತ್ ಕುಮಾರ್ ಜೈನ್ ಬಿ ಅವರನ್ನು ಎಕ್ಸೆಲ್ ಟೆಕ್ನೋ ಸ್ಕೂಲ್ ವೇಣೂರು ಇದರ ವತಿಯಿಂದ ಸನ್ಮಾನಿಸಲಾಯಿತು.


ಕು.‌ರಂಜಿನಿ ಪ್ರಾರ್ಥಿಸಿದ ಸಭೆಗೆ, ಕಲಾ ಸಂಘದ ಸದಸ್ಯರುಗಳಾದ ದಾಮೋದರ್ ಸ್ವಾಗತಿಸಿ, ತೀರ್ಥ ಪ್ರಸಾದ್ ಸನ್ಮಾನ ಪತ್ರ ವಾಚಿಸಿ, ಶ್ವೇತ ಕಿರಣ್ ಶೆಟ್ಟಿ ವಂದಿಸಿ, ವಿಜ್ಞಾನ ಸಂಘದ ನಿರ್ದೇಶಕಿ ಕಾವ್ಯಶ್ರೀ ಎನ್ ನಿರೂಪಿಸಿ, ಶಿಕ್ಷಕಿ ನಮನ, ದೈಹಿಕ ಶಿಕ್ಷಣ ಶಿಕ್ಷಕ ಪ್ರಸಾದ್ ಸಹಕರಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

Related posts

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘಕ್ಕೆ ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಸಾಧನ ಪ್ರಶಸ್ತಿ

Suddi Udaya

ಫೆ.2-7: ಬೆಳ್ತಂಗಡಿಯಲ್ಲಿ ಮಹಾ ಸೀರೆ ಮೇಳ ವಿಶೇಷ ರಿಯಾಯಿತಿಯೊಂದಿಗೆ ವಿವಿಧ ವಿನ್ಯಾಸವುಳ್ಳ ಸೀರೆಗಳು ಲಭ್ಯ

Suddi Udaya

ಮೇಲಂತಬೆಟ್ಟು ಭಗವತಿ ದೇವಸ್ಥಾನ ರಸ್ತೆಗೆ ಹಾಕಿದ್ದ ಬೇಲಿ ತೆರವು

Suddi Udaya

ಪುಣ್ಯ ಕೋಟಿಗೆ ಒಂದು ಕೋಟಿ ನಂದಗೋಕುಲ ಗೋಶಾಲೆಯ ದೀಪೋತ್ಸವ ಕಾರ್ಯಕ್ರಮದ ಅಂಗವಾಗಿ ಪೂರ್ವಭಾವಿ ಸಭೆ

Suddi Udaya

ಗೇರುಕಟ್ಟೆ : ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಹಾಗೂ ಜಾನುವಾರು ಆರೋಗ್ಯ ಮಾಹಿತಿ ಶಿಬಿರ

Suddi Udaya

ಡಿ.26 ವಿದ್ಯುತ್ ನಿಲುಗಡೆ

Suddi Udaya
error: Content is protected !!