
ಕೊಯ್ಯೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ನವೀನ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಆ.31ರಂದು ಪಂಚದುರ್ಗ ಸಭಾಭವನದಲ್ಲಿ ನಡೆಯಿತು.
ಸಂಘವು ವರದಿ ಸಾಲಿನಲ್ಲಿ ರೂ.157 ಕೋಟಿ ವಾರ್ಷಿಕ ವ್ಯವಹಾರ ನಡೆಸಿ, ರೂ.61.70 ಲಕ್ಷ ನಿವ್ವಳ ಲಾಭ ಗಳಿಸಿದ್ದು ಸಂಘದ ಅಧ್ಯಕ್ಷ ನವೀನ್ ಕುಮಾರ್ ಸದಸ್ಯರಿಗೆ 10.25% ಡಿವಿಡೆಂಟ್ ಘೋಷಿಸಿದರು.
ನಿರ್ದೇಶಕರಾದ ಅಶೋಕ್ ಭಟ್ ಪ್ರಾಸ್ತವಿಕವಾಗಿ ಮಾತನಾಡಿ ಸಂಘದ ಸದಸ್ಯರ ಸಹಕಾರದಿಂದ ಸಂಘ ಬೆಳೆಯುತ್ತಿದೆ. ಆರೋಗ್ಯ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ ಸಂಸ್ಥೆಗಳು ಯೋಗ್ಯ ರೀತಿಯಲ್ಲಿ ಇದ್ದರೆ ಊರು ಅಭಿವೃದ್ಧಿ ಹೊಂದುತ್ತದೆ ಎಂದು ಸಂಘದ ಬೆಳವಣಿಗೆಯ ದೃಷ್ಟಿಯಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ 18 ಜನ ಸಾಂಪ್ರದಾಯಿಕ ವಿಧಾನದಿಂದ ಅಡಿಕೆ ಗಿಡಗಳಿಗೆ ಬೋರ್ಡೋ ದ್ರಾವಣ ಸಿಂಪಡಣಾಕಾರರಿಗೆ ಸನ್ಮಾನ ನಡೆಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷ ಸಂಜೀವ ಎಂ.ಕೆ., ನಿರ್ದೇಶಕರಾದ ಎನ್. ಪರಮೇಶ್ವರ ಗೌಡ, ಪುರುಷೋತ್ತಮ, ಡೀಕಯ್ಯಪೂಜಾರಿ, ಹೊನ್ನಪ್ಪ ಪೂಜಾರಿ, ಶ್ರೀಮತಿ ಗುಲಾಬಿ, ಶ್ರೀಮತಿ ರೇವತಿ, ಯತೀಶ್, ಕೇಂದ್ರ ಬ್ಯಾಂಕ್ ನ ಪ್ರತಿನಿಧಿ ಸುದರ್ಶನ್ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತಕೃಷ್ಣ ಭಟ್ ನಿರೂಪಿಸಿದರು. ನಿರ್ದೇಶಕರಾದ ರವೀಂದ್ರನಾಥ ಪಿ. ಸ್ವಾಗತಿಸಿ, ಉಜ್ವಲ್ ಕುಮಾರ್ ಧನ್ಯವಾದವಿತ್ತರು.