25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಯ್ಯೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ

ಕೊಯ್ಯೂರು : ‘ವಿದ್ಯಾರ್ಥಿಗಳು ಕ್ರೀಡಾ ಸ್ಫೂರ್ತಿಯಿಂದ ಪಂದ್ಯಾಟಗಳಲ್ಲಿ ಪಾಲ್ಗೊಳ್ಳಬೇಕು ಎಂದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರು ವಿದ್ಯಾರ್ಥಿಗಳಿಗೆ ಶುಭಾಶಯಗೈದರು.

ಅವರು ಕೊಯ್ಯೂರು ಸರ್ಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ ನಡೆದ ಬೆಳ್ತಂಗಡಿ ತಾಲೂಕು ಪದವಿಪೂರ್ವ ಕಾಲೇಜುಗಳ ಬಾಲಕ -ಬಾಲಕಿಯರ ತ್ರೋಬಾಲ್ ಪಂದ್ಯಾಟವನ್ನು ಉದ್ಘಾಟನೆಗೈದು ಜಿಲ್ಲಾ ಮಟ್ಟದಲ್ಲಿ ಪಾಲ್ಗೊಲ್ಲುವ ತಾಲೂಕು ತಂಡಕ್ಕೆ ಸಮವಸ್ತ್ರವನ್ನು ನೀಡುವ ಭರವಸೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ದಯಾಮಣಿ ವಹಿಸಿಕೊಂಡಿದ್ದರು.

ವೇದಿಕೆಯ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಲೋಕೇಶ್ ಪಾoಬೇಲು, ಶ್ರೀಮತಿ ಹೇಮಾವತಿ ಕಡಮ್ಮಜೆ, ಇಸುಬು ಹಾಗೂ ಪ್ಯಾಕ್ಸ್ ಕೊಯ್ಯೂರು ಅಧ್ಯಕ್ಷ ನವೀನ್ ಕುಮಾರ್ ವಾದ್ಯಕೋಡಿ, ಪ್ಯಾಕ್ಸ್ ನಿರ್ದೇಶಕ ಅಶೋಕ್ ಕುಮಾರ್ ಅಗ್ರಸಾಲೆ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ದಾಮೋದರ ಗೌಡ ಬೆರ್ಕೆ, ಕೊಯ್ಯೂರು ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಾಧಾ ಕೃಷ್ಣ ತಚ್ಛಮೆ ಭಾಗವಹಿಸಿದ್ದರು. ವಿದ್ಯಾರ್ಥಿನಿ ಕುಮಾರಿ ರಂಝಿನ ಕಾರ್ಯಕ್ರಮದ ಪ್ರಾಯೋಜರಾದ ಸಲೀo ಬಿ. ಕೆ. ರೆಜಿಸ್ಟ್ರಾರ್, ಸಹಕಾರ ಇಲಾಖೆ, ಬೆಂಗಳೂರು ಮತ್ತು ಮಂಗಳೂರು ಪ್ರಾದೇಶಿಕ ಮುಖ್ಯಸ್ಥರು ಬದಿಯಡ್ಕ -ತ್ರಿ ಶೂರ್, ಕ್ಯಾಂಪ್ಕೋ ಮಂಗಳೂರು -ಇವರುಗಳ ಸಂದೇಶ ವಾಚನ ವಾಚಿಸಿದರು.


ವಿದ್ಯಾರ್ಥಿನಿಯರಾದ ರಂಝಿನ, ಭವ್ಯ, ಪ್ರಜ್ಞಾ, ವಿನಯ, ಚಿರಸ್ವಿ ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಮೋಹನ ಗೌಡ ಸ್ವಾಗತಿಸಿ, ಅರ್ಥ ಶಾಸ್ತ್ರ ಉಪನ್ಯಾಸಕಿ ತೃಪ್ತಿ ವಂದಿಸಿದರು. ಇತಿಹಾಸ ಉಪನ್ಯಾಸಕ ಲಕ್ಷ್ಮಣ ಗೌಡ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕರಾದ ಶ್ರೀಮತಿ ರಶ್ಮಿ ದೇವಿ, ಶ್ರೀಮತಿ ಭವ್ಯ, ಶ್ರೀಮತಿ ಪ್ರೀತಿ, ಮಾಯಿಲ, ಸಂತೋಷ್ ಸಹಕರಿಸಿದರು.

Related posts

ಸಿಯೋನ್ ಆಶ್ರಮದಲ್ಲಿ ಓಣಂ ಹಬ್ಬ ಆಚರಣೆ

Suddi Udaya

ಮಚ್ಚಿನ ಸರಕಾರಿ ಪ್ರೌಢಶಾಲೆಗೆ ಬ್ಯಾಂಕ್ ಆಫ್ ಬರೋಡ ವತಿಯಿಂದ ಟೇಬಲ್ ಹಾಗೂ ಹಣ್ಣಿನ ಗಿಡ ವಿತರಣೆ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ವಸ್ತ್ರ ಚಿತ್ರಕಲಾ ಉದ್ಯಮಿ ತರಬೇತಿಯ ಸಮಾರೋಪ

Suddi Udaya

ಬೆಳ್ತಂಗಡಿ: ಕೇಂದ್ರ ಸರಕಾರದ ವಿದ್ಯುತ್ ಖಾಸಗೀಕರಣ ವಿರೋಧಿಸಿ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ

Suddi Udaya

ಹೃದಯ ಸಮಸ್ಯೆಯಿಂದ ಮೃತಪಟ್ಟ ಬಾಲಕ ಅಶ್ವಿನ್ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಚಾಮುಂಡೇಶ್ವರಿ ಯುವಕ ಮಂಡಲ, ಶ್ರೀ ಕ್ಷೇತ್ರ ಮುಂಡೂರು ಪ್ರಾಯೋಜಕತ್ವದಲ್ಲಿ ಮೈರೊಳ್ತಡ್ಕ ವಿವೇಕಾನಂದನಗರದಲ್ಲಿ ನೂತನ ಬಸ್ ತಂಗುದಾಣ ಲೋಕಾರ್ಪಣೆ

Suddi Udaya
error: Content is protected !!