23.5 C
ಪುತ್ತೂರು, ಬೆಳ್ತಂಗಡಿ
March 7, 2026
ಧಾರ್ಮಿಕ

ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನ ಹಾಗೂ ಷಷ್ಠಿಪೂರ್ತಿ ಸಮಾರೋಪ ಸಂಭ್ರಮ: ಉಜಿರೆಯಲ್ಲಿ ಬೃಹತ್ ಹಿಂದೂ ಸಮಾವೇಶ-ಉಜಿರೆ ಕಾಲೇಜು ಬಳಿಯಿಂದ ವೈಭವಪೂರ್ಣ ಶೋಭಾಯಾತ್ರೆ

ಉಜಿರೆ: ವಿಶ್ವಹಿಂದೂ ಪರಿಷದ್ ಬೆಳ್ತಂಗಡಿ ಪ್ರಖಂಡ ಇದರ ವತಿಯಿಂದ ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನ ಹಾಗೂ ಷಷ್ಠಿಪೂರ್ತಿ ಸಮಾರೋಪ ಸಂಭ್ರಮದ ಅಂಗವಾಗಿ ಬೃಹತ್ ಹಿಂದೂ ಸಮಾವೇಶ ಹಾಗೂ ಬೃಹತ್ ಶೋಭಾಯಾತ್ರೆ ಸೆ.1ರಂದು ಉಜಿರೆಯಲ್ಲಿ ಜರುಗಿತು.

ಉಜಿರೆ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಿಂದ ಪ್ರಾರಂಭಗೊಂಡ ಬೃಹತ್ ಶೋಭಾಯಾತ್ರೆಗೆ ಹಿರಿಯರಾದ ಶೇಷಗಿರಿ ಶೆಣೈ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಎಸ್‌ಡಿಎಂ ಎಜ್ಯುಕೇಶನಲ್ ಸೊಸೈಟಿ ಕಾರ್ಯದರ್ಶಿ ಪ್ರೊ| ಸತೀಶ್ಚಂದ್ರ ಸುರ್ಯಗುತ್ತು, ಆರ್‌ಎಸ್‌ಎಸ್ ಸಂಘ ಚಾಲಕ ಗಣೇಶ್ ಭಟ್ ಕಾಂತಾಜೆ, ಉದ್ಯಮಿ ದಯಾಕರ್ ಪಂಚಶ್ರೀ ಉಜಿರ ಉಪಸ್ಥಿತರಿದ್ದರು.

ಕ್ರೀಡಾಂಗಣದ ಬಳಿಯಿಂದ ವಿವಿಧ ವೇಷ ಭೂಷಣಗಳ ಬೃಹತ್ ಶೋಭಾಯಾತ್ರೆಯು ಉಜಿರೆ ದೇವಸ್ಥಾನದ ತನಕ ವಿಜೃಂಭಣೆಯಿಂದ ಜರುಗಿತು. ಕೃಷ್ಣವೇಶ, 60 ಭಜನಾ ತಂಡಗಳಿಂದ ಕುಣಿತ ಭಜನೆ, ಚೆಂಡೆ, ವಾದ್ಯ, ಕೀಲುಕುದುರೆ, ಬ್ಯಾಂಡ್, ಬೈಕ್ ರ‍್ಯಾಲಿ, ವಿಶ್ವಹಿಂದೂ ಪರಿಷದ್ ಸಾಧನೆಯ 60 ಸವಿನೆನಪುಗಳ ಪ್ರದರ್ಶನ ಶೋಭಾಯಾತ್ರೆಗೆ ವಿಶೇಷ ಮೆರಗು ನೀಡಿತು.

ವಿಶ್ವಹಿಂದೂ ಪರಿಷದ್ ಸ್ಥಾಪನಾ ದಿನ ಹಾಗೂ ಷಷ್ಠಿಪೂರ್ತಿ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿ.ಹಿಂ.ಪ. ಷಷ್ಠಿಪೂರ್ತಿ ಉತ್ಸವ ಸಮಿತಿ ಅಧ್ಯಕ್ಷ ಡಾ. ಎಂ.ಎಂ ದಯಾಕರ್ ವಹಿಸಿದ್ದರು. ಉದ್ಘಾಟನೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ

ಮೊಕ್ತೇಸರರಾದ ಶರತ್‌ಕೃಷ್ಣ ಪಡ್ವೆಟ್ನಾಯ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ, ಬೆನಕ ಹೆಲ್ತ್ ಸೆಂಟರ್ ಉಜಿರೆಯ ಮುಖ್ಯಸ್ಥರಾದ ಡಾ| ಭಾರತಿ ಜಿ.ಕೆ, ವಿ.ಹಿಂ.ಪ. ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಎಕ್ಸೆಲ್ ಕಾಲೇಜು

ಗುರುವಾಯನಕೆರೆಯ ಆಡಳಿತ ಹಾಗೂ ನಿರ್ದೇಶಕ ಸುಮಂತ್ ಕುಮಾರ್ ಜೈನ್, ನಾರಾಯಣ ಗೌಡ ಕೊಳಂಬೆ ಪಂಚಶ್ರೀ ಸೋಮಂತ್ತಡ್ಕ ಭಾಗವಹಿಸಿದ್ದರು. ವಿಹಿಂಪ ಮಂಗಳೂರು ವಿಭಾಗ ಕಾಯ೯ದಶಿ೯ ದೇವಿಪ್ರಸಾದ್ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ವಿವಿಧ ಸಂಘಟನೆಗಳ ಮುಖಂಡರು, ಗಣ್ಯರು ಉಪಸ್ಥಿತರಿದ್ದರು.
ವಿಹಿಂಪ ಷಷ್ಠಿ ಪೂರ್ತಿ ಉತ್ಸವ ಸಮಿತಿ ಕಾರ್ಯದರ್ಶಿ ಭುವನೇಶ್ ಗೇರುಕಟ್ಟೆ, ಕೋಶಾಧಿಕಾರಿ ಪದ್ಮನಾಭ ಶೆಟ್ಟಿಗಾರ್, ಸಂಚಾಲಕ ಸಂಪತ್ ಬಿ. ಸುವರ್ಣ, ಸಹ ಸಂಚಾಲಕ ಬಾಲಕೃಷ್ಣ ಶೆಟ್ಟಿ ಉಜಿರೆ, ವಿಹಿಂಪ ಅಧ್ಯಕ್ಷ ದಿನೇಶ್ ಚಾರ್ಮಾಡಿ, ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ,

ಬಜರಂಗದಳ ಸಂಯೋಜಕ ಸಂತೋಷ್ ಅತ್ತಾಜೆ, ಸಹ ಸಂಯೋಜಕ ಸತೀಶ್ ಮರಕ್ಕಡ, ಸತ್ಸಂಗ ಪ್ರಮುಖ್ ಅಶೋಕ್ ಕಳೆಂಜ, ಸೇವಾ ಪ್ರಮುಖ್ ವಿನೋದ್ ಮದ್ದಡ್ಕ, ವಿದ್ಯಾರ್ಥಿ ಪ್ರಮುಖ್ ಅಖಿಲ್ ರೆಖ್ಯ, ವಿಹಿಂಪ ಉಪಾಧ್ಯಕ್ಷ ಸತೀಶ್ ನೆರಿಯ, ಗೋರಕ್ಷಾ ಪ್ರಮುಖ್ ವಿಹಿಂಪ ರಮೇಶ್ ಧರ್ಮಸ್ಥಳ, ಗೋರಕ್ಷಕ್ ಪ್ರಮುಖ್ ಬಜರಂಗದಳ ಅನಂತ್ ಉಜಿರೆ, ಸಹ ಸಂಯೋಜಕ್ ಪ್ರಶಾಂತ್ ಕೊಕ್ಕಡ, ಪ್ರಚಾರ ಮತ್ತು ಪ್ರಸಾರ ನಾಗೇಶ್ ಕಲ್ಮಂಜ, ಸುರಕ್ಷ ಪ್ರಮುಖ

ರಾಜೇಶ್ ನಿಡ್ಲೆ, ಮಾತೃಶಕ್ತಿ ಪ್ರಮುಖ್ ಶ್ರೀಮತಿ ವಿದ್ಯಾ, ದುರ್ಗಾವಾಹಿನಿ ಸಂಯೋಜಕ ಕು. ಶ್ವೇತಾ ಬೆಳಾಲ್ ಸಹಕರಿಸಿದರು.ಶಿವಶಂಖರ್ ಗೇರುಕಟ್ಟೆ ವಂದೇಮಾತರಂ ಹಾಡಿದರು.ಸಂಪತ್ ಸುವರ್ಣ ಸ್ವಾಗತಿಸಿದರು. ಮೋಹನ್ ಬೆಳ್ತಂಗಡಿ ಧನ್ಯವಾದವಿತ್ತರು.

Related posts

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವರ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ಅಯೋಧ್ಯೆ ಪ್ರಭು ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆ: ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ವಿಶೇಷ ಪೂಜೆ

Suddi Udaya

ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಜಯನಂದ ಪೂಜಾರಿ: ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ನವೀನ್ ಕುಮಾರ್ ಆಯ್ಕೆ

Suddi Udaya

ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ: ಲಲಿತ ಸಹಸ್ರನಾಮ ಮತ್ತು ಶ್ರೀ ದೇವಿ ಅಷ್ಟೋತ್ತರ ಪಾರಾಯಣ,ಭಜನಾ ಕಾರ್ಯಕ್ರಮ

Suddi Udaya

ಧಮ೯ಸ್ಥಳ ಜೋಡುಸ್ಥಾನ ನಿತ್ಯ ನೂತನ ಭಜನಾ ಮಂದಿರದಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಸಂತ ಲಾರೆನ್ಸರ ಮಹಾದೇವಲಯದಲ್ಲಿ ಪಾಸ್ಕ ಹಬ್ಬದ ಆಚರಣೆ

Suddi Udaya
error: Content is protected !!