April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಬೆಳ್ತಂಗಡಿ: ಸವಣಾಲುವಿನಲ್ಲಿ ಬೋನಿಗೆ ಬಿದ್ದ ಚಿರತೆ

ಬೆಳ್ತಂಗಡಿ: ಸವಣಾಲು ಬಳಿ ಚಿರತೆಯೊಂದು ಬೋನಿಗೆ ಬಿದ್ದ ಘಟನೆ ಆ.31ರಂದು ರಾತ್ರಿ ನಡೆದಿದೆ.

ಸವಣಾಲು ಗ್ರಾಮದಲ್ಲಿ ಕಳೆದ ಎರಡು ತಿಂಗಳ ಹಿಂದೆ ಚಿರತೆಯೊಂದು ಕಾಣಿಸಿದ್ದು, ಸ್ಥಳೀಯರಿಗೆ ಆತಂಕ ಎದುರಾಗಿತ್ತು.

ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಗುರಿಕಂಡ ಆನಂದ ಶೆಟ್ಟಿ ಎಂಬವರ ಮನೆಯ ಬಳಿ ಎರಡು ತಿಂಗಳ ಹಿಂದೆ ಚಿರತೆ ಹಿಡಿಯಲು ಬೋನ್ ಅಳವಡಿಸಿ ಅದರಲ್ಲಿ ಕೋಳಿ ಇಡಲಾಗಿತ್ತು. ಕಳೆದ  ಮಧ್ಯರಾತ್ರಿ ಚಿರತೆ ಕೋಳಿ ಹಿಡಿಯಲು ಬೋನಿನೊಳಗೆ ಹೋಗಿ ಸೆರೆಯಾಗಿದೆ. ಈಗಾಗಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು , ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಚಿರತೆ ಸೇರೆಯಾಗಿದ್ದು  ಸ್ಥಳೀಯರ ಆತಂಕ ಕೊಂಚ ಮಟ್ಟಿಗೆ ದೂರವಾಗಿದೆ.

Related posts

ಧರ್ಮಸ್ಥಳದಲ್ಲಿ ರಾಜ್ಯಾದ್ಯಂತ ಶುದ್ಧಗಂಗಾ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೇರಕರಿಗೆ ಮಾರ್ಗದರ್ಶನ

Suddi Udaya

ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಮೋಹನ್ ಕುಮಾರ್ ಕಚೇರಿಗೆ ಕ್ಯಾ. ಬ್ರಿಜೇಶ್ ಚೌಟ ಭೇಟಿ:

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಐ.ಟಿ.ಐ.ಯಲ್ಲಿ ವಿಶ್ವ ಮಹಿಳಾ ದಿನಾಚರಣೆ

Suddi Udaya

ಶಾಸಕ ಹರೀಶ್ ಪೂಂಜರ ಹುಟ್ಟುಹಬ್ಬ: ಕನ್ನಾಜೆಯ ಸುರಕ್ಷಾ ಆಚಾರ್ಯ ರಿಂದ ನೂಲಿನಲ್ಲಿ ತಯಾರಿಸಿದ ಹರೀಶ್ ಪೂಂಜರ ಚಿತ್ರ ಉಡುಗೊರೆ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಲೋಕಸಭಾ ಚುನಾವಣೆಯ ಪ್ರಯುಕ್ತ ಸಭೆ

Suddi Udaya

ತೆಕ್ಕಾರು ಗ್ರಾಮ ಪಂಚಾಯತ್ ದ್ವಿತೀಯ ಹಂತದ ಗ್ರಾಮ ಸಭೆ

Suddi Udaya
error: Content is protected !!