ಬೆಳ್ತಂಗಡಿ : . ಗೇರುಕಟ್ಟೆ ಕಳಿಯ ಗ್ರಾಮ ಪಂಚಾಯತು ಹಾಗೂ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ “ನೇತ್ರ ವೈದ್ಯರ ನಡೆ ಗ್ರಾಮ ಪಂಚಾಯತ್ ಕಡೆ” ಯೋಜನಡಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಪಂಚಾಯತು ಸಭಾಂಗಣದಲ್ಲಿ ಸೆ.1ರಂದು ನಡೆಯಿತು.
ಪಂಚಾಯತು ಅಧ್ಯಕ್ಷ ದಿವಾಕರ ಎಂ, ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.
ಪಂಚಾಯತು ಉಪಾಧ್ಯಕ್ಷರಾದ ಇಂದಿರಾ ಬಿ.ಶೆಟ್ಟಿ, ಸದಸ್ಯರಾದ ಸುಧಾಕರ ಮಜಲು ,ವಿಜಯ ಗೌಡ ಕೆ,ಲತೀಫ್ ,ಪುಷ್ಪ, ಶ್ವೇತಾ ಶ್ರೀನಿವಾಸ್, ನೇತ್ರ ತಜ್ಞರಾದ ಡಾ.ಸ್ನೇಹ,ಕಳಿಯ ಗ್ರಾಮ ಸಿ.ಹೆಚ್.ಒ.ಡಾ. ನಾಗರಾಜ್, ನೇತ್ರಾಲಯ ಸಂಸ್ಥೆ ಸಿಬ್ಬಂದಿ ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುರಿತ ಕಲ್ಯಾಣ ಇಲಾಖೆ, ಅಂದತ್ವ ವಿಭಾಗ ಮಂಗಳೂರು, ಪ್ರಸಾದ್ ನೇತ್ರಾಲಯ ಮಂಗಳೂರು,ನೇತ್ರ ಜ್ಯೋತಿ ಚಾರಿಟೇಬಲ್ ಮಂಗಳೂರು, ಶ್ರೀ. ಕ್ಷೇತ್ರ.ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್, ಗುರುವಾಯನಕೆರೆ ವಲಯ,ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘ,ವೈಷ್ಣವಿ ಸಂಜೀವಿನಿ ಒಕ್ಕೂಟ ಕಳಿಯ,ಗ್ರಾಮ ಪಂಚಾಯತು ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಕಳಿಯ,ಸ್ನೇಹ ಆಟೋ ಚಾಲಕ,ಮಾಲಕರ ಸಂಘ ಗೇರುಕಟ್ಟೆ,ಮಂಗಳ ಸಾಹಿತ್ಯ ವೇದಿಕೆ ಘಟಕ ಪುತ್ತೂರು,ಯಶಸ್ವಿ ನಾಗರಿಕ ಸೇವಾ ಸಂಘ ಕಾರ್ಕಳ ಸಂಯುಕ್ತ ಆಶ್ರಯದಲ್ಲಿ ನಡೆಯಿತು. ನ್ಯಾಯತರ್ಪು ಸಿ.ಹೆಚ್.ಒ. ಡಾ. ವೆಂಕಟೇಶ್ ಹಾಗೂ ಆಶಾ ಕಾರ್ಯಕರ್ತೆಯರು, ಪಂಚಾಯತು ಸಿಬ್ಬಂದಿಗಳು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಳಿಯ ಪಂಚಾಯತು ಕಾರ್ಯದರ್ಶಿ ಕುಂಞ್ಞ ಕೆ.ಸ್ವಾಗತಿಸಿದರು. ಶಿಬಿರದ ನಿರ್ದೇಶಕರಾದ ಮುರಲೀಧರ ಸಿ,ಹೆಚ್.ಧನ್ಯವಾದವಿತ್ತರು.