ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

ಮಡಂತ್ಯಾರು: ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ (MCF) ಲಿಮಿಟೆಡ್ ಮಂಗಳೂರು ಮತ್ತು ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಹಾಗೂ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘ, ಇವರ ಜಂಟಿ ಆಶ್ರಯದಲ್ಲಿ, ಸೆ.01ರಂದು ಕಾಲೇಜು ಆವರಣದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಏರ್ಪಡಿಸಿಲಾಗಿತ್ತು.

ಶಿಬಿರವನ್ನು ಬೆಳ್ತಂಗಡಿ ಶಾಸಕರು ಹಾಗೂ ಸೇಕ್ರೆಡ್ ಹಾರ್ಟ್ ಕಾಲೇಜಿನ ಹೆಮ್ಮೆಯ ಹಿರಿಯ ವಿದ್ಯಾರ್ಥಿ ಹರೀಶ್ ಪೂಂಜ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು MCF Ltd. ನ ಮುಖ್ಯ ಉತ್ಪಾದನಾ ಅಧಿಕಾರಿ ಎಸ್‌. ಗಿರೀಶ್, ವಹಿಸಿದರು.

ಮುಖ್ಯ ಅತಿಥಿಗಳಾಗಿ ವಂದನೀಯ ಡಾ| ಸ್ಕ್ಯಾನಿ ಗೋವಿಯಸ್, ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಗಳ ಸಂಚಾಲಕರು, ಪ್ರೊ.ಅಲೆಕ್ಸ್ ಐವನ್ ಸಿಕ್ಕೇರಾ, ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲರು ಮತ್ತು ವಿಲ್ಸನ್ ರೂಪೇಶ್ ಮೊರಾಸ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಸೇಕ್ರೆಡ್ ಹಾರ್ಟ್ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಗಣ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಉದ್ಘಾಟನಾ ಭಾಷಣದಲ್ಲಿ ಶಾಸಕ ಹರೀಶ್ ಪೂಂಜಾರವರು ಕಾಲೇಜಿನಲ್ಲಿ ತಮ್ಮ ಅಚ್ಚುಮೆಚ್ಚಿನ ನೆನಪುಗಳನ್ನು ಪ್ರೀತಿಯಿಂದ ನೆನಪಿಸಿಕೊಂಡರು ಮತ್ತು “ಸಮಾಜಕ್ಕೆ ಬೆಳಕನ್ನು ತರುವ ಉದ್ದೇಶದಿಂದ ಆಯೋಜಿಸಿದ ಈ ಕಾರ್ಯಕ್ಕಾಗಿ ಸಂಘಟಕರನ್ನು ಶ್ಲಾಘಿಸಿದರು. ತನಗೆ ಉನ್ನತ ನೀತಿ ಶಿಕ್ಷಣ ನೀಡಿ ನಾಯಕತ್ವ ಮೌಲ್ಯಗಳನ್ನು ಭೋದಿಸಿದ ಕಾಲೇಜಿನ ಎಲ್ಲಾ ಪ್ರಾಧ್ಯಾಪಕ ವೃಂದದವರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ವಂ.ಡಾ.ಸ್ಕ್ಯಾನಿ ಗೋವಿಯಸ್ ಇಂತಹ ಉದಾತ್ತ ಉದ್ದೇಶದಿಂದ ಮತ್ತು ಸಮರ್ಪಣಾ ಭಾವದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದ ಹಿರಿಯ ವಿದ್ಯಾರ್ಥಿ ಸಂಘಕ್ಕೆ ಪ್ರಾಮಾಣಿಕ ಧನ್ಯವಾದಗಳನ್ನು ಅರ್ಪಿಸಿದರು. ನಾವು ನೆಲೆ ನಿಂತ ಸಮುದಾಯಕ್ಕೆ ಮರಳಿ ನೀಡುವ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಈ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಸಂಘದ ಪ್ರಯತ್ನಗಳನ್ನು ಶ್ಲಾಘಿಸಿದರು. ಪ್ರಾಂಶುಪಾಲ ಪ್ರೊ.ಅಲೆಕ್ಸ್ ಐವನ್ ಸಿಕ್ಕೇರಾ ರವರು, ಈ ಶಿಬಿರವನ್ನು ಸಾಕಾರಗೊಳಿಸಲು ಪಟ್ಟ ಕಠಿಣ ಪರಿಶ್ರಮವನ್ನು ನೆನಪಿಸಿ, ಇದನ್ನು ಆಯೋಜಿಸಲು ಶ್ರಮಿಸಿದ ಎಲ್ಲರಿಗೂ ವಂದಿಸಿದರು. ಎಸ್.ಗಿರೀಶ್ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಿಬಿರಕ್ಕೆ ಆಗಮಿಸಿದ ಜನಸ್ತೋಮ ಕಂಡು ಹರ್ಷ ವ್ಯಕ್ತಪಡಿಸಿದರು. ಸಂಘಟಕರು ಮಾಡಿದ ಅಚ್ಚುಕಟ್ಟಾದ ವ್ಯವಸ್ಥೆಗಳನ್ನು ಶ್ಲಾಘಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮತ್ತು ಎಂಸಿಎಫ್ ಲಿಮಿಟೆಡ್ ಉದ್ಯೋಗಿ ವಿಲ್ಸನ್ ರೂಪೇಶ್ ಮೊರಾಸ್ ಅವರ ಪ್ರಯತ್ನವನ್ನು ವಿಶೇಷವಾಗಿ ಶ್ಲಾಘಿಸಿದರು. ಅದೇರೀತಿ MCF ನ ಕಣ್ಣಿನ ಆರೈಕೆ ಯೋಜನೆಗಳಿಗೆ ನಿರಂತರ ಬೆಂಬಲ ನೀಡುವ, ಜಸ್ಟಿಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಡಾ.ಹೃಷಿಕೇಶ್ ಅಮೀನ್ ಅವರ ನೇತೃತ್ವದ ವೈದ್ಯಕೀಯ ತಂಡಕ್ಕೆ ವಿಶೇಷವಾಗಿ ಅಭಿವಂದಿಸಿದರು.

340 ವ್ಯಕ್ತಿಗಳು ನೋಂದಾಯಿಸಿಕೊಂಡು ನೇತ್ರ ತಪಾಸಣೆಗೆ ಒಳಗಾಗಿ, ಅವರಲ್ಲಿ 199 ಮಂದಿಗೆ ಉಚಿತ. ಕನ್ನಡಕ ಮುಂಬರುವ ದಿನಗಳಲ್ಲಿ ವಿತರಿಸಿ, 29 ಮಂದಿಯನ್ನು ಹೆಚ್ಚಿನ ವಿಶೇಷ ಚಿಕಿತ್ಸೆಗಾಗಿ ಜಸ್ಟೀಸ್ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ.

ಎಂ.ಸಿ.ಎಫ್ ಆಡಳಿತ ತಂಡದ ಸದಸ್ಯ ಡಾ.ಯೋಗೀಶ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳ್ನಾಡಿದರು. ವಿಲ್ಸನ್ ರೂಪೇಶ್ ಮೊರಾಸ್ ಧನ್ಯವಾದವಿತ್ತರು. ಕಾರ್ಯಕ್ರಮವನ್ನು ನೆಲ್ಸನ್ ಮೋನಿಸ್ ಮತ್ತು ರೋಸ್ ಪ್ರಿಯಾ ಪಿಂಟೋ ನಿರೂಪಿಸಿದರು.

Related posts

ಓಡಿಲ್ನಾಳ: ಶಕ್ತಿ ಯುವಕ ಮಂಡಲ ರೇಷ್ಮೆ ರೋಡ್ ಇದರ ವಾರ್ಷಿಕ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ತಾ.ಪಂ.  ಸಹಾಯಕ ಲೆಕ್ಕಾಧಿಕಾರಿ ಗಣೇಶ್ ಪೂಜಾರಿ ಸೇವಾ ನಿವೃತ್ತಿ – ಬೀಳ್ಕೊಡುಗೆ ಸಮಾರಂಭ

Suddi Udaya

ಶಿಶಿಲ : ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಪೌಷ್ಟಿಕ ಆಹಾರ ಸಿರಿ ಧಾನ್ಯ ಬಳಕೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ

Suddi Udaya

ಬೆಳ್ತಂಗಡಿ: ಮಾದಕ ವಸ್ತು ಸೇವನೆ ಮತ್ತು ಮಾರಾಟ ನಾಲ್ವರ ವಿರುದ್ಧ ಪ್ರಕರಣ ದಾಖಲು; ಓರ್ವ ಅಂದರ್

Suddi Udaya

ದಯಾ ವಿಶೇಷ ಶಾಲೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

Suddi Udaya

ಮುಂಡಾಜೆ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಹಾಗೂ ಆಟಿಡೊಂಜಿ ದಿನ ಕಾರ್ಯಕ್ರಮ

Suddi Udaya
error: Content is protected !!