April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಅಂಡಿಂಜೆ: ಯುವಕ ಮಂಡಲದಿಂದ ಮೊಸರು ಕುಡಿಕೆ ಉತ್ಸವ, ವಿವಿಧ ಆಟೋಟ ಸ್ಪರ್ಧೆಗಳು

ಅಂಡಿಂಜೆ: ಯುವಕ ಮಂಡಲದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 2 ನೇ ವರ್ಷದ ಮೊಸರು ಕುಡಿಕೆ ಉತ್ಸವವು ಶ್ರೀ ವಿನಾಯಕ ಶ್ರೀರಾಮ ಭಜನಾ ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸುಧೀಶ್ಚಂದ್ರ ಹೆಗ್ಡೆ ಕೊಕ್ರಾಡಿ ನೇರವೇರಿಸಿ ಶುಭ ಕೋರಿದರು. ಅಧ್ಯಕ್ಷತೆ ಅಂಡಿಂಜೆ ಯುವಕ‌ ಮಂಡಲದ ಅಧ್ಯಕ್ಷ ಪ್ರಾಣೇಶ್ ಮುಂಡೇವು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವಸಂತ ಸಾಲ್ಯಾನ್ ಹಿಂಪ್ಲೊಟ್ಟು, ನಿತಿನ್ ಮುಂಡೇವು ಅಧ್ಯಕ್ಷರು ಗ್ರಾಮ ಪಂಚಾಯತ್ ಅಂಡಿಂಜೆ,
ಗಿರೀಶ್ ಮೂಡುಕೋಡಿ ನ್ಯೂ ಹಲೆಕ್ಕಿ, ರಾಜಶೇಖರ್ ಅಂಡಿಂಜೆ, ಮಹಾಬಲ ನೆಲ್ಲಿಂಗೇರಿ, ಯೋಗೀಶ್ ಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಹಿಳೆಯರಿಗೆ, ಮಕ್ಕಳಿಗೆ, ಪುರುಷರಿಗೆ ವಿವಿಧ ಆಟೋಟ ಸ್ಪರ್ದೆಗಳು ನಡೆಯಿತು. ಹಲವಾರು ಮಕ್ಕಳು ಕೃಷ್ಣವೇಷ ಸ್ಪರ್ದೆಯಲ್ಲಿ ಭಾಗವಹಿಸಿ ಬಹುಮಾನ ಪಡೆದರು.

ಪ್ರಶಾಂತ್ ಮಂಜುಗಿರಿ ಸ್ವಾಗತಿಸಿ, ಅಶ್ವಿನ್ ಮುಂಡೇವು ವಂದಿಸಿದರು. ದಿವ್ಯ ಪ್ರಶಾಂತ್ ನಿರೂಪಿಸಿದರು.
ಪ್ರವೀಣ್ ನವಜ್ಯೋತಿ, ರಾಜೇಶ್ ಮುಂಡೆವು,ಮಿಥುನ್ ದುಗಣಬೆಟ್ಟು,ಶಶಿ ಹೆಗ್ಡೆ ಹಾಗೂ ಯುವಕ ಮಂಡಲದ ಸದಸ್ಯರು ಸಹಕರಿಸಿದರು.

Related posts

ಚಾಲಕನ ನಿಯಂತ್ರಣ ತಪ್ಪಿ ಸಹರಾ ಆ್ಯಂಬುಲೆನ್ಸ್ ಪಲ್ಟಿ: ಮಾಲಾಡಿ ನಿವಾಸಿ ಶಬೀರ್ ಸಾವು

Suddi Udaya

ಮಾ.9 : ಬೆಳ್ತಂಗಡಿಯಲ್ಲಿ ಗ್ಯಾರಂಟಿ ಯೋಜನೆಗಳ ಸಮಾವೇಶ

Suddi Udaya

ಮಚ್ಚಿನ: ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತ ರುಕ್ಮಯ ಗೌಡ ನಿಧನ

Suddi Udaya

ಅರಸಿನಮಕ್ಕಿ ಸರಕಾರಿ ಪ್ರೌಢಶಾಲೆ ಮತ್ತು ಪ.ಪೂ. ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ

Suddi Udaya

500 ಮತ್ತು 1000 ಮುಖಬೆಲೆ ನೋಟು ಅಮಾನೀಕರಣ: ಕೇಂದ್ರ ಸರ್ಕಾರದ ನಿರ್ಧಾರ ಎತ್ತಿಹಿಡಿದ ಸುಪ್ರೀಂ ಕೋರ್ಟ್

Suddi Udaya

ಪಟ್ರಮೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಕಾರ್ಯಕ್ರಮ

Suddi Udaya
error: Content is protected !!