ನಾರಾವಿ: ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸೆ. 01ರಂದು ನಾರಾವಿ ಧರ್ಮಶ್ರೀ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಸುಧಾಕರ ಭಂಡಾರಿ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಸಂಘವು 2023-24ನೇ ವರದಿ ಸಾಲಿನಲ್ಲಿ ರೂ 229.69 ಕೋಟಿ ವಾರ್ಷಿಕ ವ್ಯವಹಾರ ನಡೆಸಿ, ರೂ. 1.03 ಕೋಟಿ ಲಾಭ ಗಳಿಸಿದೆ, ಸದಸ್ಯರಿಗೆ ಶೇ.12%ಡಿವಿಡೆಂಟ್ ಘೋಷಿಸಿದರು.
ನಾರಾವಿ ಸಿಎ ಬ್ಯಾಂಕ್ ಅಧ್ಯಕ್ಷ ಸುಧಾಕರ ಭಂಢಾರಿ ಮಾತನಾಡಿ ಸಂಘದ ಠೇವಣಿ ಹೆಚ್ಚಳ, ಕೇಂದ್ರ ಮತ್ತು ರಾಜ್ಯ ಸರಕಾರದ ಸವಲತ್ತುಗಳು ರೈತ ಸದಸ್ಯರಿಗೆ ಮುಟ್ಟಿಸುವ ಉದ್ದೇಶದಿಂದ ಸಾಮಾನ್ಯ ಸೇವಾ ಕೇಂದ್ರ ತೆರೆಯುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.ಯೂನಿಯನ್ ಬ್ಯಾಂಕಿನ ಸಹಕಾರದಿಂದ ಆರ್.ಟಿ.ಸಿ,ನೆಪ್ಟ್ ಸೌಲಭ್ಯಗಳನ್ನು ಮಾಡಲಿದ್ದೇವೆ ಎಂದು ಹೇಳಿದರು.
ವೇದಿಕೆಯಲ್ಲಿ ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ನಿರ್ದೇಶಕ ಕುಶಾಲಪ್ಪ ಗೌಡ,ವಲಯ ಮೇಲ್ವಿಚಾರಕ ಸಿರಾಜುದ್ದೀನ್, ನಾರಾವಿ ಗ್ರಾ.ಪಂ ಅಧ್ಯಕ್ಷ ರಾಜವರ್ಮ ಜೈನ್,ಸಂಘದ ಉಪಾಧ್ಯಕ್ಷರಾದ ಸದಾನಂದ ಗೌಡ,ನಿರ್ದೇಶಕರಾದ ವಿಠಲ ಪೂಜಾರಿ,ರಾಜೇಂದ್ರ ಕುಮಾರ್,ಜಗದೀಶ್ ಹೆಗ್ಡೆ, ಲಕ್ಷ್ಮಣ ಪೂಜಾರಿ,ಲಿಂಗಪ್ಪ ಮಲೆಕುಡಿಯ,ಹರೀಶ್ ಹೆಗ್ಡೆ,ಪೆರ್ನೆ,ಯಶೋಧ,ಸುಜಲತಾ ಉಪಸ್ಥಿತರಿದ್ದರು.
ಸನ್ಮಾನ: ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ ಅಯ್ಕೆಯಾದ ಕುಶಾಲಪ್ಪ ಗೌಡ ಪೂವಾಜೆ, ಅಳದಂಗಡಿ ಮೆಸ್ಕಾಂ ಇಲಾಖೆಯ ನಾರಾಯಣ,ಮೋಹನ್,ಅಜಯ್,ಅಮೋಘಸಿದ್ದ ನಾಲ್ಕು ಮಂದಿ ಲೈನ್ ಮ್ಯಾನ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿದ ಸುಮಾರು 11 ಮಂದಿ ಸಾಧಕರನ್ನು ಗೌರವಿಸಲಾಯಿತು. ಜೊತೆಗೆ ಪ್ರೌಢ ಶಾಲಾ,ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಸಹಕರಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಶಶಿಕಾಂತ್ ಜೈನ್ ಸ್ವಾಗತಿಸಿ ವಾರ್ಷಿಕ ವರದಿ ಹಾಗೂ ಸಂಘದ ಲೆಕ್ಕಪತ್ರಗಳನ್ನು ಮಂಡಿಸಿದರು.
ಲೆಕ್ಕಿಗರಾದ ವನಿತಾ, ಗುಮಾಸ್ತರಾದ ಶೇಖರ ಕೆ, ಮಲ್ಲಿಕಾ, ಶ್ರೇಯಾಂಸ ಕುಮಾರ್, ಅಶೋಕ ಹಾಗೂ ಸಿಬ್ಬಂದಿಗಳು ಸಹಕರಿಸಿದರು. ಕಂದಾಯ ಇಲಾಖೆಯ ಇಲಾಖಾಧಿಕಾರಿ ಮಾಹಿತಿ ನೀಡಿದರು.