37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳಾಲು ಮೈತ್ರಿ ಯುವಕ ಮಂಡಲದಿಂದ 20ನೇ ವರ್ಷದ ಮೊಸರು ಕುಡಿಕೆ ಉತ್ಸವ

ಬೆಳಾಲು : ಮೈತ್ರಿ ಯುವಕ ಮಂಡಲ ಬೆಳಾಲು ಇದರ ಆಶ್ರಯದಲ್ಲಿ 20ನೇ ವರ್ಷದ ಮೊಸರು ಕುಡಿಕೆ ಉತ್ಸವಕ್ಕೆ ಸಂಘದ ವಠಾರದಲ್ಲಿ ಸೆ 01 ರಂದು ನಡೆಯಿತು.

ನಿವೃತ್ತ ಜಲಾನಯನ ಅಧಿಕಾರಿ ನಾರಾಯಣ ಸುವರ್ಣ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಯುವಕ ಮಂಡಲದ ಸಮಾಜಮುಖಿ ಸಾಮಾಜಿಕ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಬೆಳಾಲು ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಚಿದಾನಂದ ಕೆ ಹಾಗೂ ಬೆಳಾಲು ಅನಂತೋಡಿ ಅನಂತ ಪದ್ಮನಾಭ ದೇವಸ್ಥಾನ ಉಪಾಧ್ಯಕ್ಷೆ ಮಮತಾ ದಿನೇಶ್ ಪೂಜಾರಿ ಉಪ್ಪಾರು ಭಾಗವಹಿಸಿ ಶುಭ ಹಾರೈಸಿದರು.

ಮೈತ್ರಿ ಯುವಕ ಮಂಡಲ ಗೌರವಾಧ್ಯಕ್ಷರಾದ ರಾಜೇಶ್ ಪಾರಳ, ಅಧ್ಯಕ್ಷರಾದ ನಿತಿನ್ ಮೋನಿಶ್, ಕಾರ್ಯದರ್ಶಿ ವಿಘ್ನೇಶ್ ಹಾಗೂ ಗೌರವ ಸಲಹೆಗಾರರು ಪದಾಧಿಕಾರಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು.


ಮುದ್ದು ಕೃಷ್ಣ ರಾಧೆ ವೇಷ ಎಲ್ಲರ ಮನಸೊರೆಗೊಂಡಿತು. ಗೌರವ ಸಲಹೆಗಾರರು ನೋಟರಿ ವಕೀಲರಾದ ಶ್ರೀನಿವಾಸ್ ಗೌಡ, ಅಧ್ಯಾಪಕ ಭರತ್ ಕಾರ್ಯಕ್ರಮ ನಿರ್ವಹಿಸಿದರು, ಸ್ವಾತಿ ಪ್ರಾರ್ಥನೆ ಸಲ್ಲಿಸಿ, ನಿತಿನ್ ಮೋನಿಶ್ ಸ್ವಾಗತಿಸಿ, ವಿಘ್ನೇಶ್ ಧನ್ಯವಾದವಿತ್ತರು.

Related posts

ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಮಾನ್ಯ ಸಭೆ

Suddi Udaya

ಬರೆಂಗಾಯ ಶಾಲಾ ಅಮೃತ ಮಹೋತ್ಸವದ ಪೂರ್ವಭಾವಿ ಸಭೆ: ಅಮೃತ ಮಹೋತ್ಸವಕ್ಕೆ ಲಕ್ಷ್ಮಿ ದೇವಧರ್ ಮತ್ತು ಮಕ್ಕಳು ಮೊಳಂಪಾಯ ರಿಂದ ರೂ. 1 ಲಕ್ಷ ದೇಣಿಗೆ

Suddi Udaya

ಕುದ್ಯಾಡಿ ಸ.ಪ್ರಾ. ಶಾಲೆಯ ಅಗತ್ಯತೆಗೆ ಟೀಂ ಅಭಯಹಸ್ತ ಬೆಳ್ತಂಗಡಿ ವತಿಯಿಂದ ಆರ್ಥಿಕ ಸಹಕಾರ

Suddi Udaya

ರಾಜಕೇಸರಿ ಸೇವಾ ಟ್ರಸ್ಟ್ ನ ನೂತನ ಲಾಂಛನ ಬಿಡುಗಡೆ

Suddi Udaya

ಲಾಯಿಲ: ಬಜಕ್ಕಿರೆಸಾಲು ಬಳಿ ಚಿರತೆ ಓಡಾಟ

Suddi Udaya

ಹಿಂದುಳಿದ ವರ್ಗಗಳ ಮೋರ್ಚಾದ ತಾಲೂಕು ಅಧ್ಯಕ್ಷ ರತ್ನಾಕರ ಬುಣ್ಣನ್ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಥಮ ಪೂರ್ಣಪ್ರಮಾಣದ ಸಭೆ

Suddi Udaya
error: Content is protected !!