April 2, 2025
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಕೊಕ್ಕಡ: ಉಪ್ಪಾರಪಳಿಕೆಯಲ್ಲಿ ಕೃಷ್ಣಜನ್ಮಾಷ್ಟಮಿ ಆಚರಣೆ ಮತ್ತು ಶ್ರೀಕೃಷ್ಣ ಮಂದಿರದ ಭೂಮಿ ಪೂಜೆ ಹಾಗೂ ಸಸಿಗಳ ನಾಟಿ ಕಾರ್ಯಕ್ರಮ

ಕೊಕ್ಕಡ: ಶ್ರೀ ಕೃಷ್ಣ ಭಜನಾ ಮಂದಿರ ಸೇವಾ ಟ್ರಸ್ಟ್ ಮತ್ತು ಉಪ್ಪಾರಪಳಿಕೆ ಶ್ರದ್ಧಾ ಗೆಳೆಯರ ಬಳಗದ ವತಿಯಿಂದ 25ನೇ ವರ್ಷದ ಕೃಷ್ಣಜನ್ಮಾಷ್ಟಮಿ ಆಚರಣೆ ಮತ್ತು ಶ್ರೀಕೃಷ್ಣ ಮಂದಿರದ ಭೂಮಿ ಪೂಜೆ ಹಾಗೂ ಸಸಿಗಳ ನಾಟಿ ಕಾರ್ಯಕ್ರಮ ಸೆ.1ರಂದು ಶ್ರೀಕೃಷ್ಣ ಭಜನಾ ಮಂದಿರದ ಮೈದಾನದಲ್ಲಿ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರದ್ಧಾ ಗೆಳೆಯರ ಬಳಗದ ಅಧ್ಯಕ್ಷ ಶ್ರೀಧರ್ ದೇರಾಜೆ ಅಧ್ಯಕ್ಷತೆಯಲ್ಲಿ ನಡೆಯಿತು.

ಉದ್ಘಾಟನೆಯನ್ನು ಕಲ್ಕುಡ ಕಲ್ಲುರ್ಟಿ ಗ್ರಾಮ ದೈವಸ್ಥಾನ ಕೆಂಪಕೋಡಿ ಅಧ್ಯಕ್ಷ ಪಿ. ಕೆ ನಾರಾಯಣ ಗೌಡ ಆಳಂಬಿಲ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ ಉಪಸ್ಥಿತರಿದ್ದರು.

ಈ ವೇಳೆ ಶ್ರೀಕೃಷ್ಣ ಮಂದಿರದ ಭೂಮಿ ಪೂಜೆಯನ್ನು ಶ್ರೀರಾಮ ಸೇವಾ ಟ್ರಸ್ಟ್ ನ ಅಧ್ಯಕ್ಷ ಬಾಲಕೃಷ್ಣ ನೈಮಿಷ ಮತ್ತು ಸತ್ಯ ಸಾರಮಣಿ ದೈವಸ್ಥಾನ ಮಹಾವೀರ ಕಾಲೋನಿ ಇದರ ಅಧ್ಯಕ್ಷ ಗಿರೀಶ್ ರವರು ನೆರವೇರಿಸಿದರು. ಸಸಿಗಳ ನಾಟಿ ಕಾರ್ಯಕ್ರಮವನ್ನು ಉಪ್ಪಿನಂಗಡಿ ವಲಯ ಅರಣ್ಯಧಿಕಾರಿ ಜಯಪ್ರಕಾಶ್ ಕೆ.ಕೆ ನೆರವೇರಿಸಿದರು.

ಶ್ರೀಕೃಷ್ಣ ಭಜನಾ ಮಂದಿರ ಸೇವಾಟ್ರಸ್ಟ್ ನ ಅಧ್ಯಕ್ಷ ಶ್ರೀನಾಥ್ ಬಡಾಕೈಲು ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನೆರವೇರಿತು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಾಲಕೃಷ್ಣ ನೈಮಿಷ, ಜಯಪ್ರಕಾಶ್ ಕೆ ಕೆ, ಗಿರೀಶ್ ಮಹಾವೀರ ಕಾಲೋನಿ, ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷ ಬೇಬಿ ಶ್ರೀಧರ್ ಬಳಕ್ಕೆ ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಕೋರಿದರು.

ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕರಿಗೆ ಕ್ರೀಡಾ ಸ್ಪರ್ಧೆ ಮತ್ತು ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯಿತು. ಕಾರ್ಯಕ್ರಮವನ್ನು ಶಿವಾನಂದ ಸಂಕೇಶ ನಿರೂಪಿಸಿ, ಶ್ರೀಕೃಷ್ಣ ಭಜನಾ ಮಂಡಳಿಯ ಗೌರವಾಧ್ಯಕ್ಷ ಯೋಗೀಶ್ ಆಳಂಬಿಲ ಪ್ರಾಸ್ತವಿಕವಾಗಿ ಮಾತಾಡಿ ಮತ್ತು ಸ್ವಾಗತಿಸಿ, ಕೀರ್ತಿ ದೇರಾಜೆ ಧನ್ಯವಾದವಿತ್ತರು.

ಶ್ರದ್ಧಾ ಗೆಳೆಯರ ಬಳಗದ ಸರ್ವ ಸದಸ್ಯರು ಮತ್ತು ಶ್ರೀ ಕೃಷ್ಣ ಮಂದಿರದ ಸೇವಾಟ್ರಸ್ಟ್ ನ ಸರ್ವ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಹಕರಿಸಿದರು.

Related posts

ಅಳದಂಗಡಿ ಅರಮನೆಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಭೇಟಿ

Suddi Udaya

ತಣ್ಣೀರುಪಂತ ಕೆದ್ಯೇಲು ಎಂಬಲ್ಲಿ ಅಪಾಯಕಾರಿ ಕಾಲುದಾರಿ : ಸ್ಥಳಕ್ಕೆ ತಹಶೀಲ್ದಾರ್‌ ಪೃಥ್ವಿ ಸಾನಿಕಂ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್‌ ಭೇಟಿ: ನಾಗರೀಕರು ಹಾಗೂ ಶಾಲಾ ಮಕ್ಕಳು ತುರ್ಕಳಿಕೆ ಶಾಲೆಗೆ ಪರ್ಯಾಯ ಮಾರ್ಗ ಬಳಸಲು ಸೂಚನೆ

Suddi Udaya

ಕೊಕ್ಕಡ ಗ್ರಾ.ಪಂ. ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಭೆ

Suddi Udaya

ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಅಧಿಕಾರಿಯಾಗಿ ಡಾ. ಪ್ರಕಾಶ್ ಎಸ್ ನೇಮಕ

Suddi Udaya

ಕಲ್ಮಂಜ: ಪುರೋಹಿತ ಶ್ರೀಕಾಂತ ಭಿಡೆ ನಿಧನ

Suddi Udaya

ಕಳೆಂಜ ಸಂಘಪರಿವಾರದ ಕಾರ್ಯಕರ್ತರಿಂದ ಮನೆ ನಿರ್ಮಾಣ

Suddi Udaya
error: Content is protected !!