23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಎಸ್ ಡಿ ಎಂ ಪದವಿಪೂರ್ವ ಕಾಲೇಜಿನಲ್ಲಿ ಪೋಸ್ಟರ್ ತಯಾರಿಕಾ ಕಾರ್ಯಾಗಾರ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಸ್ವಯಂ ಸೇವಕರಿಗೆ ಪೋಸ್ಟರ್ ತಯಾರಿಕಾ ಹಾಗೂ ಶುಭಾಶಯ ಪತ್ರಗಳ ತಯಾರಿಕಾ ಕಾರ್ಯಾಗಾರ ನಡೆಯಿತು.

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ರಾ. ಸೇ. ಯೋಜನೆಯ ಸ್ವಯಂ ಸೇವಕರಾದ ತ್ರಿಶೂಲ್ ಹಾಗೂ ಸ್ವರ್ಣಾ ಅವರು ವಿವಿಧ ರೀತಿಯ ಪೋಸ್ಟರ್ ತಯಾರಿಕೆ ಹಾಗೂ ಶುಭಾಶಯ ಪತ್ರಗಳ ರಚನೆಯ ಬಗ್ಗೆ ತರಬೇತಿ ನೀಡಿದರು. ವರುಣ್ ಹಾಗೂ ಚೇತನ್ ಸಹಕಾರ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ಸ್ವಯಂ ಸೇವಕ , ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯ ಪ್ರಾಧ್ಯಾಪಕ ಡಾ.ರಕ್ಷಿತ್ ಅಪರಾ ಶುಭಕೋರಿದರು. ನಿಕಟಪೂರ್ವ ಯೋಜನಾಧಿಕಾರಿ ರಾಜು.ಎ ಅವರು ಉಪಸ್ಥಿತರಿದ್ದರು.

ರಾ. ಸೇ ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ನಿರೂಪಿಸಿದರು. ಧನುಶ್ರೀ ಸ್ವಾಗತಿಸಿ , ಶ್ರಮಾ ವಂದಿಸಿದರು.

Related posts

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ

Suddi Udaya

ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ

Suddi Udaya

ಉಜಿರೆ ಯುವವಾಹಿನಿ ಸಂಚಲನ ಸಮಿತಿಯ ಅಧ್ಯಕ್ಷರಾಗಿ ರಿತೇಶ್ ರೆಂಜಾಳ ಮತ್ತು ಕಾರ್ಯದರ್ಶಿಯಾಗಿ ಉದಯ ಮಾಚಾರ್ ಆಯ್ಕೆ‌

Suddi Udaya

ಬೂಡುಜಾಲು ರಸ್ತೆ ಬದಿಯಲ್ಲಿದ್ದ ಗೂಡಂಗಡಿಯ ಸೊತ್ತುಗಳಿಗೆ ಕಿಡಿಗೇಡಿಗಳಿಂದ ‌ಹಾನಿ

Suddi Udaya

ಬಿಜೆಪಿ ಕಾರ್ಯಕರ್ತರ ಮೇಲಿನ ದಬ್ಬಾಳಿಕೆ ಸಹಿಸುವುದಿಲ್ಲ; ಶಾಸಕ ಹರೀಶ್ ಪೂಂಜರ ಬಂಧನ ದುಸ್ಸಾಹಸಕ್ಕೆ ಕೈಹಾಕಿದರೆ ಮುಂದೆ ಆಗುವ ವಿಚಾರಗಳಿಗೆ ಪೊಲೀಸ್ ಇಲಾಖೆ ಹಾಗೂ ಸರಕಾರ ನೇರ ಹೊಣೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯೆ

Suddi Udaya

ಶಿಬಾಜೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಯುವತಿ ಮನೆಗೆ ಮೆಸ್ಕಾಂ ವಿಜಿಲೆನ್ಸ್ ಎ ಡಬ್ಲ್ಯೂ ಇ ಪ್ರವೀಣ್ ಹಾಗೂ ಮೆಸ್ಕಾಂ ವಿಜಿಲೆನ್ಸ್ ಪೊಲೀಸ್ ಭೇಟಿ

Suddi Udaya
error: Content is protected !!