September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಅಂಗಡಿ ಮುಂದೆ ಕುಳಿತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ ಆರೋಪ : ಧರ್ಮಸ್ಥಳ ಪೊಲೀಸರಿಗೆ ದೂರು

ಕೊಕ್ಕಡ: ಅಂಗಡಿ ಮುಂಭಾಗದ ಜಗಲಿಯಲ್ಲಿ ಕುಳಿತ್ತಿದ್ದ ನನಗೆ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿರುವುದಾಗಿ ಆರೋಪಿಸಿ, ಕೊಕ್ಕಡ ಪಿಜಿನಡ್ಕ ನಿವಾಸಿ ಮಂಚ್ಚ ಮುಗೇರ ಅವರು ಸೆ.೧ರಂದು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ.


ಸೆ.೦೧ರಂದು ಹಳ್ಳಂಗೇರಿಯ ರಾಮಣ್ಣ ಗೌಡರ ಅಂಗಡಿ ಬಳಿ ಬರುತ್ತಿದ್ದಂತೆ ಮಳೆ ಸುರಿದಿದ್ದು, ಛತ್ರಿ ಇಲ್ಲದ ಕಾರಣ ನಾನು ಅಂಗಡಿಯ ಮುಂಭಾಗದ ಜಗಲಿಯಲ್ಲಿ ಕುಳಿತ್ತಿದ್ದು, ಈ ವೇಳೆ ಬಂದ ರಾಮಣ್ಣ ಗೌಡ ಇಲ್ಲೇಕೆ ಕುಳಿತ್ತಿದ್ದ ಎಂದು ಪ್ರಶ್ನಿಸಿ, “ನೀವು ನಿಮ್ಮ ಜಾತಿಯ ಬುದ್ದಿಯನ್ನು ಬಿಡುವುದಿಲ್ಲ ಎಂದು” ಹೇಳಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆಯ ಬಳಿಕ ಅದೇ ರಸ್ತೆಯಲ್ಲಿ ಕೆಲಸ ಬಿಟ್ಟು ಬರುತ್ತಿದ್ದ ಅವರ ಸೊಸೆ (ಮಗನ ಪತ್ನಿ) ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಬಳಿಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ದೂರು ನೀಡಲಾಗಿದೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಎಕ್ಸೆಲ್ ನ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರಿಗೆ ಗೌರವಾರ್ಪಣೆ

Suddi Udaya

ಪುದುವೆಟ್ಟು: ನಡ್ಯೇಲು ಕಾಡಾನೆ ದಾಳಿ : ಅಪಾರ ಕೃಷಿ ಹಾನಿ

Suddi Udaya

ಪಡ್ಯಾರಬೆಟ್ಟು ಕ್ಷೇತ್ರದ ಅನುವಂಶೀಕ ಆಡಳಿತ ಮೊಕ್ತೇಸರ ಜೀವಂಧರ್ ಕುಮಾರ್ ರವರಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವೇಣೂರು ಇದರ ಬೆಳ್ಳಿಹಬ್ಬ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಆರಂಬೋಡಿ ಗ್ರಾ.ಪಂ. ನ ಅಧ್ಯಕ್ಷರಾಗಿ ಪ್ರವೀಣಚಂದ್ರ ಜೈನ್ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ತೇಜಸ್ವಿನಿ

Suddi Udaya

ಓಡಿಲ್ನಾಳ: ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

Suddi Udaya

ಕುಕ್ಕೇಡಿ: ಪಟಾಕಿ ಸ್ಫೋಟ ಪ್ರಕರಣ ಸ್ಥಳ ಮತ್ತು ಹಾನಿಗೊಳಗಾದ ಮನೆಗಳಿಗೆ ಬೆಳ್ತಂಗಡಿ ಧರ್ಮಾಧ್ಯಕ್ಷರ ಭೇಟಿ

Suddi Udaya
error: Content is protected !!