30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸುವ ಉದ್ದೇಶ ಹಾಗೂ ಆದರ್ಶ ಗಣೇಶೋತ್ಸವದ ಆಚರಣೆ ಬಗ್ಗೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮಾಹಿತಿ

ಬೆಳ್ತಂಗಡಿ: ಸಾರ್ವಜನಿಕ ಗಣೇಶೋತ್ಸವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಬೆಳ್ತಂಗಡಿಯ ಪೊಲೀಸ್ ಠಾಣೆಯ ಆವರಣದಲ್ಲಿ ಠಾಣೆ ವತಿಯಿಂದ ಗಣೇಶೋತ್ಸವ ಆಯೋಜಕರೊಂದಿಗೆ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಗಣೇಶೋತ್ಸವವನ್ನು ಆಚರಿಸುವ ಉದ್ದೇಶ ಹಾಗೂ ಆದರ್ಶವಾಗಿ ಗಣೇಶೋತ್ಸವದ ಆಚರಣೆ, ಇದರ ಬಗ್ಗೆ ಮಾಹಿತಿಯನ್ನು ನೀಡಲು ಹಿಂದೂ ಜನಜಾಗೃತಿ ಸಮಿತಿಗೆ ಅವಕಾಶವನ್ನು ನೀಡಿದರು. ಸಮಿತಿಯ ಕರುಣಾಕರ ಅಭ್ಯಂಕರವರು ಮಾಹಿತಿಯನ್ನು ನೀಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತರಾಗುವುದು ಹಾಗೂ ನಮ್ಮಲ್ಲಿ ಸಂಘಭಾವ ನಿರ್ಮಾಣವಾಗುವ ಉದ್ದೇಶದಿಂದ ವೈಯಕ್ತಿಕವಾಗಿ ಆಚರಿಸುತ್ತಿದ್ದಂತಹ ಗಣೇಶ ವ್ರತವನ್ನು ಲೋಕಮಾನ್ಯ ತಿಲಕರು ಸಾರ್ವಜನಿಕ ಗಣೇಶೋತ್ಸವವನ್ನಾಗಿ ಆಚರಿಸಿದರು. ಅದು ಯಶಸ್ವಿ ಕೂಡ ಆಯಿತು. ಆದರೆ ಈಗ ಆ ಉದ್ದೇಶವು ಪೂರ್ಣತಹ ಬದಲಾಗಿದೆ. ಈಗ ಮಧ್ಯರಾತ್ರಿಯಲ್ಲಿ ಗಣಪತಿಯ ವಿಸರ್ಜನೆ, ಸಾರ್ವಜನಿಕರಿಗೆ ಕಿರಿಕಿರಿಯಾಗುವಂತಹ ಚಟುವಟಿಕೆ, ಸಾಮಾಜಿಕ ನಾಟಕಗಳು, ಅಶ್ಲೀಲ ಸಿನಿಮಾ ಹಾಡುಗಳು ಹಾಗೂ ಅವುಗಳಿಗೆ ನೃತ್ಯ, ಅಮಲು ಪದಾರ್ಥ ಸೇವನೆ, ಒತ್ತಾಯಪೂರ್ವಕ ವಸೂಲಿ. ಇವು ಎಲ್ಲವೂ ಕೂಡ ಧರ್ಮ ಬಾಹಿರವಾಗಿದೆ. ಗಣಪತಿಯ ಕೃಪೆ ದೊರಕುವ ಬದಲು ಅವಕೃಪೆಯೇ ದೊರಕುತ್ತದೆ.


ಸಾರ್ವಜನಿಕ ಗಣೇಶೋತ್ಸವ ಮಾಡುವ ಉದ್ದೇಶ, ಚಾತುರ್ಮಾಸದಲ್ಲಿ ಯಮದಿಕ್ಕಿನಿಂದ ಹೆಚ್ಚು ಅಸುರಿ ಲಹರಿಗಳು ಬರುತ್ತಿರುತ್ತದೆ. ಇದರಿಂದ ಮನುಷ್ಯನಿಗೆ ನಾನಾ ರೀತಿಯ ಮನೋವಿಕಾರಗಳು, ಕಾಯಿಲೆಗಳು, ಅಪಘಾತಗಳು, ವಿಘ್ನಗಳು ಉಂಟಾಗುತ್ತವೆ. ಇವು ವೈಜ್ಞಾನಿಕ ಸಂಶೋಧನೆಗಳಿಂದಲೂ ದೃಢಪಟ್ಟಿದೆ. ಅದಕ್ಕೋಸ್ಕರ ಈ ಸಮಯದಲ್ಲಿ ಭಗವಂತನ ಉಪಾಸನೆ, ಪೂಜೆ, ವೃತ್ತಗಳು, ಹಬ್ಬಗಳನ್ನು ಹೆಚ್ಚಾಗಿ ಆಚರಣೆ ಮಾಡ್ತಾರೆ. ಇದರಿಂದ ಅಸುರಿ ಶಕ್ತಿಗಳ ಹಲ್ಲೆಗಳಿಂದ ರಕ್ಷಣೆ ದೊರಕುತ್ತದೆ. ಹಾಗೂ ಸಮಾಜದಲ್ಲಿ ಒಂದು ಉತ್ತಮ ವಾತಾವರಣವು ನಿರ್ಮಾಣವಾಗುತ್ತದೆ. ಈ ಉದ್ದೇಶದಿಂದ ಸಾರ್ವಜನಿಕ ಹಬ್ಬಗಳನ್ನು ಆಚರಣೆ ಮಾಡುತ್ತೇವೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಗಣೇಶೋತ್ಸವದಿಂದ ಗಣಪತಿಯ ಚೈತನ್ಯವನ್ನು ಪಡೆಯಲು, ಕೃಪೆಯನ್ನು ಸಂಪಾದಿಸಲು ಯಾವ ರೀತಿ ಆಚರಿಸಬೇಕು ಎಂಬುದನ್ನು ಧರ್ಮಶಾಸ್ತ್ರಗಳು ನಮಗೆ ತಿಳಿಸಿ ಹೇಳಿವೇ. ಧರ್ಮೋ ರಕ್ಷತಿ ರಕ್ಷಿತಹ ಎಂಬಂತೆ ನಾವೆಲ್ಲರೂ ಧರ್ಮಶಾಸ್ತ್ರಗಳು ಹೇಳಿದಂತೆ ಆದರ್ಶ ಗಣೇಶೋತ್ಸವವನ್ನು ಆಚರಿಸುವ, ಧರ್ಮದ ರಕ್ಷಣೆಯನ್ನು ಮಾಡುವ ಹಾಗೂ ಉತ್ತಮ ಸಮಾಜದ ನಿರ್ಮಾಣ ಮಾಡುವ ಎಂದು ಮಾಹಿತಿಯನ್ನು ನೀಡಿದರು.

Related posts

ಕೊಕ್ಕಡ ಜಾರಿಗೆತಡಿ ನಿವಾಸಿ ಮೋನಪ್ಪ ಗೌಡ ನಿಧನ

Suddi Udaya

ಬೆಳ್ತಂಗಡಿ: ಶ್ರೀ ಧ.ಮಂ. ಆಂ.ಮಾ. ಶಾಲೆಯ ಬೇಸಿಗೆ ಶಿಬಿರಕ್ಕೆ ಚಾಲನೆ

Suddi Udaya

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಶೋಧನಾ ವಿಧಿ ವಿಧಾನಗಳ ಬಗ್ಗೆ ಕಾರ್ಯಾಗಾರ

Suddi Udaya

ಚಾರ್ಮಾಡಿಯಲ್ಲಿ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಶುಭಾರಂಭ

Suddi Udaya

ಹುಣ್ಸೆಕಟ್ಟೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷೆಯಾಗಿ ರಮಾದೇವಿ, ಉಪಾಧ್ಯಕ್ಷೆಯಾಗಿ ಶಿವಪ್ರಭಾ ಆಯ್ಕೆ

Suddi Udaya

ಸುಲ್ಕೇರಿ ಅ.ಹಿ. ಪ್ರಾ. ಶಾಲೆ, ಶ್ರೀರಾಮ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ

Suddi Udaya
error: Content is protected !!