32.2 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಇಂಡೋ ನೇಪಾಳ ಅಂತರಾಷ್ಟ್ರೀಯ ಚಾಂಪಿಯನ್‌ಶಿಪ್ ತ್ರೋಬಾಲ್ ಪಂದ್ಯಾಟ: ಕಣಿಯೂರಿನ ಯೂನಿತ್ ಕೆ. ನಾಯಕತ್ವದ ತಂಡ ಪ್ರಥಮ ಸ್ಥಾನ

ಬೆಳ್ತಂಗಡಿ: ಇಂಡೋ ನೇಪಾಳ ಅಂತರಾಷ್ಟ್ರೀಯ ಚಾಂಪಿಯನ್‌ಶಿಪ್ ತ್ರೋಬಾಲ್ ಪಂದ್ಯಾಟಕ್ಕೆ ಆಹ್ವಾನಿತ ಪುರುಷ ಮತ್ತು ಮಹಿಳಾ ಕ್ರೀಡಾ ಚಾಂಪಿಯನ್ ಶಿಪ್-2024ಕ್ಕೆ ಖೇಲೋ ಭಾರತ್ ಯೂತ್ ಗೇಮ್ಸ್ ಫೆಡರೇಶನ್ ಇಂಡಿಯಾ ತಂಡವನ್ನು ಪ್ರತಿನಿಧಿಸಿದ ಕಣಿಯೂರಿನ ಯೂನಿತ್ ಕೆ. ನಾಯಕತ್ವದ ತಂಡ ಪ್ರಥಮ ಸ್ಥಾನಗಳಿಸಿ ಹೊರ ಹೊಮ್ಮಿದೆ.

ನೇಪಾಳದ ಪೋಖರ ರಂಗಶಾಲಾದಲ್ಲಿ ಆ.31, ಸೆ.1,2ರಂದು ನಡೆದ ಪಂದ್ಯಾಟದಲ್ಲಿ ಭಾಗವಹಿಸಿದ ಪುರುಷ ಮತ್ತು ಮಹಿಳೆಯರ ಖೇಲೋ ಭಾರತ್ ಯೂತ್ ಗೇಮ್ಸ್ ಫೆಡರೇಶನ್ ಇಂಡಿಯಾ ತಂಡ ಪ್ರಥಮ ಸ್ಥಾನಗಳಿಸಿ ಜಯಶಾಲಿಯಾಗಿದೆ.

ಪುರುಷರ ತಂಡದಲ್ಲಿ ವೈಯಕ್ತಿಕ ನೆಲೆಯಲ್ಲಿ ತಂಡದ ನಾಯಕ ಕಣಿಯೂರು ಗ್ರಾಮದ ಕದ್ರಿ ನಿವಾಸಿ ರತ್ನ ಕೆ. ಮತ್ತು ಮಂಜುನಾಥ್ ಗೌಡ ದಂಪತಿಯ ಪುತ್ರ ಯೂನಿತ್ ಕೆ. ಉತ್ತಮ ಅಲ್ ರೌಂಡರ್ ಪ್ರಶಸ್ತಿ ಪಡೆದರು. ಇಳಂತಿಲ ಗ್ರಾಮದ ನೆಲ್ಲಿಪಲ್ಲಿಕೆ ನಿವಾಸಿ ಧನಂಜಯ ಗೌಡ ಮತ್ತು ಭಾರತಿ ದಂಪತಿಯ ಪುತ್ರ ರೋಹಿತ್ ಉತ್ತಮ ಎಸೆತಗಾರ ಪ್ರಶಸ್ತಿ ಮುಡಿಗೇರಿಸಿಕೊಂಡರು. ಮಡಂತ್ಯಾರಿನ ಸೇಬಾಸ್ಟಿನ್ ವೇಗಸ್ ಹಾಗೂ ಲೀನಾ ವೇಗಸ್ ದಂಪತಿಯ ಪುತ್ರ ಶಾನ್ ವೇಗಸ್ ಹಾಗೂ ಅಚ್ಚುತ ಮತ್ತು ಗಿರಿಜಾ ರವರ ಪುತ್ರ ಅವಿನಾಶ್ ಉತ್ತಮ ಪ್ರದರ್ಶನ ನೀಡಿದರು. ಪ್ರಜ್ವಲ್, ಕರಿಯಪ್ಪ, ದಿಕ್ಷೀತ್, ರವಿ ವರ್ಧನ್, ರಕ್ಷಿತ್, ಪೆಮ್ಮೆಯ್ಯ ಹಾಗೂ ದರ್ಶನ್ ತಂಡದಲ್ಲಿದ್ದರು.

ಮಿಂಚಿದ ಮಡಂತ್ಯಾರಿನ ಡಾಫ್ನಿ ವೆರೋನಿಕ: ಮಹಿಳೆಯರ ತಂಡವನ್ನು ಪ್ರತಿನಿಧಿಸಿದ ಮಡಂತ್ಯಾರಿನ ಕ್ಲೋಡ್ ಫ್ರಾನ್ಸಿಸ್ ಮಿಸ್ಕ್ಯುತ್ ಹಾಗೂ ಡಯಾನ ಮಿಸ್ಕ್ಯುತ್ ದಂಪತಿ ಪುತ್ರಿ ಡಾಫಿ ವೆರೋನಿಕ ಉತ್ತಮ ಅಲ್ ರೌಂಡ‌ರ್ ಪ್ರಶಸ್ತಿಗೆ ಭಾಜನರಾದರು. ತಂಡದ ನಾಯಕಿ ಸುಪ್ರಿಯಾ ಎಸ್.ಪಿ. ಉತ್ತಮ ಎಸೆತಗಾರ ಪ್ರಶಸ್ತಿ ಪಡೆದರು. ಇವರು ಬಂಟ್ವಾಳ ತಾಲೂಕಿನ ಕಸಬಾ ಕೆತ್ತಿಮಾರಿನ ನಿವಾಸಿ ಶೀನಾಥ್ ಸಿ. ಹಾಗೂ ಪೂರ್ಣಿಮಾ ದಂಪತಿಯ ಪುತ್ರಿ. ಸಿಂಚನ, ಭೂಮಿಕಾ, ಉಷಾ, ಭವನಾ ಹಾಗೂ ಗಾನಾವಿ ಉತ್ತಮ ಪ್ರದರ್ಶನ ನೀಡಿದರು. ಎರಡು ತಂಡಗಳಿಗೆ ಕೊಡಗಿನ ವೀರಾಜಪೇಟೆಯ ರೈಶಿಂಗ್ ಸ್ಟಾರ್ ಕೋಚಿಂಗ್ ಸೆಂಟರ್‌ನ ಶಿಬಿರದಲ್ಲಿ ತರಬೇತಿ ಪಡೆದಿದ್ದರು.

Related posts

ನಾಲ್ಕೂರು: ಪ್ರಗತಿಪರ ಕೃಷಿಕ ಬಾಲಕೃಷ್ಣ ಶೆಟ್ಟಿ ಕುರೆಲ್ಯ ನಿಧನ

Suddi Udaya

ಲಾಯಿಲ: ಪುತ್ರಬೈಲುನಲ್ಲಿ ನೂತನ ಗ್ರಂಥಾಲಯ ಉದ್ಘಾಟನೆ

Suddi Udaya

ಕೊಕ್ಕಡ: ಸೌತಡ್ಕ ಕಡೀರ ನಾಗಬನದಲ್ಲಿ ನಾಗದೇವರ ಪುನಃ ಪ್ರತಿಷ್ಠೆ, ರಕ್ತೇಶ್ವರಿ ಮತ್ತು ಕಟ್ಟೆಯಲ್ಲಿ ಪಂಜುರ್ಲಿ ದೈವಗಳ ಪ್ರತಿಷ್ಠೆ

Suddi Udaya

ದೆಹಲಿಯ ಗಣರಾಜ್ಯೋತ್ಸವ: ಉಜಿರೆ ಎಸ್.ಡಿ.ಎಂ ಎನ್.ಸಿ.ಸಿಯ 3 ಕೆಡೆಟ್‌ಗಳ ಆಯ್ಕೆ

Suddi Udaya

ವೇಣೂರು: ಮೂಡಕೋಡಿಯಲ್ಲಿ ಬಿಜೆಪಿ ಬೂತ್ ಮಟ್ಟದ ಸಭೆ

Suddi Udaya

ಮುಂಡಾಜೆ: ರೋವರ್ಸ್ ಮತ್ತು ರೇಂಜರ್ಸ್ ಘಟಕದ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭ

Suddi Udaya
error: Content is protected !!