ವೇಣೂರು: ಡಾ. ಸುಕೇಶ್ ಕುಮಾರ್ ಬಜಿರೆ ಇವರು ಡಾ. ರಾಜೇಶ್ ಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ರೋಲ್ ಆಫ್ ಕ್ವೊರಮ್ ಸೆನ್ಸಿಂಗ್ ಇನ್ ಸುಡೋಮೋನಾಸ್ ಅರಜಿನೋಸ ಅಡಾಪ್ಟ್ಯೇಷನ್ ಡ್ಯೂರಿಂಗ್ ಕ್ರಾನಿಕ್ ಒಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್” ಎಂಬ ಮಹಾಪ್ರಬಂಧಕ್ಕೆ ದೇರಳಕಟ್ಟೆಯ ಯೇನೆಪೊಯ ಪರಿಗಣಿತ ವಿಶ್ವವಿದ್ಯಾನಿಲಯವು ಫ್ಯಾಕಲ್ಟಿ ಆಫ್ ಸೈನ್ಸ್ ನಲ್ಲಿ ಪಿಎಚ್.ಡಿ ಪದವಿಯನ್ನು ನೀಡಿ ಗೌರವಿಸಿದೆ.
25ಕ್ಕೂ ಮೀರಿದ ರಿಸರ್ಚ್ ಪೇಪರ್ ಗಳನ್ನು ಇಂಟರ್ನ್ಯಾಷನಲ್ ಜರ್ನಲ್ ಗಳಲ್ಲಿ ಪ್ರಕಟಿಸಿದ ಇವರು “ಆಂಟಿ ಕ್ವೊರಮ್ ಸೆನ್ಸಿಂಗ್ ಅಂಡ್ ಆಂಟಿ ಬೈಯೋಫಿಲ್ಮ್ ಹೈಡ್ರೋಜೆಲ್ ಫಾರ್ ಟಾಪಿಕಲ್ ಅಪ್ಪ್ಲಿಕೆಶನ್ಸ್” ಎಂಬ ವಿಷಯದಲ್ಲಿ ಪೇಟೆಂಟ್ ಅನ್ನು ಹೊಂದಿದ್ದಾರೆ. ಜರ್ಮನಿಯ ಪ್ರತಿಷ್ಠಿತ ಪುರಸ್ಕಾರವಾದ EMBO ಪುರಸ್ಕಾರವೂ ಇವರಿಗೆ ಲಭಿಸಿದೆ. ಇವರು ಯುನೈಟೆಡ್ ಕಿಂಗ್ಡಮ್ ನ ಕೇಂಬ್ರಿಜ್ ಯೂನಿವರ್ಸಿಟಿ ಯಲ್ಲಿ 3 ತಿಂಗಳ ಕಾಲ ಪ್ರೊಫೆಸರ್ ಮಾರ್ಟಿನ್ ವೆಲ್ಚ್ ಅವರಿಗೆ ಸಹಯೋಗ ನೀಡಿರುತ್ತಾರೆ.
ಇವರು ಬಜಿರೆ ಹಲ್ಲಂದೋಡಿ ಶಶಿ ಕುಮಾರ್ ಇಂದ್ರ ಹಾಗೂ ಭಾರತೀ ದಂಪತಿಯ ಪುತ್ರ. ಪ್ರಸ್ತುತ ‘ಯೂನಿವರ್ಸಿಟಿ ಆಫ್ ಟೆಕ್ಸಾಸ್ ಅಟ್ ಟೈಲರ್’ ಅಮೇರಿಕಾದಲ್ಲಿ ಪೋಸ್ಟ್ ಡಾಕ್ಟೋರಲ್ ರಿಸರ್ಚ್ ಅಸೋಸಿಯೇಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.