ನಾವೂರು: ವಿಶ್ವ ಹಿಂದೂ ಪರಿಷತ್ ಇಂದಬೆಟ್ಟು-ನಾವೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 25 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.7, 8 ರಂದು ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ವೇ| ಮೂ| ಆನಂದ ಭಟ್ ರವರ ಪೌರೋಹಿತ್ಯದಲ್ಲಿ ಜರುಗಲಿದೆ.
ಸೆ.7 ರಂದು ಬೆಳಿಗ್ಗೆ 8.30 ಕ್ಕೆ ನಾವೂರು ಪೇಟೆಯಿಂದ ಇಂದಬೆಟ್ಟು ಶ್ರೀ ಅರ್ಧನಾರೀಶ್ವರ ದೇವಸ್ಥಾನಕ್ಕೆ ಭಜನೆ ಮೂಲಕ ಶ್ರೀ ಮಹಾಗಣಪತಿ ದೇವರ ಮೂರ್ತಿಯ ಮೆರವಣಿಗೆ ಮೂಲಕ ತರುವುದು. ಬೆಳಿಗ್ಗೆ 9ಕ್ಕೆ ಧ್ವಜಾರೋಹಣ, ಉತ್ಸವದ ಉದ್ಘಾಟನೆಯನ್ನು ರಾಘ್ನೇಶ್ ಸಾಲಿಯಾನ್ ನೆರವೇರಿಸಲಿದ್ದಾರೆ. ವಂದೇ ಮಾತರಂ ಪ್ರತಿಷ್ಠಾಪನೆ, ಗಣಹೋಮ, ಬೆಳಿಗ್ಗೆ 10 ಕ್ಕೆ ಭಜನಾ ಕಾರ್ಯಕ್ರಮ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಅಪರಾಹ್ನ 2.30ಕ್ಕೆ ಭಕ್ತಿಗೀತೆ ಮತ್ತು ವಂದೇ ಮಾತರಂ ಸ್ಪರ್ಧೆ, ಸಂಜೆ 6.30 ರಿಂದ ರಂಗಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ, ಸಂಜೆ 7.00ರಿಂದ ಪ್ರಖ್ಯಾತ ಹರಿಕಥಾ ಸಂಕೀರ್ತನಕಾರ ಆರ್ಯಭಟ ಪ್ರಶಸ್ತಿ ಪುರಸ್ಕೃತ ಕಲಾಸಾರಥಿ ತೋನ್ಸೆ ಪುಷ್ಕಳ ಕುಮಾರ್ ಇವರಿಂದ ಸ್ಯಮಂತಕೋಪಾಖ್ಯಾನ ಕಥಾ ಕೀರ್ತನ ನಡೆಯಲಿದೆ.
ಸೆ.8 ರಂದು ಬೆಳಿಗ್ಗೆ ಗಂಟೆ 9.00ಕ್ಕೆ ವಿವಿಧ ಭಜನಾ ತಂಡಗಳಿಂದ ಕಮ್ಮಟ ಭಜನೆ, ಬೆಳಿಗ್ಗೆ 11.00ಕ್ಕೆ ಧಾರ್ಮಿಕ ಸಭೆ ಹಾಗೂ ಕ್ರೀಡಾಕೂಟದ ಬಹುಮಾನ ವಿತರಣೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ರಂಗಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ, ಅಪರಾಹ್ನ 3 ರಿಮದ ಕುಣಿತ ಭಜನೆ ಹುಲಿವೇಷ ಕುಣಿತ, ಗೊಂಬೆ ಕುಣಿತ, ಸ್ತಬ್ಧ ಚಿತ್ರ ಸಹಿತ ಶ್ರೀ ಮಹಾಗಣಪತಿ ದೇವರ ಶೋಭಾಯಾತ್ರೆ ನಡೆಯಲಿದೆ.