ತಣ್ಣೀರುಪಂಥ ವಲಯ ಮತ್ತು ಜನಜಾಗೃತಿ ವೇದಿಕೆ ವತಿಯಿಂದ ಕರಾಯ ಸ. ಪ್ರೌ. ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ತಣ್ಣೀರುಪಂಥ: ಶ್ರೀ ಕ್ಷೇತ್ರ. ದ.ಗ್ರಾ.ಯೋಜನೆ ತಣ್ಣೀರುಪಂಥ ವಲಯ ಮತ್ತು ಜನಜಾಗೃತಿ ವೇದಿಕೆ ತಣ್ಣೀರುಪಂಥ ವಲಯ ವತಿಯಿಂದ ಸರಕಾರಿ ಪ್ರೌಢ ಶಾಲೆ ಕರಾಯ ಇಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಬಸವಲಿಂಗಪ್ಪ ದೀಪ ಬೆಳಗಿಸಿ ಉದ್ಘಾಟಿಸಿದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ) ಶಿಬಿರಾಧಿಕಾರಿ ದೇವಿಪ್ರಸಾದ್ ಇವರು ದುಶ್ಚಟ ಮುಕ್ತ ಸಮಾಜದಲ್ಲಿ ವಿದ್ಯಾರ್ಥಿ ಪಾತ್ರ ಪ್ರಮುಖ ಎಂದರು. ಪ್ರಸ್ತುತ ವಿದ್ಯಾಮಾನದಲ್ಲಿ ದುರಭ್ಯಾಸ ಬಲಿಯಾಗುತ್ತಿರುವುದು ವಿಪರ್ಯಾಸ ಎಂದರು. ಗೂಡ0ಗಡಿ ಅನ್ನೋದು ಅದು ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುವ ಕೇಂದ್ರ ಇಲ್ಲಿಯೇ ದುಶ್ಚಟ ಕಲಿಯಲು ಮೂಲ ಇದರಿಂದ ದೂರ ಇರಲು ಎಚ್ಚರದ ಸಂದೇಶದ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕರಾಯ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಅನಂತ ಕೃಷ್ಣಕುದ್ದಾಣ್ಣಾಯ… ಹಿರಿಯ ಶಿಕ್ಷಕರಾದ ಶಿವಬಾಳು, ಸಹಶಿಕ್ಷಕರು, ವಲಯದ ಮೇಲ್ವಿಚಾರಕರು ಮತ್ತು ಸೇವಾಪ್ರತಿನಿಧಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Comment

error: Content is protected !!