ಸೆ.6-7-8 : ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಬೆಳ್ತಂಗಡಿ ತಾಲೂಕು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ 27ನೇ ವರ್ಷದ ಸಾಮೂಹಿಕ ಗೌರಿ ಪೂಜೆ ಮತ್ತು ಶ್ರೀ ಗಣೇಶೋತ್ಸವ

Suddi Udaya

ಬೆಳ್ತಂಗಡಿ : ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ, ಬೆಳ್ತಂಗಡಿ ತಾಲೂಕು ಸಾರ್ವಜನಿಕ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ, ಬ್ರಹ್ಮಶ್ರೀ ಶಿರೋಮಣಿ ಶ್ರೀ ಕೆ.ಎಸ್. ನಿತ್ಯಾನಂದ ಗುರುಗಳ ಮಾರ್ಗದರ್ಶನದಲ್ಲಿ ಸೆ.6 ರಿಂದ 8ರ ವರೆಗೆ 27ನೇ ವರ್ಷದ ಸಾಮೂಹಿಕ ಗೌರಿ ಪೂಜೆ ಮತ್ತು ಶ್ರೀ ಗಣೇಶೋತ್ಸವು ಶ್ರೀ ಕ್ಷೇತ್ರ ತಿಮರೋಡಿ’ ಕುಂಜರ್ಪ ವಠಾರ ಉಜಿರೆಯಲ್ಲಿ ಜರಗಲಿರುವುದು.

ಸೆ.6ರಂದು ಬೆಳಿಗ್ಗೆ ಸಾಮೂಹಿಕ ಗೌರಿ ಪೂಜೆ ಪ್ರಾರಂಭ, ಮಧ್ಯಾಹ್ನ ಮಹಾಪೂಜೆ ನಂತರ ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ.ಸೆ.7ರಂದು ಬೆಳಿಗ್ಗೆ ಗಣಪತಿ ಮೂರ್ತಿ ಪ್ರತಿಷ್ಠೆ, ಗಣಹೋಮ, ತಾಲೂಕಿನ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ಡ್ರೀಮ್ ಝೋನ್ ಡ್ಯಾನ್ಸ್ ಕ್ಲೀವ್ ಇವರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ, ಸಾಯಂಕಾಲ ಭಜನಾ ಕಾರ್ಯಕ್ರಮ, ಸಂಜೆ ಮಹಾಪೂಜೆ, ಸಾಮ ಪಾರಾಯಣ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನರೇಶ್ ಕುಮಾರ್ ಸಸಿಹಿತ್ಲು ನಿರ್ದೇಶನದ ಶ್ರೀ ದುರ್ಗಾ ಕಲಾವಿದರು ಹೊಯಿಗೆಗುಡ್ಡೆ ಕಲಾವಿದರಿಂದ ಬಿತ್ತ್ ಲ್ದ ಉಳ್ಳಾಲ್ತಿ ಅಪ್ಪೆ ಭಗವತಿ ನಾಟಕ ನಡೆಯಲಿದೆ.

ಸೆ.8ರಂದು ಬೆಳಿಗ್ಗೆ 1008 ತೆಂಗಿನಕಾಯಿಗಳ ಮೂಡು ಗಣಪತಿ ಸೇವೆ, ಶ್ರೀಮತಿ ಸುಮಾ ಎಲ್.ಎನ್. ಶಾಸ್ತ್ರಿ ಇವರಿಂದ ಸಾಮವೇದ, ಧಾರ್ಮಿಕ ಸಭಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪೃಥ್ವಿ ಮೆಲೋಡಿಸ್ ಮುಂಡಾಜೆ ತಂಡದಿಂದ ಭಕ್ತಿ ರಸಮಂಜರಿ, ಜಿಲ್ಲೆಯ ಪ್ರಖ್ಯಾತ ಭಾಗವತರ ಸ್ವರ ಅನುಕರಣೆ ಮತ್ತು ನೃತ್ಯ ವೈಭವ, ಸಾಯಂಕಾಲ ಭಜನಾ ಕಾರ್ಯಕ್ರಮ, ಮಹಾಪೂಜೆ, ಸಂಜೆ ವಿಘ್ನ ವಿನಾಶಕನ ವರ್ಣರಂಜಿತ ಶೋಭಾಯಾತ್ರೆ ಪ್ರಾರಂಭ, ರಾತ್ರಿ ಉಜಿರೆ ಪೇಟೆಯಲ್ಲಿ ಫ್ರೆಂಡ್ಸ್ ಮೆಲೋಡಿಸ್ ಉಡುಪಿ ಇವರಿಂದ ಭಕ್ತಿ ರಸಮಂಜರಿ, ಶೋಭಾಯಾತ್ರೆಯ ಸಮಯದಲ್ಲಿ ಭಜನಾ ತಂಡಗಳಿಂದ ಭಜನೆ, ಚೆಂಡೆ, ನಾಸಿಕ್ ಬ್ಯಾಂಡ್, ಟ್ಯಾಬ್ಲೋ, ಕೀಲುಕುದುರೆ, ಸುಡುಮದ್ದು ಪ್ರದರ್ಶನ ನಡೆಯಲಿದೆ.

Leave a Comment

error: Content is protected !!