April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸೆ.7-9: ಲಾಯಿಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ 36ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

ಲಾಯಿಲ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಲಾಯಿಲ ಬಲಮುರಿ ಕ್ಷೇತ್ರ ಇದರ ವತಿಯಿಂದ 36ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸೆ.7ರಿಂದ ಸೆ.9ರವರೆಗೆ ಲಾಯಿಲ ವಿಘ್ನೇಶ್ವರ ಕಲಾಮಂದಿರದಲ್ಲಿ ನಡೆಯಲಿದೆ.

ಸೆ.7ರಂದು ಬೆಳಿಗ್ಗೆ 108 ಕಾಯಿ ಗಣಪತಿ ಹವನ, ಪೂರ್ಣಾಹುತಿ, ಸಂಜೆ 5 ರಿಂದ ಶ್ರೀ ಶಾರದಾ ಅಂಧರ ಗೀತಗಾಯನ ಕಲಾ ಸಂಘ ಮಂಗಳೂರು ಇವರಿಂದ ಜನಪದ ಗೀತೆ ಹಾಗೂ ಭಕ್ತಿರಸಮಂಜರಿ, ರಾತ್ರಿ 8ರಿಂದ ಕರ್ನೋಡಿ ಮತ್ತು ಪಡ್ಲಾಡಿ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ, ಸೆ.8ರಂದು ಸಂಜೆ 6ರಿಂದ ಸಾಧನಾ ಕಲಾ ತಂಡ ಲಾಯಿಲ ಇವರಿಂದ “ಶ್ರೀ ಕೃಷ್ಣ ಪಾರಿಜಾತ ನರಕಾಸುರ ಮೋಕ್ಷ” ಯಕ್ಷಗಾನ, ರಾತ್ರಿ 9ರಿಂದ ಓಂ ಶಕ್ತಿ ಗೆಳೆಯರ ಬಳಗ ಲಾಯಿಲ ಇವರ ವತಿಯಿಂದ “ಬೈರಾಸ್ ಭಾಸ್ಕರೆ” ತುಳು ಹಾಸ್ಯಮಯ ನಾಟಕ ನಡೆಯಲಿದೆ.

ಸೆ.9ರಂದು ಮಧ್ಯಾಹ್ನ ಕರ್ನೋಡಿ, ಪಡ್ಲಾಡಿ, ಪುತ್ರಬೈಲು, ಹಂದೆವೂರು ಹಾಗೂ ಕನ್ನಾಜೆ ಅಂಗನವಾಡಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಸಂಜೆ ವಿವಿಧ ಭಜನಾ ತಂಡಗಳಿಂದ ಪ್ರತಿದಿನ ಭಜನಾ ಕಾರ್ಯಕ್ರಮ ಹಾಗೂ ಪ್ರತಿದಿನ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

Related posts

ನಿಟ್ಟಡೆ: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳ ತರಬೇತಿ

Suddi Udaya

ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Suddi Udaya

ನಿಟ್ಟಡೆ ಕುಂಭಶ್ರೀ ಆಂ.ಮಾ. ಶಾಲಾ ಕಾಲೇಜಿನಲ್ಲಿ ಯೋಗ ದಿನಾಚರಣೆ

Suddi Udaya

ಲಾಯಿಲ ಗ್ರಾಮೀಣ ಶ್ರೇಷ್ಠತಾ ಕೇಂದ್ರದಲ್ಲಿ ಕೂಸಿನ ಮನೆಯ ನಿರ್ವಾಹಕರಿಗೆ 7 ದಿನಗಳ ತರಬೇತಿ ಕಾರ್ಯಾಗಾರ ಆರಂಭ

Suddi Udaya

ಕಾಜೂರು ಮಖಾಂ ಉರೂಸ್ ; ತಾಜುಲ್ ಉಲಮಾ ಸನ್ನಿಧಿಯಿಂದ ಪ್ರಚಾರಕ್ಕೆ ಚಾಲನೆ

Suddi Udaya

ದ.ಕ. ಜಿಲ್ಲೆಯಲ್ಲಿ ವ್ಯಾಪಕ ಮಳೆ ಹಿನ್ನಲೆ: ಜು.25: ಎಲ್ಲಾ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Suddi Udaya
error: Content is protected !!