ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸೆ.7-9: ಲಾಯಿಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ 36ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

ಲಾಯಿಲ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಲಾಯಿಲ ಬಲಮುರಿ ಕ್ಷೇತ್ರ ಇದರ ವತಿಯಿಂದ 36ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸೆ.7ರಿಂದ ಸೆ.9ರವರೆಗೆ ಲಾಯಿಲ ವಿಘ್ನೇಶ್ವರ ಕಲಾಮಂದಿರದಲ್ಲಿ ನಡೆಯಲಿದೆ.

ಸೆ.7ರಂದು ಬೆಳಿಗ್ಗೆ 108 ಕಾಯಿ ಗಣಪತಿ ಹವನ, ಪೂರ್ಣಾಹುತಿ, ಸಂಜೆ 5 ರಿಂದ ಶ್ರೀ ಶಾರದಾ ಅಂಧರ ಗೀತಗಾಯನ ಕಲಾ ಸಂಘ ಮಂಗಳೂರು ಇವರಿಂದ ಜನಪದ ಗೀತೆ ಹಾಗೂ ಭಕ್ತಿರಸಮಂಜರಿ, ರಾತ್ರಿ 8ರಿಂದ ಕರ್ನೋಡಿ ಮತ್ತು ಪಡ್ಲಾಡಿ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ, ಸೆ.8ರಂದು ಸಂಜೆ 6ರಿಂದ ಸಾಧನಾ ಕಲಾ ತಂಡ ಲಾಯಿಲ ಇವರಿಂದ “ಶ್ರೀ ಕೃಷ್ಣ ಪಾರಿಜಾತ ನರಕಾಸುರ ಮೋಕ್ಷ” ಯಕ್ಷಗಾನ, ರಾತ್ರಿ 9ರಿಂದ ಓಂ ಶಕ್ತಿ ಗೆಳೆಯರ ಬಳಗ ಲಾಯಿಲ ಇವರ ವತಿಯಿಂದ “ಬೈರಾಸ್ ಭಾಸ್ಕರೆ” ತುಳು ಹಾಸ್ಯಮಯ ನಾಟಕ ನಡೆಯಲಿದೆ.

ಸೆ.9ರಂದು ಮಧ್ಯಾಹ್ನ ಕರ್ನೋಡಿ, ಪಡ್ಲಾಡಿ, ಪುತ್ರಬೈಲು, ಹಂದೆವೂರು ಹಾಗೂ ಕನ್ನಾಜೆ ಅಂಗನವಾಡಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಸಂಜೆ ವಿವಿಧ ಭಜನಾ ತಂಡಗಳಿಂದ ಪ್ರತಿದಿನ ಭಜನಾ ಕಾರ್ಯಕ್ರಮ ಹಾಗೂ ಪ್ರತಿದಿನ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

Related posts

ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ನಲ್ಲಿ ಭಜನಾ ಕಾರ್ಯಕ್ರಮ

Suddi Udaya

ಧರ್ಮಸ್ಥಳದಲ್ಲಿ ರಾಜ್ಯಾದ್ಯಂತ ಶುದ್ಧಗಂಗಾ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೇರಕರಿಗೆ ಮಾರ್ಗದರ್ಶನ

Suddi Udaya

ಧರ್ಮಸ್ಥಳ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಅಳದಂಗಡಿಯಲ್ಲಿ Vakrangee ಯುಪಿಐ ಮಿನಿ ಎಟಿಎಂ ಕೇಂದ್ರ ಶುಭಾರಂಭ

Suddi Udaya

ಗುರುವಾಯನಕೆರೆ: ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವದ ಪ್ರಯುಕ್ತ ಭಜನ್ ಸಂಧ್ಯಾ ಕಾರ್ಯಕ್ರಮ

Suddi Udaya

ಬಳ್ಳಾಲರಾಯನ ದುರ್ಗಕ್ಕೆ ಚಾರಣಕ್ಕೆ ಬಂದು ನಾಪತ್ತೆಯಾಗಿದ್ದ ಯುವಕ ಕಾಡಿನಲ್ಲಿ ಪತ್ತೆ

Suddi Udaya
error: Content is protected !!