24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪುದುವೆಟ್ಟು: ನಡ್ಯೇಲು ಕಾಡಾನೆ ದಾಳಿ : ಅಪಾರ ಕೃಷಿ ಹಾನಿ

ಪುದುವೆಟ್ಟು ಗ್ರಾಮದ ನಡ್ಯೇಲು ಎಂಬಲ್ಲಿ ಕಳೆದ ನಾಲ್ಕು ದಿನಗಳಿಂದ ಕಾಡಾನೆಯು ಓಡಾಡುತ್ತಿದ್ದು ಸೆ.5 ರಂದು ರಾತ್ರಿ ಕಾಡಾನೆಯು ಗದ್ದೆಗಳಿಗೆ ಹಾಗೂ ತೋಟಗಳಿಗೆ ನುಗ್ಗಿ ಅಪಾರ ಕೃಷಿ ಹಾನಿ ಮಾಡಿದ ಘಟನೆ ನಡೆದಿದೆ.

ಕಳೆದ ನಾಲ್ಕು ದಿನಗಳಿಂದ ಕಾಡಾನೆಯು ಪರಿಸರದಲ್ಲಿ ಓಡಾಡುತ್ತಿದ್ದು ಅಪಾರ ಕೃಷಿ ಹಾನಿ ಮಾಡಿದೆ. ನಡ್ಯೇಲು ನಾರಾಯಣ ಗೌಡ ರವರ ಗದ್ದೆಗೆ ನುಗ್ಗಿ ಭತ್ತದ ಗಿಡ, ತೆಂಗಿನ ಗಿಡಗಳು ಹಾಗೂ ಸುಂದರ ಗೌಡರವರ ತೋಟಕ್ಕೆ ನುಗ್ಗಿ ಬಾಳೆ ಗಿಡ, ಅಡಿಕೆ ಗಿಡಗಳಿಗೆ ಹಾನಿ ಮಾಡಿದೆ.

ಸ್ಥಳಕ್ಕೆ ಪುದುವೆಟ್ಟು ಗ್ರಾ.ಪಂ ಅಧ್ಯಕ್ಷೆ ಅನಿತಾ, ಅರಣ್ಯ ಅಧಿಕಾರಿ ರವಿಚಂದ್ರನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಅರಣ್ಯಾಧಿಕಾರಿ, ಇಂದು(ಸೆ.6) ರಾತ್ರಿ ನಾಲ್ವರು ಅರಣ್ಯ ಅಧಿಕಾರಿಗಳು, ಹಾಗೂ ಊರಿನ ಗ್ರಾಮಸ್ಥರು ಸೇರಿ ಆನೆಯನ್ನು ಕಾಡಿಗೆ ಬೆನ್ನಟ್ಟುವ ಬಗ್ಗೆ ತಿಳಿಸಿದರು.

Related posts

ಕಳಿಯ: ಬಾಕಿಮಾರು ನಿವಾಸಿ ಶ್ರೀಮತಿ ರುಕ್ಮಿಣಿ ನಿಧನ

Suddi Udaya

ಕಲ್ಲೇರಿಯಲ್ಲಿ ಜನಔಷಧಿ ಕೇಂದ್ರ ಶುಭಾರಂಭ

Suddi Udaya

ಗೇರುಕಟ್ಟೆ: ಇರೋಲು ವ್ಯಾಪಾರಿ ನೇಣುಬಿಗಿದು ಆತ್ಮಹತ್ಯೆ

Suddi Udaya

ಜೈನ ಮುನಿ ಹತ್ಯೆ ಪ್ರಕರಣ ಸೂಕ್ತ ಕ್ರಮ ಕೈಗೊಳ್ಳುವಂತೆ ದಿನೇಶ್ ಗುಂಡೂರಾವ್ ರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ

Suddi Udaya

ಸಿಯೋನ್ ಆಶ್ರಮದಲ್ಲಿ ಉಚಿತ ಶ್ರವಣದೋಷ ತಪಾಸಣಾ ಶಿಬಿರ

Suddi Udaya

ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ವತಿಯಿಂದ ಸ್ವಚ್ಛಾಲಯ ಅಭಿಯಾನ

Suddi Udaya
error: Content is protected !!