37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವಾಣಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಮೋಹನ್ ಗೌಡ, ಉಪಾಧ್ಯಕ್ಷರಾಗಿ ಶ್ರೀಮತಿ ಲತಾ ಶೆಟ್ಟಿ ಆಯ್ಕೆ

ಬೆಳ್ತಂಗಡಿ: ವಾಣಿ ಆಂಗ್ಲ ಮಾಧ್ಯಮ ಶಾಲೆಯ 2024-25 ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಸರ್ವಾನುಮತದಿಂದ ಮೋಹನ್ ಗೌಡ ಇವರನ್ನು ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಲತಾ ಶೆಟ್ಟಿ ಇವರನ್ನು ಆರಿಸಲಾಯಿತು.

ವಾಣಿ ವಿದ್ಯಾಸಂಸ್ಥೆಯ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ರವರು ಅಧ್ಯಕ್ಷತೆ ವಹಿಸಿದ್ದರು. ವಾಣಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಗಣೇಶ್ ಗೌಡ ನೋಟರಿ, ವಕೀಲರು ಬೆಳ್ತಂಗಡಿ ಹಾಗೂ ಆಡಳಿತಾಧಿಕಾರಿ ಪ್ರಸಾದ್ ಕುಮಾರ್, 2023-24ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶಿವರಾಮ್ ಹೆಗ್ಡೆ, ಪ್ರೌಢ ಶಾಲಾ ಮುಖ್ಯೋಪಾದ್ಯಾಯರಾದ ಲಕ್ಷ್ಮೀನಾರಾಯಣ ಕೆ. ಹಾಗೂ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಹಾಸಿನಿ ಇವರು ಉಪಸ್ಥಿತರಿದ್ದರು.

ಆಯ್ಕೆ ಪ್ರಕ್ರಿಯೆಯನ್ನು ವಾಣಿ ಪ್ರೌಢ ಶಾಲಾ ಶಿಕ್ಷಕಿ ಶ್ರೀಮತಿ ಮೊಹನಾಂಗಿ ನಿರ್ವಹಿಸಿದರು. ಶಿಕ್ಷಕಿ ಶ್ರೀಮತಿ ರಕ್ಷಿತಾ. ಎಸ್ ಕಾರ್ಯಕ್ರಮವನ್ನು ನಿರ್ವಹಿಸಿದರು.

Related posts

ಕಣಿಯೂರು ದ.ಕ. ಜಿ.ಪ. ಸ.ಉ. ಹಿ. ಪ್ರಾ. ಶಾಲೆಗೆ ಸೀನಿಯರ್ ಮಂಜುಶ್ರೀ ಜೆಸಿಸ್ ಯಿಂದ ಸಹಾಯಧನ

Suddi Udaya

ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಪುನರ್ ಪ್ರತಿಷ್ಟಾಬಂಧ ಬ್ರಹ್ಮಕಲಶೋತ್ಸವ: ಕೊಯ್ಯೂರು, ಕಳಿಯ, ನ್ಯಾಯತರ್ಪು, ಮತ್ತು ನಾಳ ಭಕ್ತಾದಿಗಳಿಂದ ಹಸಿರು ವಾಣಿ ಸಮರ್ಪಣೆ

Suddi Udaya

ಜು.24 ರಂದು ಬೆಳ್ತಂಗಡಿ ರಾಜಕೇಸರಿ ಸಂಘಟನೆ ವತಿಯಿಂದ ಆಟಿ ಅಮಾವಾಸ್ಯೆ ಆಚರಣೆ : ಪತ್ರಿಕಾಗೋಷ್ಠಿ

Suddi Udaya

ಫೆ.12-13: ಮುಂಡೂರು ಶ್ರೀ ನಾಗಕಲ್ಲುರ್ಟಿ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ

Suddi Udaya

ಕೊಕ್ರಾಡಿ: ಹೇರ್ದಂಡಿ ಬಾಕ್ಯಾರು ಗರಡಿಗೆ ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜ ಭೇಟಿ,

Suddi Udaya

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಗೂಡ್ಸ್ ಟೆಂಪೋ

Suddi Udaya
error: Content is protected !!