ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಫೆ.12-13: ಮುಂಡೂರು ಶ್ರೀ ನಾಗಕಲ್ಲುರ್ಟಿ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ

ಮುಂಡೂರು: ಮುಂಡೂರು ಶ್ರೀ ನಾಗಕಲ್ಲುರ್ಟಿ ದೈವಸ್ಥಾನ ಶ್ರೀ ಕ್ಷೇತ್ರ ಮಂಗಳಗಿರಿಯಲ್ಲಿ ಶ್ರೀ ದೇವಿ ನಾಗಾಂಬಿಕಾ ಅಮ್ಮನವರ ಉತ್ಸವ ಬಲಿ ಮತ್ತು ಶ್ರೀ ವರಾಹಿ, ಮಂತ್ರಮೂರ್ತಿ, ನಾಗಕಲ್ಲುರ್ಟಿ ಶಕ್ತಿದೇವತೆ, ಕೊರಗಜ್ಜ ಮತ್ತು ಶ್ರೀ ಗುಳಿಗರಾಜ ದೈವಗಳ ಕಾಲಾವಧಿ ನೇಮೋತ್ಸವವು ಫೆ.12 ಮತ್ತು ಫೆ.13 ರಂದು ಜರುಗಲಿದೆ ಎಂದು ಆಡಳಿತ ಮೊಕ್ತೇಸರ ರಾಜೀವ ಅವರು ತಿಳಿಸಿದ್ದಾರೆ.


ಫೆ.12 ರಂದು ಬೆಳಿಗ್ಗೆ ಗಣಹೋಮ, ನಾಗಬ್ರಹ್ಮ ದೇವರಿಗೆ ತನುತಂಬಿಲ, ಆಶ್ಲೇಷಬಲಿ, ದೈವಗಳಿಗೆ ಪಂಚಪರ್ವ, ರಾತ್ರಿ ಶ್ರೀ ನಾಗಾಂಬಿಕಾ ಭಜನಾ ಮಂಡಳಿಯವರಿಂದ ಕುಣಿತ ಭಜನೆ. ಬಳಿಕ ಉದ್ಭವ ಗಣಪತಿ ದೇವರಿಗೆ ಹಾಗೂ ಶ್ರೀನಾಗಾಂಬಿಕಾ ಅಮ್ಮನವರಿಗೆ ಜೋಡುರಂಗಪೂಜೆ ನಡೆಯಲಿದೆ. ಫೆ.೧೩ರಂದು ಬೆಳಿಗ್ಗೆ ರುದ್ರಯಾಗ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ ಶ್ರೀ ದೇವಿ ನಾಗಾಂಬಿಕಾ ಅಮ್ಮನವರ ಉತ್ಸವ ಬಲಿ. ಶ್ರೀ ನಾಗಾಂಬಿಕಾ ಭಜನಾ ಮಂಡಳಿಯವರಿಂದ ಕುಣಿತ ಭಜನೆ ರಾತ್ರಿ ಭಂಡಾರ ಇಳಿಯುವುದು, ದೈವಗಳ ಶ್ರೀ ನಾಗಾಂಬಿಕಾ ಅಮ್ಮನವರ ಭೇಟಿ, ನಂತರ ದೈವಗಳ ನೇಮೋತ್ಸವ, ಕೊರಗಜ್ಜ ಕೋಲ, ಮರುದಿನ ಬೆಳಿಗ್ಗೆ ಗುಳಿಗ ದೈವದ ಕೋಲ ಜರುಗಲಿದೆ ಎಂದು ತಿಳಿಸಿದ್ದಾರೆ.

Related posts

ಧರ್ಮಸ್ಥಳ: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

Suddi Udaya

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ..ಹಿ.ಪ್ರಾ. ಶಾಲಾ ಸಂಸತ್ತು ರಚನೆ

Suddi Udaya

ಕಳೆಂಜ ದೇವಸ್ಥಾನದಲ್ಲಿ ಬೃಹತ್ ನೇಜಿ ನಾಟಿ ಕಾರ್ಯಕ್ರಮ

Suddi Udaya

ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ತಿಂಗಳ ಸಭೆ ಹಾಗೂ ಆಟಿಡ್ ಒಂಜಿ ವಿಶೇಷ ತಿನಸ್

Suddi Udaya

ಕಾಜೂರು ರಹ್ಮಾನಿಯ್ಯ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತರ್

Suddi Udaya

17 ವರ್ಷಗಳಿಂದ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬೆಳ್ತಂಗಡಿ ಸಂತೆಕಟ್ಟೆ ಬಳಿ ಬಂಧನ

Suddi Udaya
error: Content is protected !!