ವಿಶ್ವ ಹಿಂದೂ ಪರಿಷತ್ ಇಂದಬೆಟ್ಟು -ನಾವೂರು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ:ನಾವೂರು ಪೇಟೆಯಿಂದ ಇಂದಬೆಟ್ಟು ದೇವಸ್ಥಾನಕ್ಕೆ ಭಜನೆ ಮೂಲಕ ಶ್ರೀ ಮಹಾಗಣಪತಿ ದೇವರ ಮೂರ್ತಿಯ ವೈಭವದ ಮೆರವಣಿಗೆ

Suddi Udaya

ನಾವೂರು : ವಿಶ್ವ ಹಿಂದೂ ಪರಿಷತ್ ಇಂದಬೆಟ್ಟು -ನಾವೂರು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ವು ಇಂದಬೆಟ್ಟು ಶ್ರೀ ಅರ್ಧನಾರೀಶ್ವರ ದೇವಸ್ಥಾನದ ವಠಾರದಲ್ಲಿ ಸೆ. 7 ಹಾಗೂ ಸೆ. 8ರಂದು ಜರುಗಲಿದೆ.

ಸೆ. 7ರಂದು ನಾವೂರು ಪೇಟೆಯಿಂದ ಇಂದಬೆಟ್ಟು ದೇವಸ್ಥಾನಕ್ಕೆ ಭಜನೆ ಮೂಲಕ ಶ್ರೀ ಮಹಾಗಣಪತಿ ದೇವರ ಮೂರ್ತಿಯ ಮೆರವಣಿಗೆ ನಡೆಯಿತು.

ಉತ್ಸವದ ಉದ್ಘಾಟನೆಯನ್ನು ಬೆಳ್ತಂಗಡಿಯ ಉದ್ಯಮಿ ರಾಗ್ನೇಶ್ ಸಾಲಿಯಾನ್ ನೆರವೇರಿಸಿದರು.

ನಂತರ ನಡೆದ ಸಭೆಯ ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರೊ. ಸುಮಂತ್ ಕುಮಾರ್ ಜೈನ್ ಬೆಳ್ಳೂರುಗುತ್ತು ವಹಿಸಿದ್ದರು. ವೇದಿಕೆಯಲ್ಲಿ ಉದ್ಯಮಿ ರಾಗ್ನೇಶ್ ಸಾಲಿಯಾನ್, ಸಮಿತಿ ಗೌರವಾಧ್ಯಕ್ಷ ಡಾ. ಪ್ರದೀಪ್ ಎ. ನಾವೂರು, ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅಧ್ಯಕ್ಷ ಹರೀಶ್ ಸಾಲಿಯನ್, ಇಂದಬೆಟ್ಟು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಂಜೀವ ಗೌಡ ಮನ್ನಡ್ಕ, ನಾವೂರು ವಿ. ಹಿಂ. ಪರಿಷತ್ ಅಧ್ಯಕ್ಷ ವಿಜಯ ಹೊಡಿಕ್ಕಾರು ಉಪಸ್ಥಿತರಿದ್ದರು.

ಸಮಿತಿ ಪ್ರ. ಕಾರ್ಯದರ್ಶಿ ಗಣೇಶ್ ಗೌಡ ನೆಲ್ಲಿಪಲ್ಕೆ ನಾವೂರು ಸ್ವಾಗತಿಸಿದರು. ವಿನೋದ್ ಕಲ್ಲಾಜೆ ಧನ್ಯವಾದವಿತ್ತರು. ಸತೀಶ್ ಮನ್ನಡ್ಕ ಕಾರ್ಯಕ್ರಮ ನಿರೂಪಿಸಿದರು.

ಗೋವಿಗಾಗಿ ನಿಧಿ ಸಂಗ್ರಹಣೆಗೆ ಚಾಲನೆ:
ಇದೇ ಸಂಧರ್ಭ ಕಳೆಂಜ ನಂದಗೋಕುಲ ಗೋಶಾಲೆಗೆ ಗೋವಿಗಾಗಿ ನಿಧಿ ಸಂಗ್ರಹಣೆಗೆ ಚಾಲನೆ ನೀಡಲಾಯಿತು.

Leave a Comment

error: Content is protected !!