23.7 C
ಪುತ್ತೂರು, ಬೆಳ್ತಂಗಡಿ
May 19, 2025
ಧಾರ್ಮಿಕ

ವಿಶ್ವಹಿಂದೂ ಪರಿಷದ್ ಇಂದಬೆಟ್ಟು-ನಾವೂರು, ಸಾರ್ವಜನಿಕ ಗಣೇಶೋತ್ಸವ ಸಮಿವಿಇದರ ವತಿಯಿಂದ 25ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ : 25ನೇ ವಷ೯ದ ಅಧ್ಯಕ್ಷ ಸೇರಿದಂತೆ 24 ಮಂದಿ ಮಾಜಿ ಅಧ್ಯಕ್ಷರುಗಳಿಗೆ ಸಮಿತಿಯಿಂದ ಗೌರವಾ೯ಣೆ

ಹಿಂದೂ ಧಾರ್ಮಿಕ ಉತ್ಸವಗಳ ಆಚರಣೆ ಹಿಂದೆ ನಮ್ಮ ನೆಲ, ಸಂಸ್ಕೃತಿ, ಪರಂಪರೆಯ ತತ್ವಗಳು ಅಡಗಿದೆ: ಕೇಶವ ಬಂಗೇರ

ಇಂದಬೆಟ್ಟು: ರಾಷ್ಟ್ರೀಯತೆ, ಸ್ವರಾಷ್ಟ್ರ ಕಲ್ಪನೆ, ಸ್ವಧಮ೯ ಸಂರಕ್ಷಣೆಗಾಗಿ ಬಾಲಗಂಗಾಧರ ತಿಲಕ್ ಸಾವ೯ಜನಿಕವಾಗಿ ಗಣೇಶೋತ್ಸವ ಆಚರಣೆಗೆ ತಂದರು. ನಮ್ಮ ಧಾರ್ಮಿಕ

ಉತ್ಸವಗಳ ಆಚರಣೆ ಹಿಂದೆ ನಮ್ಮ ನೆಲ, ಸಂಸ್ಕೃತಿ, ಪರಂಪರೆಯ ತತ್ವಗಳು ಅಡಗಿದೆ ಎಂದು ಶ್ರೀಗೋಕರ್ಣನಾಥೇಶ್ವರ ಕಾಲೇಜು ಕುದ್ರೋಳಿಯ ಉಪನ್ಯಾಸಕ ಕೇಶವ ಬಂಗೇರ ಹೇಳಿದರು.

ಅವರು ಸೆ.8ರಂದು ವಿಶ್ವಹಿಂದೂ ಪರಿಷದ್ ಇಂದಬೆಟ್ಟು-ನಾವೂರು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಇದರ ವತಿಯಿಂದ ಇಂದಬೆಟ್ಟು ದೇವಸ್ಥಾನದ ವಠಾರದಲ್ಲಿ ನಡೆದ ೨೫ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾಗಿ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ, ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರಣ್ ವರ್ಮ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಯಶೋಧರ ಬಲ್ಲಾಳ್ ಬಂಗಾಡಿ ಅರಮನೆ, ಅಜಿತ್‌ಕುಮಾರ್ ಜೈನ್ ಇಂದಬೆಟ್ಟು ಗುತ್ತು,

ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಪ್ರದೀಪ್ ಎಂ., ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಂಜೀವ ಗೌಡ ಮನ್ನಡ್ಕ, ಶ್ರೀಗೋಪಾಲಕೃಷ್ಣ ದೇವಸ್ಥಾನ ನಾವೂರಿನ ಅಧ್ಯಕ್ಷ ಹರೀಶ್ ಸಾಲ್ಯಾನ್ , ವಿ.ಹಿಂ.ಪ ಇಂದು ಬೆಟ್ಟು ಚಂದ್ರಶೇಖರ ಕಾಂಜಾನು, ವಿ.ಹಿಂ.ಪ ನಾವೂರು ಅಧ್ಯಕ್ಷ ವಿಜಯ್ ಹೊಡಿಕ್ಕಾರು, ಇಂದ ಬೆಟ್ಟು ಗ್ರಾ.ಪಂ ಅಧ್ಯಕ್ಷೆ ಆಶಾಲತಾ
ಉಪಸ್ಥಿತರಿದ್ದರು. ಶಾಸಕ ಹರೀಶ್ ಪೂಂಜ ಆಗಮಿಸಿ ಗಣಪತಿ ದೇವರ ಆಶೀರ್ವಾದ ಪಡೆದರು.

ಅಧ್ಯಕ್ಷತೆಯನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವಸಮಿತಿ ಇಂದಬೆಟ್ಟು-ನಾವೂರಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬೆಳ್ಳೂರುಗುತ್ತು ವಹಿಸಿದ್ದರು.
ಸಮಾರಂಭದಲ್ಲಿ 25 ವಷ೯ಗಳಲ್ಲಿ ಗಣೇಶೋತ್ಸವವನ್ನು ಯಶಸ್ವಿಯಾಗಿ ಮುನ್ನಡೆಸಿದ ಮಾಜಿ ಅಧ್ಯಕ್ಷರುಗಳನ್ನು ಸಮಿತಿ ವತಿಯಿಂದ ಗೌರವಿಸಲಾಯಿತು. ಸಾವ೯ಜನಿಕ ಕೆಸರು ಗದ್ದೆ ಕ್ರೀಡಾಕೂಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಶಿವಶಂಕರ್ ಗೇರುಕಟ್ಟೆ ವಂದೇಮಾತರಂ ಹಾಡಿದರು. ಡಾ. ಪ್ರದೀಪ್ ಕುಮಾರ್ ಸ್ವಾಗತಿಸಿದರು. ಮೋಹನ್ ಬಂಗೇರ ಕಾರಿಂಜೆ, ಸತೀಶ್ ಮನ್ನಡ್ಕ, ವಿನೋದ್ ಕಲ್ಲಾಜೆ ಕಾಯ೯ಕ್ರಮ ನಿರೂಪಿಸಿದರು.

Related posts

ಬರೆಂಗಾಯ ವಣಸಾಯದಲ್ಲಿ ವನದುರ್ಗಾರಾಧನೆ, ವರ್ಷಾವಧಿ ನೇಮೋತ್ಸವ

Suddi Udaya

ಅರಸಿನಮಕ್ಕಿ : ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಟಾ ಅಷ್ಟಬಂಧ ಬ್ರಹ್ಮಕಲಶೋತ್ಸವ: ಹೊರೆಕಾಣಿಕೆ ಸಮರ್ಪಣೆ

Suddi Udaya

ಜೈನರಲ್ಲಿ ದೀಪಾವಳಿ ಮಹಾವೀರ ಶಕ

Suddi Udaya

ಮೇ 3: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 53 ನೇ ವರ್ಷದ ಉಚಿತ ಸಾಮೂಹಿಕ ವಿವಾಹ: ಅರ್ಜಿ ಆಹ್ವಾನ

Suddi Udaya

ಕೊಲ್ಲಿ ಶ್ರೀ ದುರ್ಗಾದೇವಿ ಸನ್ನಿಧಾನಕ್ಕೆ ಶಿಲಾಮಯ ಧ್ವಜಸ್ತಂಭ: ಕಿಲ್ಲೂರು ಪೇಟೆಯಿಂದ ಕಾಲ್ನಡಿಗೆಯ ಮೆರವಣಿಗೆ

Suddi Udaya

ಕಳೆಂಜ ನಂದಗೋಕುಲ ಗೋಶಾಲೆ: ಮೇ 19: ಗೋಗ್ರಾಸ ಹೊರ ಕಾಣಿಕೆ ಸಮರ್ಪಣೆ: ಮೇ 26: ನಂದಗೋಕುಲ ದೀಪೋತ್ಸವ

Suddi Udaya
error: Content is protected !!