September 6, 2026
ಧಾರ್ಮಿಕ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ಶ್ರೀ ಕೃಷ್ಣ ಭಜನಾ ಮಂಡಳಿ (ರಿ) ಆದೂರು ಪೇರಲ್ ಕೊಯ್ಯೂರು ಹಾಗೂ ಊರವರ ಸಂಯುಕ್ತ ಆಶ್ರಯದಲ್ಲಿ 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಕೊಯ್ಯೂರು:- ಇಲ್ಲಿಯ ಆದೂರು ಪೇರಾಲಿನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ಶ್ರೀ ಕೃಷ್ಣ ಭಜನಾ ಮಂಡಳಿ (ರಿ) ಆದೂರು ಪೇರಲ್ ಕೊಯ್ಯೂರು ಹಾಗೂ ಊರವರ ಸಂಯುಕ್ತ ಆಶ್ರಯದಲ್ಲಿ 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ನಂದಾದೀಪ ಬೆಳಗಿಸಿ ಗಣೇಶನ ವಿಗ್ರಹ ಪ್ರತಿಷ್ಠಾಪನೆ ಗಣಹೋಮ ಬೆಳಗಿನ ಪೂಜೆ ನಂತರ ಶ್ರೀ ಕೃಷ್ಣ ಭಜನಾ ಮಂಡಳಿ ಆದೂರು ಪೇರಲ್ ಇಲ್ಲಿಯ ಮಹಿಳಾ ಮತ್ತು ಮಕ್ಕಳ ತಂಡಗಳ, ಶ್ರೀರಾಮ ಭಜನಾ ಮಂಡಳಿ ಮಲೆಬೆಟ್ಟು, ಶ್ರೀ ಪಂಚದುರ್ಗ ಭಜನಾ ಮಂಡಳಿ ಕೊಯ್ಯೂರು ದೇವಸ್ಥಾನ ಇಲ್ಲಿಯ ಭಜನಾ ತಂಡಗಳಿಂದ ಬೆಳಿಗ್ಗೆ 9:00 ಗಂಟೆ ಯಿಂದ ಮಧ್ಯಾಹ್ನ 12 ಗಂಟೆಯ ತನಕ ವಿಶೇಷ ಭಜನಾ ಕಾರ್ಯಕ್ರಮ, ಮಧ್ಯಾಹ್ನ ದೇವರಿಗೆ ಮಹಾಪೂಜೆ ನಂತರ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಸಂಜೆ 4 ಗಂಟೆಯ ಹೊತ್ತಿಗೆ ಆದೂರು ಪೇರಾಲಿನಿಂದ ಬೈಪಾಡಿಯ ರಾಜಭೀದಿಯಲ್ಲಿ ಪುತ್ತಿಲದ ಹೊಳೆಯ ತನಕ ಆಹ್ವಾನಿತ ಭಜನಾ ತಂಡಗಳಿಂದ ಕುಣಿತ ಭಜನೆ, ನಾಸಿಕ್ ಬ್ಯಾಂಡ್ ಹಾಗೂ ಭಾರತ ಮಾತೆಯ ಮತ್ತು ವಿವಿಧ ವೇಷ ಭೂಷಣಗಳೊಂದಿಗೆ ಗಣೇಶನ ವಿಗ್ರಹದ ಜಲಸ್ತಂಭದ ಶೋಭ ಯಾತ್ರೆ ನಡೆದು ಕೊನೆಗೆ ವಿಗ್ರಹ ವಿಸರ್ಜನೆ ಮಾಡಲಾಯಿತು.
ಈ ಯಾತ್ರೆಯ ಸಂದರ್ಭ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಹಾಗೂ ಶ್ರೀ ಕೃಷ್ಣ ಭಜನಾ ಮಂಡಳಿಯ ಎಲ್ಲಾ ಪದಾಧಿಕಾರಿಗಳು ಸದಸ್ಯರುಗಳು ಮತ್ತು ಊರವರು ಬಹು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Related posts

ಮುಂಡೂರು ಶ್ರೀನಾಗಕಲ್ಲುರ್ಟಿ ಕ್ಷೇತ್ರದಲ್ಲಿ ಶ್ರೀನಾಗಬ್ರಹ್ಮ ದೇವರ ಪುನರ್ ಪ್ರತಿಷ್ಠಾ ಕಲಶೋತ್ಸವ

Suddi Udaya

ಪೆರ್ಲ ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ರಚನೆ

Suddi Udaya

ಮಲೆಬೆಟ್ಟು ಶ್ರೀ ವನದುರ್ಗಾ ದೇವಾಲಯದ ನಾಗಬನದಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya

ಮೇ 25: ಧರ್ಮಸ್ಥಳದಲ್ಲಿ “ಹತ್ತನಾವಧಿ” ಉತ್ಸವ

Suddi Udaya

ಇತಿಹಾಸ ಪ್ರಸಿದ್ದ ಬಳಂಜ ದೇವಸ್ಥಾನದ ಭಕ್ತವೃಂದದಿಂದ ಶಾಸಕ ಹರೀಶ್ ಪೂಂಜರವರ ಭೇಟಿ

Suddi Udaya

ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನೇಪಾಳದ ಬುದ್ಧ ಭಗವಾನ್ ರವರ ಪರಮ ಪವಿತ್ರ ಕ್ಷೇತ್ರವಾದ ಲುಂಬಿನಿ ಮತ್ತು ಕಪಿಲವಸ್ತು ಕ್ಷೇತ್ರಗಳಿಗೆ ಭೇಟಿ

Suddi Udaya
error: Content is protected !!