24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ನಲ್ಲಿ ಸಂಭ್ರಮದ ಮೊಂತಿ ಹಬ್ಬ (ತೆನೆ ಹಬ್ಬ)

ಬೆಳ್ತಂಗಡಿ: ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ನಲ್ಲಿ ಸಂಭ್ರಮದ ಮೊಂತಿ ಹಬ್ಬ(ತೆನೆ ಹಬ್ಬ)ವನ್ನು ಸೆ.8ರಂದು ಆಚರಿಸಲಾಯಿತು. ಈ ಹಬ್ಬವನ್ನು ಮಾತೆ ಕನ್ಯಾ ಮರಿಯಮ್ಮರ ಹುಟ್ಟು ಹಬ್ಬದಂದು ಆಚರಿಸುವುದು ರೂಡಿ. ಬೆಳ್ತಂಗಡಿ ಚರ್ಚ್ ಬಸ್ ಸ್ಟ್ಯಾಂಡ್ ಬಳಿಯ ಸರ್ವಿಸ್ ರೋಡ್ ಬಳಿ ತೆನೆಯನ್ನು ಆಶೀರ್ವಾದಿಸಿ ದೇವರ ಶುಭ ಸಂದೇಶವನ್ನು ಚರ್ಚ್ ಧರ್ಮ ಗುರುಗಳಾದ ವಂದನಿಯ ವಾಲ್ಟರ್ ಡಿಮೆಲ್ಲೊರವರು ತುಳುವಿನಲ್ಲಿ ನೀಡಿದರು.

ವಂದನೀಯ ಗುರುಗಳಾದ ಕ್ಲಿಫರ್ಡ್ ಪಿಂಟೊ ರವರು ತೆನೆಯನ್ನು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ವಂದನೀಯ ಗುರುಗಳಾದ ಜೇಸುದಾಸ್ ಕೂಡ ಉಪಸ್ಥಿತರಿದ್ದರು. ಮೆರವಣಿಗೆ ನಡೆದು ಚರ್ಚ್ನಲ್ಲಿ ಬಲಿಪೂಜೆ ನಡೆಯಿತು. ಹಲವಾರು ಭಕ್ತರು ಈ ಬಲಿಪೂಜೆಯಲ್ಲಿ ಪಾಲುಗೊಂಡರು. ಬಲಿಪೂಜೆಯ ನಂತರ ಎಲ್ಲಾ ಭಕ್ತರಿಗೆ ಸಿಹಿ ಹಂಚಲಾಯಿತು ಹಾಗೂ ಎಲ್ಲಾ ವಾಹನಗಳನ್ನು ಆಶೀರ್ವಾದಿಸಲಾಯಿತು. ಎಲ್ಲರು ತಮ್ಮ ತಮ್ಮ ಮನೆಯಲ್ಲಿ ಕುಟುಂಬದವರೊಂದಿಗೆ ಹೊಸ ಊಟವನ್ನು ಸವಿಯುವುದೊಂದಿಗೆ ಸಹಬಾಳ್ವೆಯ ಸಂದೇಶವನ್ನು ಸಾರಲಾಯಿತು.

Related posts

ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ

Suddi Udaya

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಪೋಷಕ ಮತ್ತು ಶಿಕ್ಷಕ ಸಭೆ

Suddi Udaya

ನಾಳ ದೇವಸ್ಥಾನದಲ್ಲಿ ನಾಗರ ಪಂಚಮಿ ವಿಶೇಷ ಪೂಜೆ

Suddi Udaya

ಶಿಶಿಲ-ಅರಸಿನಮಕ್ಕಿ ವಿಪತ್ತು ನಿರ್ವಹಣಾ ಘಟಕದಿಂದ ಶಿಬರಾಜೆ ಪರಪ್ಪು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಶ್ರಮದಾನ

Suddi Udaya

ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಜ್ಞಾಪನಾ ಶಕ್ತಿ ಪರೀಕ್ಷೆ ಸ್ಪರ್ಧೆ

Suddi Udaya

ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯ ಪ್ರಮುಖರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಚುನಾವಣಾ ಪ್ರಚಾರ

Suddi Udaya
error: Content is protected !!