28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಚಿಬಿದ್ರೆ : ಪೆರಿಯಡ್ಕ ಸಮೀಪದ ಮಾಕಳದಲ್ಲಿ ಕಾಡಾನೆ ದಾಳಿ: ಅಪಾರ ಬೆಳೆ ಹಾನಿ

ಚಿಬಿದ್ರೆ : ಚಿಬಿದ್ರೆ ಗ್ರಾಮದ ಪೆರಿಯಡ್ಕ ಸಮೀಪದ ಮಾಕಳ ಎಂಬಲ್ಲಿ ಆನೆ ದಾಳಿ ಮಾಡಿ ಬೆಳೆ ಹಾನಿ ಮಾಡಿದೆ.
ಸೆ.7ರಂದು ತಡರಾತ್ರಿ ಮರಿಯೊಂದಿಗೆ ದಾಳಿ ಮಾಡಿದ ಆನೆಯು, ರಾಮಣ್ಣ ಗೌಡ, ಸೋಮನಾಥ ಗೌಡ, ಲೋಕೇಶಗೌಡ, ಎಂ.ಟಿ.ಯತೀಶ್ ಅವರ ತೆಂಗು, ಬಾಳೆ, ಭತ್ತದ ಬೆಳೆ‌ಯನ್ನು ಧ್ವಂಸ ಮಾಡಿವೆ.


ರಾಮಣ್ಣಗೌಡ ಅವರ ಭತ್ತದ ಗದ್ದೆಯಲ್ಲಿ ಓಡಾಡಿರುವ ಆನೆಗಳು ಸಸಿಗಳನ್ನು ತುಳಿದು ಧ್ವಂಸಗೊಳಿಸಿವೆ. ಫಲಭರಿತ 8 ತೆಂಗಿನ ಮರಗಳನ್ನು ಉರುಳಿಸಿವೆ. ತೋಟದಲ್ಲಿದ್ದ ಬಾಳೆಗಿಡಗಳನ್ನೂ ಸಂಪೂರ್ಣವಾಗಿ ಧ್ವಂಸಗೊಳಿಸಿವೆ.
ಲೋಕೇಶ್ ಗೌಡ ಅವರ ಎರಡು ತೆಂಗಿನ ಮರ, ಬಾಳೆಗಿಡ, ಸೋಮನಾಥಗೌಡ ಅವರ ಬಾಳೆಗಿಡ, ಯತೀಶ್ ಅವರ ಬಾಳೆತೋಟ ಸಂಪೂರ್ಣವಾಗಿ ನಾಶವಾಗಿವೆ.


ಕೆಲ ದಿನಗಳ ಹಿಂದೆ ದಾಳಿ ಮಾಡಿದ್ದ ಆನೆ, ಮತ್ರಡ್ಕ ಕೃಷ್ಣಪ್ಪ ಗೌಡ, ಮಾಕಳ ಶ್ರೀನಿವಾಸ ಗೌಡ ಅವರ ಫಲಭರಿತ ಬಾಳೆ ತೋಟವನ್ನು ಧ್ವಂಸಗೊಳಿಸಿತ್ತು.
ಈ ಭಾಗದಲ್ಲಿ ಆನೆ ದಾಳಿ ಹೆಚ್ಚಾಗಿದ್ದು, ಬೆಳೆ ಹಾನಿಯಿಂದ ರೈತರು ಕಂಗೆಟ್ಟಿದ್ದಾರೆ. ಮರಿಯೊಂದಿಗಿರುವ ಆನೆಯು ಮತ್ತೆ‌ದಾಳಿ ಮಾಡುವ ಸಾಧ್ಯತೆ ಇದ್ದು, ಅರಣ್ಯ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ರೈತರು ಮನವಿ ಮಾಡಿದ್ದಾರೆ.

Related posts

ನ್ಯಾಯತರ್ಪು ಮತ್ತು ಕಳಿಯ ಗ್ರಾಮದಲ್ಲಿ ಬಿಜೆಪಿ ಬಿರುಸಿನ ಚುನಾವಣಾ ಪ್ರಚಾರ

Suddi Udaya

ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಸಮಿತಿ ವತಿಯಿಂದ ನಾಯಕರ ಶೃಂಗಸಭೆ ಕಾರ್ಯಕ್ರಮ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮುದಾಯ ಅಭಿವೃದ್ಧಿ ವಿಭಾಗ 507 ಶಾಲೆಗಳಿಗೆ ರೂ. 2.75 ಕೋಟಿ ಮೊತ್ತದ 4,044 ಜೊತೆ ಡೆಸ್ಕ್ -ಬೆಂಚ್ ವಿತರಣೆ

Suddi Udaya

ವಾಣಿ ಕಾಲೇಜಿನಲ್ಲಿ ವಿಶ್ವಮಾನವ ದಿನಾಚರಣೆ

Suddi Udaya

ಧರ್ಮಸ್ಥಳ ಗ್ರಾಮವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಗ್ರಾಮವೆಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಘೋಷಣೆ: ರಾಜ್ಯದ 5 ನಗರದಲ್ಲಿ, ಸುಮಾರು 6078 ಗ್ರಾ.ಪಂ ಗಳಲ್ಲಿ ಮೊದಲ ಗ್ರಾಮವಾಗಿ ಧರ್ಮಸ್ಥಳ ಗ್ರಾಮ ಆಯ್ಕೆ

Suddi Udaya

ಉಜಿರೆ ರತ್ನಮಾನಸ ವಸತಿ ನಿಲಯದ ಮಕ್ಕಳಿಗೆ ಭತ್ತದ ಸಸಿ ತಯಾರಿ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮ

Suddi Udaya
error: Content is protected !!