25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜು

ವಾಣಿ ಪ.ಪೂ. ಕಾಲೇಜಿನ ವಾಣಿಜ್ಯ ವಿಭಾಗದ ವೀಕ್ಷಾ ಜೆ.ಪಿಗೆ ರಾಜ್ಯಮಟ್ಟದಲ್ಲಿ 8ನೇ ರ‍್ಯಾಂಕ್

ಬೆಳ್ತAಗಡಿ: ವಾಣಿ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗಕ್ಕೆ ಮತ್ತೊಂದು ಮಹತ್ವದ ಸಾಧನೆ ಲಭಿಸಿದೆ. ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯ ಮರುಮೌಲ್ಯಮಾಪನ ಫಲಿತಾಂಶದಲ್ಲಿ ವಾಣಿ ಕಾಲೇಜಿನ ವಿದ್ಯಾರ್ಥಿನಿ ವೀಕ್ಷಾ ಜೆ. ಪಿ ರಾಜ್ಯಮಟ್ಟದಲ್ಲಿ 8ನೇ ರ‍್ಯಾಂಕ್ ಗಳಿಸಿದ್ದಾರೆ. ಅವರು ಒಟ್ಟು 593 ಅಂಕಗಳನ್ನು ಪಡೆದು ಈ ಸಾಧನೆ ಮಾಡಿದ್ದಾರೆ.

ವೀಕ್ಷಾ ಜೆ. ಪಿ ಅವರಿಗೆ ಮೊದಲು ನಡೆದ ಮೌಲ್ಯಮಾಪನದಲ್ಲಿ ಬಿಸಿನೆಸ್ ಸ್ಟಡೀಸ್ ವಿಷಯದಲ್ಲಿ 91 ಅಂಕಗಳು ಲಭಿಸಿದ್ದವು. ನಂತರ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ೯ ಅಂಕಗಳ ಹೆಚ್ಚಳವಾಗಿದ್ದು, ಆ ವಿಷಯದಲ್ಲಿ 100 ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಈ ಸಾಧನೆಯ ಮೂಲಕ ವಾಣಿ ಪದವಿಪೂರ್ವ ಕಾಲೇಜು ಮತ್ತೊಮ್ಮೆ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನ ಮೆರುಗು ತೋರಿಸಿದ್ದು, ವಿದ್ಯಾರ್ಥಿನಿಯ ಪರಿಶ್ರಮ ಮತ್ತು ಶಿಕ್ಷಕರ ಮಾರ್ಗದರ್ಶನದ ಫಲವಾಗಿ ಈ ಯಶಸ್ಸು ಸಾಧ್ಯವಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಸಂತೋಷ ವ್ಯಕ್ತಪಡಿಸಿದೆ.

Related posts

ಆ.17ರವರೆಗೆ ಬೆಳೆ ವಿಮೆ ಪಾವತಿಗೆ ಅವಧಿ ವಿಸ್ತರಣೆ

Suddi Udaya

ವರ್ಗಾವಣೆಗೊಂಡ ಶಿಕ್ಷಕ ಸುರೇಶ್ ಶೆಟ್ಟಿಯವರಿಗೆ ಕುವೆಟ್ಟು ಸ.ಉ.ಹಿ.ಪ್ರಾ. ಶಾಲಾ ವತಿಯಿಂದ ಬಿಳ್ಕೋಡುಗೆ ಸಮಾರಂಭ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ವೈದ್ಯರ ದಿನಾಚರಣೆ

Suddi Udaya

ಶಿಶಿಲ: ಉಮ್ಮಂತಿಮಾರ್ ಎಂಬಲ್ಲಿ ಕಿಂಡಿ ಅಣೆಕಟ್ಟು–ಒಟ್ಲದಲ್ಲಿ ಸೇತುವೆ ನಿರ್ಮಾಣಕ್ಕೆ ಶಾಸಕರಿಂದ ಶಿಲಾನ್ಯಾಸ

Suddi Udaya

ಕರ್ನಾಟಕ ದಲಿತ ಚಳುವಳಿ 50ರ ಸಂಭ್ರಮ ಸಮಾವೇಶ’ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ

Suddi Udaya
error: Content is protected !!