24.8 C
ಪುತ್ತೂರು, ಬೆಳ್ತಂಗಡಿ
March 7, 2026
ಪ್ರಮುಖ ಸುದ್ದಿ

ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡಿದ ಬೆಳ್ತಂಗಡಿಯ ಆಂಬುಲೆನ್ಸ್‌ ಚಾಲಕ ಜಲೀಲ್

ಬೆಳ್ತಂಗಡಿ: ಕ್ಯಾನ್ಸರ್ ಪೀಡಿತರಿಗೆ ಅನುಕೂಲವಾಗುವಂತೆ ಬೆಳ್ತಂಗಡಿಯ ಆಂಬುಲೆನ್ಸ್‌ ಚಾಲಕ, ಅಪದ್ಭಾಂಧವ ಜಲೀಲ್ (ಬಾಬಾ) ಅವರು ತನ್ನ 11 ಇಂಚು ಉದ್ದಕ್ಕೆ ಬೆಳೆಸಿಕೊಂಡಿದ್ದ ತಲೆಗೂದಲನ್ಜು ದಾನ ಮಾಡಿದ್ದಾರೆ.

ಬೆಳ್ತಂಗಡಿ ನಗರದ ಕುತ್ಯಾರ್ ದೇವಸ್ಥಾನದ ಬಳಿಯ ಬಿ.ಇಬ್ರಾಹಿಂ ಮತ್ತು ಅತಿಕಾ ದಂಪತಿಯ ಪುತ್ರರಾಗಿರುವ ಆಪದ್ಭಾಂಧವ ಬಾಬಾ ಜಲೀಲ್(40ವ) ಅವರು ತನ್ನ ಕೂದಲನ್ನು 1 ವರ್ಷ 7 ತಿಂಗಳು ಕತ್ತರಿಸದೆ ಉಳಿಸಿ ಇದೀಗ ಕ್ಯಾನ್ಸರ್ ಪೀಡಿತರಿಗಾಗಿ ದಾನ ಮಾಡಿದ್ದಾರೆ.

ಬೆಳ್ತಂಗಡಿ ಸಂತೆಕಟ್ಟೆಯಲ್ಲಿರುವ ಶೃಂಗಾರ್ ಮಾಸ್ಟರ್ ಕಟ್ಸ್ ನಲ್ಲಿ ಸೆ.9 ರಂದು ಅವರು ಕೇಶಮುಂಡನ ಮಾಡಿಕೊಂಡರು.
ಹಿರಿಯ ಆಂಬುಲೆನ್ಸ್ ಚಾಲಕರಾಗಿರುವ ಜಲೀಲ್ ಅವರು ಎಲ್ಲೇ ಅಪಘಾತ ಅಥವಾ ಅಪರಾಧ ಚಟುವಟಿಕೆಗಳು ನಡೆದಾಗ ಪೊಲೀಸರಿಗೆ ಸಹಕಾರಿಯಾಗಿ ತಕ್ಷಣ ಸ್ಥಳಕ್ಕೆ ಧಾವಿಸಿ ತುರ್ತು ಸ್ಪಂದನ ನೀಡುವ ಕಾರ್ಯ ಮಾಡುತ್ತಿದ್ದಾರೆ. ಅನೇಕ ಮಂದಿಯ ಪ್ರಾಣ ರಕ್ಷಣೆ ಮಾಡಿರುವ ಅವರು ಮಂಗಳೂರು ಏರ್ ಇಂಡಿಯಾ ವಿಮಾನ ದುರಂತ ಸಂದರ್ಭದ ಕಾರ್ಯಾಚರ
ಣೆಯಲ್ಲೂ ಭಾಗಿಯಾಗಿದ್ದರು.

Related posts

ಮೊಗ್ರು: ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ಮತ್ತು ಶ್ರೀ ರಾಮ ಶಿಶು ಮಂದಿರ ಅಲೆಕ್ಕಿ- ಮುಗೇರಡ್ಕ ಆಶ್ರಯದಲ್ಲಿ ಶ್ರೀ ಕೃಷ್ಣಜನ್ಮಾಷ್ಠಮಿ ಪ್ರಯುಕ್ತ ಶ್ರೀ ಬಾಲಕೃಷ್ಣ ತೊಟ್ಟಿಲ ಸಂಭ್ರಮ

Suddi Udaya

ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧೆ: ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹೇಮಚಂದ್ರ ರವರಿಗೆ ಚಿನ್ನದ ಪದಕ

Suddi Udaya

ನಡ: ಕನ್ಯಾಡಿ ಶಾಂತಿನಗರದಲ್ಲಿ ಚಿರತೆ ಹಾವಳಿ

Suddi Udaya

ಬಳಂಜ: ಛದ್ಮವೇಷ ಸ್ಪರ್ಧೆಯಲ್ಲಿ ಸತತ ಪ್ರಶಸ್ತಿ ಪಡೆದ ಬಳಂಜ ಶಾಲಾ ವಿದ್ಯಾರ್ಥಿ ಸಮ್ಯಕ್ ಜೈನ್

Suddi Udaya

ಪ.ರಾ.ಶಾಸ್ತ್ರಿ ಅಭಿನಂದನೆ: ಆಹ್ವಾನ ಪತ್ರಿಕೆ ಅನಾವರಣ

Suddi Udaya

ಸೆ.6: ರೆಖ್ಯದಲ್ಲಿ 24ನೇ ವರ್ಷದ ಮೊಸರು ಕುಡಿಕೆ ಉತ್ಸವ

Suddi Udaya
error: Content is protected !!