25.3 C
ಪುತ್ತೂರು, ಬೆಳ್ತಂಗಡಿ
April 4, 2025
Uncategorized

ವಾಣಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಪೋಷಕರ ಸಭೆ

ಬೆಳ್ತಂಗಡಿ: ವಾಣಿ ಕಾಲೇಜಿನಲ್ಲಿ ಪ್ರಥಮ ವರ್ಷದ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಪೋಷಕರ ಸಭೆ ‌
ಮಕ್ಕಳೊಂದಿಗೆ ಭಾವನಾತ್ಮಕವಾಗಿ ಮಾತಾಡಿ ಸ್ನೇಹಿತರಂತೆ ಹೇಳಿಕೊಟ್ಟು ನಂಬಿಕೆಯಿಂದ ಜೀವನ ನಡೆಸಬೇಕು ಎಂದು ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಆನಂದ. ಡಿ ಹೇಳಿದರು.
ಅವರು ವಾಣಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಪೋಷಕರ ಸಭೆಯಲ್ಲಿ ಮಾತನಾಡುತ್ತಾ, ಗದ್ದೆಯಲ್ಲಿ ಬೀಜ ಬಿತ್ತಿ ಉತ್ತಮ ಫಲ ಪಡೆದ ಹಾಗೆ ಮೌಲ್ಯಯುತವಾದ ಜೀವನ ಕ್ರಮಗಳನ್ನು ತಿಳಿಸಿ ಉತ್ತಮ ವ್ಯಕ್ತಿತ್ವವನ್ನು ಪಡೆಯುವಂತೆ ಪ್ರೇರಣೆಯನ್ನು ನೀಡಬೇಕು. ಸಮಾಜದ ಎಲ್ಲಾ ವಿಚಾರಗಳಲ್ಲಿ ಮಕ್ಕಳು ಪಾಲುಗೊಳ್ಳುವಂತೆ ಪೋಷಕರು ಕಾಳಜಿ ವಹಿಸಬೇಕು ಎಂದರು.
ವಾಣಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ನಾರಾಯಣ ಗೌಡ ದೇವಸ್ಯ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಯದುಪತಿ ಗೌಡ ಸ್ವಾಗತಿಸಿದರು. ಉಪ ಪ್ರಾಂಶುಪಾಲ ವಿಷ್ಣು ಪ್ರಕಾಶ್ ವಂದಿಸಿದರು. ಶಿಕ್ಷಕ ರಕ್ಷಕ ಸಂಘದ ಸಂಯೋಜಕರಾದ ಶ್ರೀಮತಿ ಮೀನಾಕ್ಷಿ, ಕಾರ್ಯಕ್ರಮ ನಿರೂಪಿಸಿದವರು.

Related posts

ದ.ಕ. ಜಿಲ್ಲೆಯಲ್ಲಿ ವ್ಯಾಪಕ ಮಳೆ ಹಿನ್ನಲೆ: ಜು.25: ಎಲ್ಲಾ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Suddi Udaya

ಪ್ರೋ. ಕೆ.ಯಸ್ ಭಗವಾನ್ ಅವರ ಹೇಳಿಕೆಗೆ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಖಂಡನೆ

Suddi Udaya

ಕೊಯ್ಯೂರು ಮಾಧವ ಶೆಟ್ಟಿಗಾರ್ಮನೆ ಬಳಿ ಗುಡ್ಡ ಕುಸಿತಸ್ಥಳಕ್ಕೆ ಗ್ರಾ.ಪಂ ಕಾಯ೯ದಶಿ೯ ಪರಮೇಶ್ವರ್ ಭೇಟಿ – ಪರಿಶೀಲನೆ

Suddi Udaya

ವೇಣೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಕರುಣಾಕರ ಹೆಗ್ಡೆ ನಿಧನ

Suddi Udaya

ಬೆಳ್ತಂಗಡಿಯ ಜಗದೀಶ್ ಕುಲಾಲ್ ರವರಿಗೆ ಕುಂಬಾರರ ಸೇವಾ ಸಂಘದಿಂದ ಕ್ರೀಡಾ ರತ್ನ ಪ್ರಶಸ್ತಿ

Suddi Udaya

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ಶಾಸಕ ಹರೀಶ್ ಪೂಂಜ ಭೇಟಿ

Suddi Udaya
error: Content is protected !!