31.8 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆಸಮಸ್ಯೆ

ಕುಸಿಯುವ ಹಂತದಲ್ಲಿರುವ ವೇಣೂರು ಸರಕಾರಿ ಪ್ರೌಢಶಾಲೆಗೆ ಶಾಸಕ ಹರೀಶ್ ಪೂಂಜ ಭೇಟಿ, ತಕ್ಷಣ ಸ್ಪಂದನೆ

ವೇಣೂರು: ಅದೆಷ್ಟೋ ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕನ್ನು ನೀಡಿದ ವೇಣೂರು ಸರಕಾರಿ ಪ್ರೌಢ ಶಾಲೆ ಕುಸಿಯುವ ಹಂತದಲ್ಲಿದ್ದು ಶಾಸಕ ಹರೀಶ್ ಪೂಂಜ ಶಾಲೆಗೆ ಭೇಟಿ ನೀಡಿ ಶೀಘ್ರವಾಗಿ ಸ್ಪಂದಿಸಿದರು.

ಶಾಲೆಗೆ ಶಾಸಕರ ನಿಧಿಯಿಂದ ರೂ.1.26 ಕೋಟಿ ವೆಚ್ಚದಲ್ಲಿ ನೂತನ 8 ಕೊಠಡಿ ನಿರ್ಮಾಣಗೊಂಡಿದ್ದು,ಇಗಾಗಲೇ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿಯಾಗಿದ್ದು, ಅಗತ್ಯವಾಗಿ 16 ಕೊಠಡಿಗಳ ಅವಶ್ಯಕತೆಯಿರುವುದನ್ನು ಗಮನಿಸಿ ಶೀಘ್ರ ಇನ್ನೂ 4 ಕೊಠಡಿ ನಿರ್ಮಾಣಕ್ಕೆ ಭರವಸೆ ನೀಡಿ ಕಾಮಗಾರಿ ಪ್ರಾರಂಭ ಮಾಡಲು ತಿಳಿಸಿದರು.

ಹಳೆಯ ಕಟ್ಟಡ ಬೀಳುವ ಸ್ಥಿತಿಯಲ್ಲಿದ್ದು ಕೂಡಲೇ ಹೊಸ ಕಟ್ಟಡಕ್ಕೆ ಮಕ್ಕಳನ್ನು ಸ್ಥಳಾಂತರಿಸಲು ಹಾಗೂ ಹೊಸ ಕಟ್ಟಡ ಆಗುವವರೆಗೆ ಪದವಿ ಪೂರ್ವ ಕಾಲೇಜಿನ 2 ಕೊಠಡಿಯಲ್ಲಿ ವ್ಯವಸ್ಥೆ ಮಾಡಲು ಸೂಚಿಸಿದರು. ಪ್ರೌಢ ಶಾಲೆಯಲ್ಲಿ ಹೆತ್ತವರ,ದಾನಿಗಳ ಸಹಕಾರದಿಂದ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಹೆತ್ತವರು ದಾನಿಗಳು ಸಹಕರಿಸಿದರು.

ಇಗಾಗಲೇ ಪೋಷಕರು,ಹಳೆ ವಿದ್ಯಾರ್ಥಿಗಳು, ದಾನಿಗಳು,ಊರವರ ಸಹಕಾರದಿಂದ ಸುಮಾರು 22 ಲಕ್ಷ ಆರ್ಥಿಕ ಕ್ರೋಡೀಕರಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಶ್ರಮದಾನದ ಮೂಲಕ ಪೋಷಕರು ರಾತ್ರಿ ಕೆಲಸ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ ಹೆಗ್ಡೆ, ನಿಕಟಪೂರ್ವ ಅಧ್ಯಕ್ಷ ನೇಮಯ್ಯ ಕುಲಾಲ್, ಪಂಚಾಯತ್ ಸದಸ್ಯ ವೇಣೂರು ಸಹಕಾರ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿಇ,ಕಟ್ಟಡ ಸಮಿತಿ ಸಂಚಾಲಕ, ಪೋಷಕ ರಾಜೇಶ್ ಪೂಜಾರಿ ಕೊಪ್ಪದಬಾಕಿಮಾರ್ ಗುತ್ತು,ತಾಲೂಕು ರೈತ ಮೋರ್ಚಾ ಅಧ್ಯಕ್ಷ ವಿಜಯ ಗೌಡ, ಕಟ್ಟಡ ಸಮಿತಿ ಸದಸ್ಯ ಉದ್ಯಮಿ ಭಾಸ್ಕರ ಪೈ,ಸರಕಾರಿ ಪ. ಪೂ. ಕಾಲೇಜು ಪ್ರಾಂಶುಪಾಲ ಗಂಗಾಧರ, ಶಾಲಾ ಮುಖ್ಯ ಶಿಕ್ಷಕ ವೆಂಕಟೇಶ್ ತುಳುಪುಳೆ,ಶಾಲಾ ಅಧ್ಯಾಪಕ ವೃಂದ,ಪೋಷಕರು ಉಪಸ್ಥಿತರಿದ್ದರು.

Related posts

ಶಿರ್ಲಾಲು ಶ್ರಿ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮ ಕಲಶಾಭಿಷೇಕ

Suddi Udaya

ಎ.3ರಿಂದ ಎ.7: ಮೇಲಂತಬೆಟ್ಟು ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ

Suddi Udaya

ಬೆಳ್ತಂಗಡಿ : ಚೆಕ್ ಅಮಾನ್ಯ ಪ್ರಕರಣ ಆರೋಪಿ ಲಾಯಿಲ ನಿವಾಸಿ ಸಾಜಿಲ್ ಗೆ ಶಿಕ್ಷೆ

Suddi Udaya

ರಕ್ತೇಶ್ವರಿಪದವು: ಭಜನಾ ವಾರ್ಷಿಕೋತ್ಸವ ವಿಶೇಷ ಭಜನೆ ಹಾಗೂ ವಿಶೇಷ ಪೂಜೆ ಮತ್ತು ಸನ್ಮಾನ

Suddi Udaya

ಕೊಕ್ಕಡ ಸೇವಾ ಮಂದಿರದಲ್ಲಿ ಬೇಸಿಗೆ ಶಿಬಿರದ ಸಮಾರೋಪ

Suddi Udaya

ತಿರುವನಂತಪುರ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಸತ್ಯನಾರಾಯಣ

Suddi Udaya
error: Content is protected !!