ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ಯು. ಎ. ಯಿ (U.A.E) ಯ OHSSAI ಫೌಂಡೇಶನ್ ನ ಫೌಂಡೇಶನ್‌ನ ಅಧ್ಯಕ್ಷ ಡಾ. ಹರಿದಾಸ್ ನಾಯರ್ ರವರು ವಿದ್ಯಾರ್ಥಿ ಹಾಗೂ ಅಧ್ಯಾಪಕ ವೃಂದದೊAದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಒತ್ತಡ ನಿರ್ವಹಣಾ ಕೌಶಲ್ಯ ಹಾಗೂ ನಿರ್ವಹಣಾ ತಂತ್ರಗಳನ್ನು ಸೂಚಿಸಿದರು.
ಡಾ. ಹರಿದಾಸ್ ನಾಯರ್ ಅವರು, ಮಾನಸಿಕ ಒತ್ತಡ ನಿವಾರಿಸುವಲ್ಲಿ ಯೋಗ, ಧ್ಯಾನ ಹಾಗೂ ಲಘು ದೈಹಿಕ ವ್ಯಾಯಾಮ ಚಟುವಟಿಕೆಗಳು ಪ್ರಮುಖ ಪಾತ್ರವಹಿಸುತ್ತದೆ. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು, ಒಳ್ಳೆಯ ಸ್ನೇಹಿತರೊಂದಿಗೆ ಸಂಪರ್ಕ ಮತ್ತು ಸಮಸ್ಯೆ ಎದುರಾದಾಗ ಹಿರಿಯರೊಂದಿಗೆ ಚರ್ಚಿಸಿ ಮಾರ್ಗದರ್ಶನ ಪಡೆಯುವುದು ಅಗತ್ಯವಾಗಿರುತ್ತದೆ. ಈ ಮುಖಾಂತರ ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದಲ್ಲಿ, ವಿದ್ಯಾರ್ಥಿಗಳು ಶೈಕ್ಷಣಿಕ ಹಾಗೂ ವೃತ್ತಿಜೀವನದಲ್ಲಿ ಅಭಿವೃದ್ಧಿ ಕಂಡುಕೊಳ್ಳಬಹುದು ಎಂದು ನುಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಶೋಕ್ ಕುಮಾರ್, ಶ್ರೀ ಶರದ್ ವಿಹಾರಿದಾಸ್, ಅಧ್ಯಾತ್ಮಿಕ ಮಾರ್ಗದರ್ಶಕ, ಭಕ್ತಿವೇದಾಂತ ಅಕಾಡಮಿ ಮಂಗಳೂರು ಮತ್ತು ಸಿವಿಲ್ ವಿಭಾಗ ಮುಖ್ಯಸ್ಥರಾದ ಡಾ. ರವೀಶ್ ಪಡುಮಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.