25.8 C
ಪುತ್ತೂರು, ಬೆಳ್ತಂಗಡಿ
March 6, 2026
ಆರೋಗ್ಯ

ಮಾನವ ಸಂಬಂಧಗಳು ಮತ್ತು ಧನಾತ್ಮಕ ಮನೋಭಾವದ ಕುರಿತು (Human Relations and Positive Attitude) ಸಂವಾದಾತ್ಮಕ ಕಾರ್ಯಾಗಾರ

ಮಾನವ ಸಂಬಂಧಗಳು ಮತ್ತು ಧನಾತ್ಮಕ ಮನೋಭಾವದ ಕುರಿತು (Human Relations and Positive Attitude) ಸಂವಾದಾತ್ಮಕ ಕಾರ್ಯಾಗಾರ :ಸೇವಾಧಾಮ ಪುನಶ್ಚೇತನ ಕೇಂದ್ರ ಸೌತಡ್ಕದಲ್ಲಿ ನಡೆದ ‘ಸಿಬ್ಬಂದಿಗಳ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮ’ದ ಅಡಿಯಲ್ಲಿ ಮಾನವ ಸಂಬಂಧಗಳು ಮತ್ತು ಧನಾತ್ಮಕ ಮನೋಭಾವದ ಕುರಿತು (Human Relations and Positive Attitude) ಸಂವಾದಾತ್ಮಕ ಕಾರ್ಯಾಗಾರವನ್ನು ಸಂಪನ್ಮೂಲ ವ್ಯಕ್ತಿಯಾಗಿ ಎಸ್ ಡಿ ಎಮ್ ವಸತಿಯುತ ಪಿ ಯು ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾI ಟಿ. ಕೃಷ್ಣಮೂರ್ತಿ ಸೆ. 12ರಂದು ನಡೆಸಿಕೊಟ್ಟರು.

ವ್ಯಕ್ತಿಗತ ಚಿಂತನೆಯಲ್ಲಿ ನಕಾರಾತ್ಮಕ ಮನೋಭಾವವನ್ನು ಹೊಂದಿದ್ದರೆ, ಅದರ ಪ್ರತಿಯಾಗಿ ಪಡೆಯಲಿರುವುದು ನಕಾರಾತ್ಮಕತೆ ಮಾತ್ರ. ಸಕಾರಾತ್ಮ ಮನೋಭಾವವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವುದರಿಂದ ಸಂಬಂಧದ ಬಗ್ಗೆ ಕಾಳಜಿ ವಹಿಸುತ್ತೀರಿ ಎಂದರು. ನಿತ್ಯ ಜೀವನದ ಒತ್ತಡ ನಡುವೆ ಮಾನವೀಯ ಸಂಬಂಧಗಳು ಮತ್ತು ಧನಾತ್ಮಕ ಮನೋಭಾವನೆಯ ಪ್ರಾಮುಖ್ಯತೆಯ ಬಗೆಗೆ ಸವಿಸ್ತಾರವಾಗಿ, ಕ್ರಿಯಾತ್ಮಕ ಚಟುವಟಿಕೆಗಳೊಂದಿಗೆ ಮಾಹಿತಿ ಇತ್ತರು. ಸಂಸ್ಥೆಯ ಪರವಾಗಿ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ (ರಿ.), ಕೊಕ್ಕಡ ಅಧ್ಯಕ್ಷರಾದ ಶ್ರೀ ಕೆ. ಕೃಷ್ಣ ಭಟ್, ಸೇವಾಭಾರತಿ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಕೆ. ವಿನಾಯಕ ರಾವ್, ಕಾರ್ಯದರ್ಶಿ ಶ್ರೀ ಬಾಲಕೃಷ್ಣ, ಸ್ವಯಂಸೇವಕರಾದ ಶ್ರೀ ಮೈಲಾರಿ ಉಪಸ್ಥಿತರಿದ್ದರು.

ಕಾರ್ಯಾಗಾರದಲ್ಲಿ ಸಂಸ್ಥೆಯ ಸಿಬ್ಬಂದಿ ವರ್ಗ, ಕೇಂದ್ರದ ಸನಿವಾಸಿಗಳು, ಆರೈಕೆದಾರರು ಹಾಗೂ ಸ್ವಯಂಸೇವಕರು ಸೇರಿ ಒಟ್ಟು 25 ಮಂದಿ ಭಾಗವಹಿಸಿದ್ದರು. ಸೇವಾಭಾರತಿಯ ಅಕೌಂಟೆಂಟ್ ಕುI ಅಕ್ಷತಾ ಸ್ವಾಗತಿಸಿ, ನಿರೂಪಿಸಿ, ಹಿರಿಯ ಪ್ರಬಂಧಕಾರದ ಚರಣ್ ಕುಮಾರ್ ಎಂ. ಧನ್ಯವಾದವಿತ್ತರು.

Related posts

ರಾಜಕೇಸರಿ ಸಂಘಟನೆಯ ನೇತೃತ್ವದಲ್ಲಿ ಬೃಹತ್ ಉಚಿತ ನೇತ್ರ ತಪಾಸಣೆ ಶಿಬಿರ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕಮೋಡ್ ಚೇರ್ ವಿತರಣೆ

Suddi Udaya

ಉಚಿತ ರಕ್ತ ತಪಾಸಣೆ ಹಾಗೂ ಅರೋಗ್ಯ ತಪಾಸಣಾ ಶಿಬಿರ

Suddi Udaya

ಉಜಿರೆ: ಶ್ರೀ. ಧ. ಮಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ರಾಷ್ಟ್ರೀಯ ಸುಪೋಷಣಾ ಮಾಸಾಚರಣೆ

Suddi Udaya

ಸಿಯೋನ್ ಆಶ್ರಮ ಟ್ರಸ್ಟ್ ಮತ್ತು ಆಲ್‌ಕಾರ್ಗೋ ಲೋಜಿಸ್ಟಿಕ್ಸ್ ಲಿ. ಸಹಭಾಗಿತ್ವದೊಂದಿಗೆ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ

Suddi Udaya

ನೆರಿಯ:ಸುರಕ್ಷಾ ಅಧಿಕಾರಿ ಶ್ರೀಮತಿ ಸರೋಜ ನಿವೃತ್ತಿ

Suddi Udaya
error: Content is protected !!