July 23, 2026
ಅಪರಾಧ ಸುದ್ದಿ

ಶಾಲಾ ವಿದ್ಯಾರ್ಥಿನಿಯನ್ನು. ನಿರ್ಜನ ಪ್ರದೇಶದಲ್ಲಿ ತಡೆದು ಹಲ್ಲೆ : ಜೀವಬೆದರಿಕೆ, ಬಟ್ಟೆ ಹರಿದು ಮಾನಕ್ಕೆ ಕುಂದು ಆರೋಪ ವಿದ್ಯಾರ್ಥಿನಿ ವೇಣೂರು ಪೊಲೀಸ್ ಠಾಣೆಗೆ ದೂರು

ಕುತ್ಲೂರು: ಕಾಲೇಜಿಗೆ ಹೋಗಿ ಹಿಂತಿರುಗುತ್ತಿದ್ದ ವಿದ್ಯಾರ್ಥಿನಿಯನ್ನು ರಸ್ತೆಯ ನಿರ್ಜನ ಪ್ರದೇಶದಲ್ಲಿ ತಡೆದು ಹಲ್ಲೆ ನಡೆಸಿ, ಬಟ್ಟೆ ಹರಿದು ಹಾಕಿ ಮಾನಹಾನಿ ಮಾಡಿ, ಕೊಲೆ ಬೆದರಿಕೆ ಹಾಕಿರುವ ಆರೋಪದಲ್ಲಿ ವಿದ್ಯಾರ್ಥಿನಿ ನೀಡಿದ ದೂರಿನಂತೆ ವ್ಯಕ್ತಿಯೋರ್ವನ ಮೇಲೆ ಸೆ.13 ರಂದು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುತ್ಲೂರು ಗ್ರಾಮದ ಮಂಜುಶ್ರೀ ನಗರ ನಿವಾಸಿ ಶಂಕರ ದೇವಾಡಿಗ ಹಲ್ಲೆ ನಡೆಸಿದ ಆರೋಪಿಯಾಗಿದ್ದು, ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು , ಆರೋಪಿಸಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿತ ಶಂಕರ್ ದೇವಾಡಿಗ ಬಾಲ್ಯದಿಂದಲೇ ವಿದ್ಯಾರ್ಥಿನಿಯ ಪರಿಚಯನಾಗಿದ್ದು, ಇತ್ತೀಚೆಗೆ ಪೋನಿನಲ್ಲಿ ಸಲುಗೆಯಿಂದ ಮಾತನಾಡಿಕೊಂಡು ಪರಸ್ಪರ ಚಾಟಿಂಗ್ ನಡೆಸಿ, ಅನ್ಯೋನ್ಯವಾಗಿದ್ದರು. ಈ ವಿಷಯ ವಿದ್ಯಾರ್ಥಿನಿಯ ತಂದೆ ತಾಯಿಗೆ ಗೊತ್ತಾಗಿ, ತಾಯಿ ಆತನೊಡನೆ ಮಾತನಾಡದಂತೆ, ತಾಕೀತು ಮಾಡಿದ್ದರು.
ಕಳೆದ 3 ದಿನದ ಹಿಂದೆ ವಿದ್ಯಾರ್ಥಿನಿ ಆತನ ನಂಬ್ರವನ್ನು ಬ್ಲಾಕ್ ಮಾಡಿದ್ದಳು. ಇದರಿಂದ ದ್ವೇಷಗೊಂಡ ಆತ ಸೆ. 12 ರಂದು ವಿದ್ಯಾರ್ಥಿನಿ ಕಾಲೇಜಿಗೆ ಹೋಗಿ ಸಂಜೆ ಬಸ್ಸಿನಿಂದ ಇಳಿದು ಮನೆಗೆ ಒಬ್ಬಳೇ ನಡೆದುಕೊಂಡು ಬರುವ ಸಮಯ ಕುತ್ಲೂರು ಗ್ರಾಮದ ಬನಶ್ರೀನಗರ ಎಂಬಲ್ಲಿ ನಿರ್ಜನ ಪ್ರದೇಶದಲ್ಲಿ ಆರೋಪಿ, ವಿದ್ಯಾರ್ಥಿನಿಯನ್ನು ತಡೆದು ನಿಲ್ಲಿಸಿ ಮೊಬೈಲನ್ನು ಪಡೆದುಕೊಂಡು ಪರಿಶೀಲಿಸಿ, ನೀನು ಯಾಕೆ ನನ್ನ ಪೋನು ನಂಬ್ರವನ್ನು ಬ್ಲಾಕ್ ಮಾಡಿದ್ದೀಯಾ, ಎಂದು ವಿಚಾರಿಸಿ, ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿದಲ್ಲದೆ ಕಾಲಿನಿಂದ ಹೊಟ್ಟೆಗೆ ತುಳಿದು, ವಿದ್ಯಾರ್ಥಿನಿಯ ಬಟ್ಟೆ ಹರಿದು ಹಾಕಿ, ಮಾನಕ್ಕೆ ಕುಂದುಂಟು ಮಾಡಿದ್ದ ಎಂದು ವಿದ್ಯಾರ್ಥಿನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ.
ಈ ಸಂದರ್ಭ ನೆರೆಕರೆಯವರು ಬರುವುದನ್ನು ಕಂಡು ಅರೋಪಿ ವಿದ್ಯಾರ್ಥಿನಿಗೆ ಮೊಬೈಲ್ ನೀಡಿ, ಜೀವ ಬೆದರಿಕೆ ಹಾಕಿ ಸ್ಥಳದಿಂದ ಹೋಗಿದ್ದು, ಹಲ್ಲೆಗೊಳಗಾಗಿ ಗಾಯಗೊಂಡ ವಿದ್ಯಾರ್ಥಿನಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಈ ದೂರನ್ನು ನೀಡಿದ್ದಾರೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.

Related posts

ಬೆಳ್ತಂಗಡಿ : ಚೆಕ್ ಬೌನ್ಸ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹಾಸನದಲ್ಲಿ ಬಂಧಿಸಿದ ವೇಣೂರು ಪೊಲೀಸರು

Suddi Udaya

ಪೋಟೋವನ್ನು ಆಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಆರೋಪ: ಮಹಿಳೆಯಿಂದ ಪೊಲೀಸ್ ದೂರು: ಆರೋಪಿ ಮೇಲೆ ಪ್ರಕರಣ ದಾಖಲು

Suddi Udaya

ಉಜಿರೆ ಪರಿಸರದ ಕೆಲ ಲಾಡ್ಜಗಳಿಗೆ
ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ, ನೇತೃತ್ವದಲ್ಲಿ ದಾಳಿ: ಕಾನೂನು ಬಾಹಿರ ಚಟುವಟಿಕೆ ನಡೆಸದಂತೆ ಸೂಚನೆ

Suddi Udaya

ಅಕ್ರಮ ಮರಳು ದಾಸ್ತಾನು ಅಡ್ಡೆ ಪತ್ತೆಹಚ್ಚಿದ ವೇಣೂರು ಪೊಲೀಸರು

Suddi Udaya

ಬೆಳ್ತಂಗಡಿ: ಟೆಲಿಗ್ರಾಮ್ ಆಪ್ ಮೂಲಕ ಹಣ ವರ್ಗಾಹಿಸಿ ಮೋಸ: ಓಡಿಲ್ನಾಳ ನಿವಾಸಿ ಸುರೇಶ್ ನಾಯ್ಕ ರಿಗೆ ರೂ. 3.46 ಲಕ್ಷ ವಂಚನೆ

Suddi Udaya

ನಕ್ಸಲ್ ನಾಯಕ ರೂಪೇಶ್ ಪೊಲೀಸ್ ಕಸ್ಟಡಿ ಅಂತ್ಯ ಬೆಳ್ತಂಗಡಿ ನ್ಯಾಯಾಲಯಗೆ ಹಾಜರುಪಡಿಸಿ ಮತ್ತೆ ಕೇರಳ ಜೈಲಿಗೆ

Suddi Udaya
error: Content is protected !!