24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸೆ.15: ಹತ್ಯಡ್ಕ ಪ್ರಾ.ಕೃ.ಪ.ಸ. ಸಂಘ ಅರಸಿನಮಕ್ಕಿ ನೇತೃತ್ವದಲ್ಲಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

ಅರಸಿನಮಕ್ಕಿ: ಹತ್ಯಡ್ಕ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ (ನಿ.), ಅರಸಿನಮಕ್ಕಿ ಇದರ ನೇತೃತ್ವದಲ್ಲಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್, ಪುತ್ತೂರು ಮತ್ತು ಇಂಡಿಯನ್ ರೆಡ್ ಕ್ರಾಸ್ ಲೇಡಿಗೋಶನ್ ಆಸ್ಪತ್ರೆ, ಮಂಗಳೂರು ಇವುಗಳ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವು ಸೆ.15ರಂದು ಹತ್ಯಡ್ಕ ಸಿ. ಎ. ಬ್ಯಾಂಕ್ ಸಭಾಂಗಣದಲ್ಲಿ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿದೆ.

ಉದ್ಘಾಟನೆಯನ್ನು ಅರಸಿನಮಕ್ಕಿ ಮಲ್ನಾಡು ವಸ್ತ್ರಾಲಯ ಮಾಲಕರು ಧರ್ಣಪ್ಪ ಗೌಡ ನೆರವೇರಿಸಲಿದ್ದಾರೆ.

ಅಧ್ಯಕ್ಷತೆಯನ್ನು ಅರಸಿನಮಕ್ಕಿ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ರಾಘವೇಂದ್ರ ನಾಯಕ್ ಬರ್ಗುಳೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸೇವಾಭಾರತಿ ಕನ್ಯಾಡಿ ಖಜಾಂಚಿ ಸಂಸ್ಥಾಪಕರು, ಸೇವಾಧಾಮ ಕೆ. ವಿನಾಯಕ ರಾವ್, ಬೆಳ್ತಂಗಡಿ ರೋಟರಿ ಕ್ಲಬ್ ಸದಸ್ಯ ರೊ| ಉದಯಶಂಕರ್, ಅರಸಿನಮಕ್ಕಿ ಹತ್ಯಡ್ಕ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಉಪಾಧ್ಯಕ್ಷ ರಾಜು. ಕೆ, ಪುತ್ತೂರು ರೋಟರಿ ಕ್ಯಾಂಪ್ಕೊ ಬ್ಲಡ್ ಸೆಂಟರ್ ಮೆಡಿಕಲ್ ಆಫೀಸರ್ ಡಾ| ಕೆ. ಸೀತಾರಾಮ ಭಟ್, ರಕ್ತನಿಧಿ ವಿಭಾಗ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಲೇಡಿಗೋಶನ್ ಆಸ್ಪತ್ರೆ, ಮಂಗಳೂರು ಜಿಲ್ಲಾ ಸಂಯೋಜಕರು ಪ್ರವೀಣ್ ಕುಮಾರ್, ಶ್ರೀದುರ್ಗಾ ಕ್ಲಿನಿಕ್ ಆರಸಿನಮಕ್ಕಿ ಡಾ। ಹರ್ಷಿತ ಸುವಿನ್, ಸುಬ್ರಾಯ ಭಿಡೆ, ಓಣಿ. ಅರಸಿನಮಕ್ಕಿ ಭಾಗವಹಿಸಲಿದ್ದಾರೆ.

Related posts

ಬೆಳ್ತಂಗಡಿಯ ಹಿರಿಯ ಉದ್ಯಮಿ,ಕಲಾಪ್ರೇಮಿ, ಕೊಡುಗೈ ದಾನಿಗುರುವಾಯನಕೆರೆ ಹಂಸ ರೈಸ್ ಮಿಲ್ ಮಾಲಕ ಬಾಲಕೃಷ್ಣ ನಾಯಕ್ ವಿಧಿವಶ

Suddi Udaya

ಕಲ್ಮಂಜ: ಸೀತಾ ಪಟವರ್ಧನ್ ನಿಧನ

Suddi Udaya

ಬೆಳ್ತಂಗಡಿ ರಕ್ಷಿತ್ ಶಿವಾರಾಂ ರವರ ಸಹೋದರಿ ನಟ ವಿಜಯರಾಘವೇಂದ್ರರವರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಹೃದಯಾಘಾತದಿಂದ ನಿಧನ

Suddi Udaya

ಮಡಂತ್ಯಾರು ಗ್ರಾ.ಪಂ ಮಾಜಿ ಸದಸ್ಯ ಸತೀಶ್ ಶೆಟ್ಟಿ ಕುರ್ಡುಮೆ ನಿಧನ

Suddi Udaya

ಗೇರುಕಟ್ಟೆ: ಪರಪ್ಪು ಮಸೀದಿ ಸಮಿತಿಯ ಜೊತೆಕಾರ್ಯದರ್ಶಿ ನಝೀರ್ ಸುಣ್ಣಲಡ್ಡ ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಪದೇ ಪದೇ ಸಂಭವಿಸುತ್ತಿರುವ ಕಾಳ್ಗಿಚ್ಚು ತಡೆಯಲು ಕೊನೆಗೂ ಅರಣ್ಯ ಇಲಾಖೆಯಿಂದ ಸಿಬ್ಬಂದಿ ನಿಯೋಜನೆ

Suddi Udaya
error: Content is protected !!