ಕೊಕ್ಕಡ: ಜೆಸಿಐ ಕೊಕ್ಕಡ ಕಪಿಲಾ ವತಿಯಿಂದ ಜೆಸಿ ಸಪ್ತಾಹದ ಅಂಗವಾಗಿ ನಾಲ್ಕನೇ ದಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೌತಡ್ಕದಲ್ಲಿ ನಾಡಗೀತೆ ರಾಷ್ಟ್ರಗೀತೆ ಬರವಣಿಗೆಯ ಸ್ಪರ್ಧೆ ಕಾರ್ಯಕ್ರಮವು ಸೆ.12 ರಂದು ಜರುಗಿತು.
ಮುಖ್ಯ ಅತಿಥಿಯಾಗಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೌತಡ್ಕದ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಜ್ಯೋತಿ ಹೆಬ್ಬಾರ್ ಪ್ರಾಸ್ತಾವಿಕ ಮಾತುಗಳನ್ನು ನುಡಿದರು. ವಿಜೇತ ಮಕ್ಕಳಾದ ವಿಸ್ಮಿತ, ಹೃತಿಕ್, ಶಾರ್ವರಿ, ನಿಧಾ ಫಾತಿಮಾ, ಸುಶ್ಮಿತಾ, ದೃತಿ, ಶಶಾಂಕ್, ಹೇಮಂತ್, ಪಿ ಲಾಸ್ಯ, ಹನ್ವಿಶ್, ನಾಡಗೀತೆ ರಾಷ್ಟ್ರಗೀತೆ ಬರವಣಿಗೆಯ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಸಂಪನ್ಮೂಲ ವ್ಯಕ್ತಿ ಜೆ ಸಿ ರಾಜಾರಾಮ ಅವರು ಗೀತೆಯನ್ನು ಮಕ್ಕಳಿಗೆ ಹೇಳಿ ಮನರಂಜನೆಗೊಳಿಸಿದರು. ಈ ಸಂದರ್ಭದಲ್ಲಿ ಘಟಕದ ಮಾರ್ಗದರ್ಶಕ ಜೋಸೆಫ್ ಪಿರೇರ, ಜೆಸ್ಸಿಂತ ಡಿಸೋಜ, ನಿಕಟ ಪೂರ್ವ ಅಧ್ಯಕ್ಷರಾದ ಜಿತೇಶ್ ಎಲ್ ಪಿರೇರ, ಯೋಜನೆ ನಿರ್ದೇಶಕರು ಕೆ ಶ್ರೀಧರ್ ರಾವ್, ಶಾಲಾ ಶಿಕ್ಷಕಿಯರಾದ ಶ್ರೀಮತಿ ಕಾಂತಿ , ಪುಷ್ಪ , ಉಪಸ್ಥಿತರಿದ್ದರು.
ಕಾರ್ಯಕ್ರಮದ ಜೆಸಿವಾಣಿ ಧನುಷ್ ಜೈನ್ ವಾಚಿಸಿದರು, ಜೆಸಿಐ ನ ಅಧ್ಯಕ್ಷರು ಸಂತೋಷ್ ಜೈನ್ ಸಾಗತಿಸಿ, ಕಾರ್ಯದರ್ಶಿ ಅಕ್ಷತ್ ರೈ ಧನ್ಯವಾದವಿತ್ತರು.