ಬೆಳ್ತಂಗಡಿ: ಬೆಳ್ತಂಗಡಿ ರೋಟರಿ ಕ್ಲಬ್, ರೋಟರಿ ಕ್ಲಬ್ ಬೆಂಗಳೂರು ಇಂದಿರಾನಗರ ಮತ್ತು ರೋಟರಿ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ತಾಲೂಕಿನ ಒಟ್ಟು 258 ವಿದ್ಯಾರ್ಥಿಗಳಿಗೆ 10.32 ಲಕ್ಷ ರೂ. ಮೊತ್ತದ ವಿದ್ಯಾರ್ಥಿವೇತನ ವಿಸ್ತರಣಾ ಕಾಯ೯ಕ್ರಮ ಸೆ.14ರಂದು ಅರಳಿ ರೋಟರಿ ಭವನದಲ್ಲಿ ಜರುಗಿತು.
ಬೆಳ್ತಂಗಡಿ ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಲಿಯುತ್ತಿರುವ 85 ಶೇಕಡಕ್ಕಿಂತ ಅಧಿಕ ಅಂಕ ಗಳಿಸಿರುವ, ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನವನ್ನು ರೋಟರಿ ಬೆಂಗಳೂರು ಇಂದಿರ ನಗರ ಬೆಳ್ತಂಗಡಿ ರೋಟರಿ ಕ್ಲಬ್ ಇದರ ಅಧ್ಯಕ್ಷರಾದ ರೋ। ಸುಪ್ರಿಯಾ ಖಾಂದಾರಿ ವಿತರಿಸಿದರು .
ಅಧ್ಯಕ್ಷತೆಯನ್ನು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೋ. ಪೂರಣ್ ವಮ೯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಹಾಯಕ ಗವನ೯ರ್ ಮಹಮ್ಮದ್ ಒಳವೂರು, ರೋ.ಜಗದೀಶ್ ಮುಗುಳಿ, ಜಿಲ್ಲಾ ಕಾಯ೯ದಶಿ೯ ಜಗದೀಶ್ ಬಾಳಿಗಾ, ರೋ. ಶ್ರೀಧರ ಪಡ್ವೇಟ್ನಾಯ, ಬೆಳ್ತಂಗಡಿ ರೋಟರಿ ಕ್ಲಬ್ ಕಾಯ೯ದಶಿ೯ ಸಂದೇಶ್ ರಾವ್, ರೋ.ಸುರೇಶ್, ರೋ.ರಾಜಕೌರ್, ರೋ.ಮನೋರಮ, ಬೆಂಗಳೂರು ರೋಟರಿ ಕ್ಲಬ್ ನ ಶ್ರೀಕಾಂತ್, ಸುಂದರ್ ರಾಮ್, ಗುಣ ತಂತ್ರಿ, ಸೌಮ್ಯ, ಪುಷ್ಪ, ಮೊದಲಾದವರು ಉಪಸ್ಥಿತರಿದ್ದರು.
ಶ್ರೀನಿಧಿ ಹೊಳ್ಳ ಮತ್ತು ಸುಷ್ಮಿತಾ ಹೊಳ್ಳ ಪ್ರಾಥ೯ನೆ ಹಾಡಿದರು. ರೋ.ಧನಂಜಯ ರಾವ್ ಸ್ವಾಗತಿಸಿದರು.ಸುವೀರ್ ಜೈನ್ ಕಾಯ೯ಕ್ರಮ ನಿರೂಪಿಸಿದರು. ಬೆಳ್ತಂಗಡಿ ರೋಟರಿ ಕ್ಲಬ್ ಕಳೆದ ಮೂರು ವರ್ಷಗಳಿದ ಈ ಸ್ಕಾಲರ್ಶಿಪ್ ವಿತರಣೆ ಮಾಡುತ್ತಿದ್ದು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಕಾರ್ಯದಲ್ಲಿ ನಿರತವಾಗಿದೆ.