ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2023-24 ನೇ ಸಾಲಿನ ಮಹಾಸಭೆಯು ಸೆ.14 ರಂದು ಸಂಘದ ಜ್ಯೇಷ್ಠ ಸಭಾಭವನದಲ್ಲಿ ಜರುಗಿತು.
ಸಂಘದ ಅಧ್ಯಕ್ಷರಾದ, ಶ್ರೀ ನಾರಾಯಣ ರಾವ್. ಯಂ ರವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು 2023-24ರ ಸಾಲಿನಲ್ಲಿ ರೂ.129 ಕೋಟಿ ವ್ಯವಹಾರ ನಡೆಸಿ, ರೂ.64,30,585 ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.11 ಡಿವಿಡೆಂಡ್ ನೀಡುವುದಾಗಿ ಘೋಷಿಸಿದರು. ರೈತರಿಗೆ ಅನುಕೂಲವಾಗುವ ಹಾಗೆ ಮುಂದಿನ ದಿನಗಳಲ್ಲಿ ರಸ ಗೊಬ್ಬರದ ಬಗ್ಗೆ ತೀರ್ಮಾನಿಸಲಾಗುವುದು ಎಂದರು
2024 ರ ಮೇ ತಿಂಗಳ CA ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಸಂಘದ ಸದಸ್ಯರ ಮಕ್ಕಳಾದ CA ಸುಕನ್ಯಾ ವಿ ಕಾಮತ್,CA ಮೇಘೇಶ್ ಯು . ಶೆಟ್ಟಿ ರವರನ್ನು ಸನ್ಮಾನಿಸಲಾಯಿತು ಅತೀ ಹೆಚ್ಚು ಪಿಗ್ಮಿ ಸಂಗ್ರಹಣೆ ಮಾಡಿದ ಆನಂದ ಕೋಟ್ಯಾನ್ ರವರನ್ನು ಸನ್ಮಾನಿಸಲಾಯಿತು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ ರಾದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಯಿತು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಕಲಾ ಎನ್ ವಾರ್ಷಿಕ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷರಾದ ಶ್ರೀ ವಡಿವೇಲು ನಿರ್ದೇಶಕರುಗಳಾದ ಭಗೀರಥ. ಜಿ ಸುಜಿತಾ ವಿ ಬಂಗೇರ,ಸಚಿನ್ ಕುಮಾರ್ ನೂಜೋಡಿ, ನಾರಾಯಣ ಪೂಜಾರಿ , ಜಯಂತಿ , ಅರುಣ್ ಕುಮಾರ್ , ಪುರಂದರ ಶೆಟ್ಟಿ, ಮೋಹನ್ ನಾಯ್ಕ, ಶಶಿರಾಜ್ ಶೆಟ್ಟಿ, ಅನಂತ ರಾಜ್ ಜೈನ್,,ಡಿ.ಸಿ.ಸಿ. ಪ್ರತಿನಿಧಿ ಸಿರಾಜುದ್ದೀನ್, ಸಂಘದ ಸದಸ್ಯರು ಮತ್ತು ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ನಿರ್ದೇಶಕರಾದ ಸಚಿನ್ ಕುಮಾರ್ ಧನ್ಯವಾದವಿತ್ತರು.