ತಾಲೂಕು ಸುದ್ದಿ

ಇಂದಬೆಟ್ಟು ಗ್ರಾಮದ ಸರ್ವೆ ನಂಬರ್ 234/ ರಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟ ಜಾಗದ ಅತಿಕ್ರಮಣ : ತೆರವುಗೊಳಿಸಿದ ಬೆಳ್ತಂಗಡಿ ತಹಶೀಲ್ದಾರ್.

ಇಂದು ಬೆಟ್ಟು: ಇಂದಬೆಟ್ಟು ಗ್ರಾಮದ ವಾರ್ಡ್ 3 ರಲ್ಲಿ ಪೇರದ್ದಪಲ್ಕೆ ಹಾನಿಬೆಟ್ಟು ತಿರುವಿನ ಪ್ರದೇಶದ ಸರ್ವೇ ನಂಬರ್ 234ರಲ್ಲಿ ಬೆಳ್ತಂಗಡಿ ತಹಶೀಲ್ದಾರ್ ರವರ ಆದೇಶ ಸಂಖ್ಯೆ NCRCR 181/2023.24 ರಂತೆ ಸರ್ಕಾರದ ಸ್ವಾಧೀನಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ರವರ ನೇತೃತ್ವದಲ್ಲಿ ಪಡೆಯಲಾಯಿತು.
ಈ ಕಾರ್ಯಾಚರಣೆಯಲ್ಲಿ ಇಂದಬೆಟ್ಟು, ನಾವೂರು, ಕನ್ಯಾಡಿ, ಕಡಿರುಧ್ಯವರ, ಮಿತ್ತಬಾಗಿಲು, ಮಲವಂತಿಗೆ, ಗ್ರಾಮದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಅಧಿಕಾರಿಗಳಿಗೆ ಸಹಕರಿಸಿದರು. ಬೆಳ್ತಂಗಡಿ ಮನೆಗಾರ್, ಇಂದಬೆಟ್ಟು ವಿ.ಎ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪಂಚಾಯತ್ ಅಧ್ಯಕ್ಷರು, ಸದಸ್ಯರು, ಕಾರ್ಯದರ್ಶಿ, ಕಂದಾಯ ಇಲಾಖೆಯ ಅಧಿಕಾರಿಗಳು, ಪೋಲಿಸ್ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಈ ಸ್ವಾಧೀನ ಪ್ರಕ್ರಿಯೆ ಬಗ್ಗೆ ಪ್ರತಿಕ್ರಿಯೆ ನೀಡಿದ

ಇಂದಬೆಟ್ಟು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಅನಂದ ಅಡಿಲು ಹಲವು ದಶಕಗಳಿಂದ ಬೇಡಿಕೆ ಇರುವ ಹಾಗೂ ಇದರ ಬಗ್ಗೆ ನಿರಂತರವಾಗಿ ಸಾರ್ವಜನಿಕರು ಹಲವು ವರ್ಷಗಳಿಂದ ಗ್ರಾಮ ಸಭೆಗಳಲ್ಲಿ ಹೋರಾಟ ಮಾಡುತ್ತಿದ್ದು ಈ ಭಾಗದಲ್ಲಿ ಮೆಸ್ಕಾಂ ಇಲಾಖೆಯಿಂದ Sub-station ಸಬ್ ಸ್ಟೇಷನ್ ನಿರ್ಮಾಣ ಆಗುವ ಉದ್ದೇಶದಿಂದ ಸರ್ವೇ ನಂಬರ್ 234 */ ರಲ್ಲಿ ಸೂಕ್ತ ಸ್ಥಳವೆಂದು ಗ್ರಾಮ ಸಭೆಗಳಲ್ಲಿ ಗ್ರಾಮಸ್ಥರ ಆಗ್ರಹದಂತೆ ಇಂದಬೆಟ್ಟು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಂಡು ಮಾನ್ಯ ತಹಶೀಲ್ದಾರ ಮೂಲಕ ಈ ಪ್ರಕ್ರಿಯೆ ನಡೆದು ಇಂದು ಸ್ವಾಧೀನ ಪ್ರಕ್ರಿಯೆ ನಡೆದಿರುವುದು ಇದು ಸಮಸ್ತ ಗ್ರಾಮಸ್ಥರ ಹೋರಾಟಕ್ಕೆ ಸಿಕ್ಕ ಗೆಲುವಾಗಿದೆ, ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಮತ್ತು ಸಹಕಾರ ನೀಡಿದ ಸಮಸ್ತರಿಗೂ ವಂದನೆಗಳು ಸಲ್ಲಿಸುತ್ತಾ ಮುಂದೆಯೂ ಅಧಿಕಾರಿಗಳಿಗೆ ಸಮಸ್ತ ಗ್ರಾಮಸ್ಥರ ಪರವಾಗಿ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ತಿಳಿಸಿದರು. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳಿಗೆ, ಜನ ಪ್ರತಿನಿಧಿಗಳಿಗೆ, ಸಾರ್ವಜನಿಕರಿಗೆ ಇಂದಬೆಟ್ಟು ಗ್ರಾಮ ಪಂಚಾಯತ್ ವತಿಯಿಂದ ಧನ್ಯವಾದಗಳನ್ನು ಸಲ್ಲಿಸಲಾಯಿತು.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಶ್ರಾವಣ ತರಬೇತಿ ಸಪ್ತಾಹದ ಉದ್ಘಾಟನೆ

Suddi Udaya

ಇತಿಹಾಸ ಪ್ರಸಿದ್ಧ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮ ಕುಂಭಾಭಿಷೇಕ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಭೇಟಿ

Suddi Udaya

ಜು.13: ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ಧೇಶ ಸಹಕಾರ ಸಂಘದ ಶ್ರೀ ಗುರು ಸಾನಿಧ್ಯ ವಾಣಿಜ್ಯ ಸಂಕೀರ್ಣದ ಲೋಕಾರ್ಪಣೆ

Suddi Udaya

ಭವಿಷ್ಯದ ಶಿಕ್ಷಣದತ್ತ ಮತ್ತೊಂದು ದಿಟ್ಟ ಹೆಜ್ಜೆ – ಎಕ್ಸೆಲ್ ಟೆಕ್ನೋ ಶಾಲೆಯಲ್ಲಿ AI & ರೋಬೋಟಿಕ್ಸ್ ತರಗತಿಗಳ ಆರಂಭ

Suddi Udaya

ಜೆಸಿಐ ಬೆಳ್ತಂಗಡಿ ಜೆಸಿ ಸಪ್ತಾಹ ಅಂಗವಾಗಿ ಗಣೇಶ್ ಆಸ್ಪತ್ರೆ ಇದರ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

Suddi Udaya

ಎಸ್‌ಡಿಪಿಐ ತೆಂಕಕಾರಂದೂರು ವತಿಯಿಂದ ಪೆರಲ್ದಾರಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya
error: Content is protected !!