25.4 C
ಪುತ್ತೂರು, ಬೆಳ್ತಂಗಡಿ
May 18, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ವಿದ್ಯಾರ್ಥಿಗೆ ಬೆತ್ತದಿಂದ ಥಳಿಸಿದ ಶಿಕ್ಷಕನ ವಿರುದ್ದ ದೂರು ದಾಖಲು

ಉಪ್ಪಿನಂಗಡಿ: ತಪ್ಪು ಮಾಡಿದ್ದಾನೆ ಎಂದು ಇಂಗ್ಲಿಷ್ ಭಾಷೆ ಬೋಧಿಸುವ ಶಿಕ್ಷಕರೊಬ್ಬರು ವಿದ್ಯಾರ್ಥಿಗೆ ಮೂರು ದಿನಗಳಿಂದ ಬೆತ್ತದಿಂದ ಹೊಡೆದಿದ್ದು, ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿ ಶಿಕ್ಷಕನ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿ ಬೆಳ್ತಂಗಡಿ ತಾಲೂಕು ಉರುವಾಲು ನಿವಾಸಿಯಾಗಿದ್ದು, ಪದ್ಮುಂಜ ಸರಕಾರಿ ಪ್ರೌಢಶಾಲೆಯ ೯ನೇ ತರಗತಿ ವಿದ್ಯಾರ್ಥಿ. ಇಂಗ್ಲಿಷ್ ಭಾಷಾ ಶಿಕ್ಷಕ ಈ ವಿದ್ಯಾರ್ಥಿಗೆ ಸೆ.೯, ೧೦, ೧೧ರಂದು ಬೆತ್ತದಿಂದ ಹೊಡೆದಿದ್ದು, ಈ ವಿಚಾರವನ್ನು ವಿದ್ಯಾರ್ಥಿ ಯಾರಿಗೂ ತಿಳಿಸದೆ ಸುಮ್ಮನಿದ್ದ. ಬಳಿಕ ನೋವು ಜಾಸ್ತಿಯಾದ ಕಾರಣ ಮನೆಯವರಿಗೆ ವಿಚಾರ ತಿಳಿಸಿದ್ದ. ಮನೆಯವರು ವಿಚಾರಿಸಿದಾಗ ವಿದ್ಯಾರ್ಥಿ ನಡೆದ ಘಟನೆಯನ್ನು ತಿಳಿಸಿದ್ದು, ಬಳಿಕ ಮನೆಯವರು ವಿದ್ಯಾರ್ಥಿಯನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿ, ಶಿಕ್ಷಕನ ವಿರುದ್ಧ ದೂರು ನೀಡಿದ್ದಾರೆ.

Related posts

ಉಜಿರೆ : ಕಾಲೇಜು ವಿದ್ಯಾರ್ಥಿ ಚಂದ್ರಶೇಖರ್ ಗೌಡ ನಿಧನ

Suddi Udaya

ಸುದೇಮುಗೇರು ಅಂಗನವಾಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ನನ್ನ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆನಾನು ತಪ್ಪು ಮಾಡಿದ್ದರೆ ಸುರುವಿಗೆ ಮಾರಿಗುಡಿ ಅಮ್ಮ ನನಗೆ ಪ್ರಾಯಶ್ಚಿತ ಮಾಡಲಿ,

Suddi Udaya

ಸುಲ್ಕೇರಿ ಗ್ರಾ. ಪಂ. ವ್ಯಾಪ್ತಿಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಅಲ್ ಬದ್ರಿಯ್ಯೀನ್ ಫ್ಯಾಮಿಲಿ ಗ್ರೂಪ್; ಅಧ್ಯಕ್ಷರಾಗಿ ಅಶ್ರಫ್ ಆಲಿಕುಂಞಿ ಪುನರಾಯ್ಕೆ

Suddi Udaya

ಬೆಳ್ತಂಗಡಿ: ರಾಜ್ಯ ಸರ್ಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದಿಂದ ಆರೋಗ್ಯ ಇಲಾಖೆ ನೌಕರರಿಗೆ ಉಚಿತ ಸಮವಸ್ತ್ರ ವಿತರಣೆ

Suddi Udaya
error: Content is protected !!