23.5 C
ಪುತ್ತೂರು, ಬೆಳ್ತಂಗಡಿ
April 4, 2025
ಶಾಲಾ ಕಾಲೇಜು

ನಿಡ್ಲೆ ಸರಕಾರಿ ಪ್ರೌಢಶಾಲೆ ನೂತನ ಹಳೆ ವಿದ್ಯಾರ್ಥಿ ಸಂಘ ರಚನೆ

ನಿಡ್ಲೆ :ಸರ್ಕಾರಿ ಪ್ರೌಢಶಾಲೆ ನಿಡ್ಲೆ ಇಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಸಮ್ಮಿಲನ ಕಾರ್ಯಕ್ರಮ ಸೆ. 14ರಂದು ನಡೆಯಿತು. ಅನೇಕ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹಿರಿಯ ವಿದ್ಯಾರ್ಥಿಗಳು ಪರಸ್ಪರ ತಮ್ಮ ಪರಿಚಯದೊಂದಿಗೆ ಶಾಲೆಯಲ್ಲಿ ಕಲಿತ ದಿನಗಳನ್ನು ಮೆಲಕು ಹಾಕಿದರು. ಇದೇ ಸಂದರ್ಭದಲ್ಲಿ ನೂತನ
ಪದಾಧಿಕಾರಿಗಳ ಆಯ್ಕೆ ನಡೆಯಿತು.
ನೂತನ ಪದಾಧಿಕಾರಿ ಗಳನ್ನು ಆಯ್ಕೆ ಮಾಡಲಾಯಿತು
ಅಧ್ಯಕ್ಷರಾಗಿ ಶ್ರೀ ರಾಜ ಗುರು ಹೆಬ್ಬಾರ್
ಉಪಾಧ್ಯಕ್ಷರಾಗಿ ಶ್ರೀ ಕೃಷ್ಣ ಪ್ರಸಾದ್
ಕಾರ್ಯದರ್ಶಿ ಶ್ರೀ ಜಗದೀಶ ಶೆಟ್ಟಿ
ಉಪ ಕಾರ್ಯದರ್ಶಿಶ್ರೀ ಯುವರಾಜ
ಕೋಶಾಧಿಕಾರಿ ಶ್ರೀ ಬಾಲಕೃಷ್ಣ ಶೆಟ್ಟಿ. ಪದನಿಮಿತ್ತ ಕಾರ್ಯದರ್ಶಿಯಾಗಿ ಮುಖ್ಯ ಶಿಕ್ಷಕರಾದ ಶಾಂತ ಶೆಟ್ಟಿ ಇವರು ಕಾರ್ಯ ನಿರ್ವಹಿಸುತ್ತಾರೆ.
ಈ ಸಂದರ್ಭದಲ್ಲಿ ಆಂಗ್ಲಭಾಷಾ ಶಿಕ್ಷಕಿಯಾದ ಶೋಲಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು.. ಶಾಲಾ ಸುವರ್ಣ ಸಂಭ್ರಮದಿಂದ 10 ವರ್ಷಗಳ ಕಾಲ ಸಂಘದ ಅಧ್ಯಕ್ಷರಾಗಿದ್ದ ಲಕ್ಷ್ಮಿ ನಾರಾಯಣ ಭಟ್ ಶುಭ ಹಾರೈಸಿದರು. ನೂತನ ಅಧ್ಯಕ್ಷರಾದ ರಾಜಗುರು ಹೆಬ್ಬಾರ್ ಅವರು ಎಲ್ಲರ ಸಹಕಾರವನ್ನು ಕೋರಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಗೌಡ ಇವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕರಾದ ಶಾಂತಾ ಇವರು ಸ್ವಾಗತಿಸಿ ಸುಚಿತ್ರ ಇವರು ಧನ್ಯವಾದವಿತ್ತ ಈ ಕಾರ್ಯಕ್ರಮವನ್ನು ಶರತ್ ಕುಮಾರ್ ತುಳುಪುಳೆ ನಿರ್ವಹಿಸಿದರು. ಎಸ್ ಡಿಎಂಸಿ ಸದಸ್ಯರು, ಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related posts

ನಾರಾವಿ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ವಾಲಿಬಾಲ್ ಪಂದ್ಯಾಟ

Suddi Udaya

ಶಿಬರಾಜೆ: ಪರಪ್ಪು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯಿಂದ ಶಾಲೆತ್ತಡ್ಕ ಸ. ಪ್ರೌಢಶಾಲೆಗೆ ಚೇಯರ್ ಕೊಡುಗೆ

Suddi Udaya

ಬಂಗಾಡಿ ಸ.ಪ್ರೌ. ಶಾಲೆಗೆ ಗಣಿತದ ಅನರ್ಘ್ಯ ಪ್ರತಿಭೆ ರಾಷ್ಟ್ರಪತಿ ಪುರಸ್ಕೃತ ಬಸವರಾಜ್ ಶಂಕರ್ ಉಮ್ರಾಣಿ ಭೇಟಿ, ವಿದ್ಯಾರ್ಥಿಗಳೊಂದಿಗೆ ಸಂವಾದ

Suddi Udaya

ಪುಂಜಾಲಕಟ್ಟೆ: ವ್ಯಕ್ತಿತ್ವ ವಿಕಸನ ಮತ್ತು ಸಮಯ ನಿರ್ವಹಣೆಯ ಬಗ್ಗೆ ಕಾರ್ಯಾಗಾರ

Suddi Udaya

ಪುಂಜಾಲಕಟ್ಟೆ ಕೆ ಪಿ ಎಸ್ ಪದವಿ ಪೂರ್ವ ವಿಭಾಗದ ಕಂಪ್ಯೂಟರ್ ವಿಭಾಗದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ

Suddi Udaya
error: Content is protected !!