ಪೆರಾಡಿ:ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕಳೆದ 39 ವರ್ಷಗಳ ಕಾಲ ಸೇವೆ ಸಲ್ಲಿಸಿ,ಎಲ್ಲರ ಮೆಚ್ಚುಗೆ ಗಳಿಸಿದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು.ಶೇಖ್ ಲತೀಫ್- ಪೌಝೀಯ ಬೇಗಂ ದಂಪತಿಯನ್ನು ಸಂಘದ ವತಿಯಿಂದ ಸನ್ಮಾನಿಸಿ,ಗೌರವಿಸಲಾಯಿತು.
ಶ್ರೀ ಕ್ಷೇತ್ರ ಪಡ್ಯಾರಬೆಟ್ಟುವಿನ ಅನುವಂಶೀಯ ಆಡಳಿತ ಮೋಕ್ತೇಸರಾದ ಎ.ಜೀವಂಧರ್ ಕುಮಾರ್ ಅವರನ್ನು ಸನ್ಮಾನಿಸಿ ಶುಭ ಹಾರೈಸಿದರು.
ಸಂಘದ ಅಧ್ಯಕ್ಷ ಸತೀಶ್ ಕೆ ಕಾಶಿಪಟ್ನ ಅಧ್ಯಕ್ಷತೆ ವಹಿಸಿ ಮಾತನಾಡಿ ಯು.ಶೇಖ್ ಲತೀಫ್ ಅವರು ಸಹಕಾರಿ ರಂಗದಲ್ಲಿ ಅಪಾರ ಜ್ಞಾನವನ್ನು ಹೊಂದಿರುವ ಮುಖ್ಯಕಾರ್ಯನಿರ್ವಹಣಾಧಿಕಾರಿ.ಬ್ಯಾಂಕಿಗೆ ಬರುವ ಎಲ್ಲರನ್ನೂ ಒಂದೇ ಭಾವನೆಯಿಂದ ಗೌರವಿಸಿ, ಬ್ಯಾಂಕಿನಿಂದ ಸಿಗುವ ಸವಲತ್ತುಗಳನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ, ಎಲ್ಲರ ಪ್ರೀತಿ ,ವಿಶ್ವಾಸ, ನಂಬಿಕೆ ಗಳಿಸಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಬೆಂಗಳೂರು ವಿಶ್ವವಿದ್ಯಾನಿಲಯದ ಕುಲ ಸಚಿವರರಾದ ಶೇಖ್ ಲತೀಫ್, ಕೆ.ಎ.ಎಸ್,ಬೆಳ್ತಂಗಡಿ ಶ್ರೀ ಗುರುದೇವ ವಿವಿದ್ದೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷ ಭಗೀರಥ ಜಿ,ಮರೋಡಿ ಗ್ರಾ.ಪಂ ಅಧ್ಯಕ್ಷ ರತ್ನಾಕರ ಬುಣ್ಣನ್,ಕಾಶಿಪಟ್ನ ಗ್ರಾ.ಪಂ ಉಪಾಧ್ಯಕ್ಷೆ ಶುಭವಿ,ರಾಜೇಂದ್ರ ಕುಮಾರ್ ಪೆರಾಡಿಬೀಡು,ಸ್ಥಳಿಯ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಯಶೋಧರ ಆಚಾರ್ಯ,ನಾರಾಯಣ ಭಟ್,ಸುಧಾಕರ ಪೂಜಾರಿ,
ಪೆರಾಡಿ ಸಿಎ ಬ್ಯಾಂಕಿನ ಉಪಾಧ್ಯಕ್ಷೆ ದೇವಕಿ ಡಿ ಶೆಟ್ಟಿ,ನಿರ್ದೇಶಕರಾದ ಎನ್.ಆರ್ ಸೀತರಾಮ ರೈ,ಪ್ರವೀಣ್ ಗಿಲ್ಬರ್ಟ್ ಪಿಂಟೋ,ಪುತ್ತು ನಾಯ್ಕ,ಹರಿಪ್ರಸಾದ್ ಪಿ,ಧರ್ಣಪ್ಪ ಪೂಜಾರಿ,ಶ್ರೀಮತಿ ಸುಜಾತ,ಶ್ರೀಪತಿ ಉಪಾಧ್ಯಾಯ,ರಾಜೇಶ್ ಎನ್.ಶೆಟ್ಟಿ, ಕೃಷ್ಣಪ್ಪ,ದ.ಕ.ಜಿ.ಕೇ.ಬ್ಯಾಂಕ್ ಪ್ರತಿನಿಧಿ ಸುದರ್ಶನ್
ಉಪಸ್ಥಿತರಿದ್ದರು.