ಗುರುವಾಯನಕೆರೆ: ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎಸ್. ಜಯರಾಮ ಶೆಟ್ಟಿ ಪಡಂಗಡಿ ಇವರ ಅಧ್ಯಕ್ಷತೆಯಲ್ಲಿ ಸೆ.15ರಂದು ಗುರುವಾಯನಕೆರೆ ಬಂಟರಭವನದಲ್ಲಿ ನಡೆಯಿತು.
ಸಂಘವು ವರದಿ ಸಾಲಿನಲ್ಲಿ ರೂ.721 ಕೋಟಿ ವಾರ್ಷಿಕ ವ್ಯವಹಾರ ನಡೆಸಿ,ರೂ.2.50 ಕೋಟಿ ನಿವ್ವಳ ಲಾಭ ಗಳಿಸಿದ್ದು ಸಂಘದ ಅಧ್ಯಕ್ಷ ಎಸ್. ಜಯರಾಮ ಶೆಟ್ಟಿ ಪಡಂಗಡಿ ಸದಸ್ಯರಿಗೆ ಶೇ.18 ಡಿವಿಡೆಂಟ್ ಘೋಷಿಸಿದರು.
ನಿರ್ದೇಶಕರಾದ ಬಿ. ಸೀತಾರಾಮ ಶೆಟ್ಟಿ ಮಂಗಳೂರು, ಬಾಲಕೃಷ್ಣ ಪೂಂಜ ಮದ್ದಡ್ಕ, ನಾರಾಯಣ ಶೆಟ್ಟಿ ಕುಂಟಿನಿ, ಕೃಷ್ಣ ರೈ ಟಿ. ಸಬರಬೈಲು, ರಘುರಾಮ ಶೆಟ್ಟಿ “ಸಾಧನಾ” ಉಜಿರೆ, ಶ್ರೀಮತಿ ಅಂಬಾ ಬಿ. ಆಳ್ವ ಶ್ರೀರಕ್ಷಾ ನಾಳ, ಪುರಂದರ ಶೆಟ್ಟಿ ಪಾಡ್ಯಾರ್, ಜಯರಾಮ ಭಂಡಾರಿ ಎಂ. ಧರ್ಮಸ್ಥಳ, ಶ್ರೀಮತಿ ಸಾರಿಕಾ ಶೆಟ್ಟಿ ಧರ್ಮಸ್ಥಳ ಹಾಗೂ ಸದಸ್ಯರುಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಜಯ್ ಶೆಟ್ಟಿ ವರದಿ ಹಾಗೂ ಲೆಕ್ಕಪತ್ರ ಮಂಡಿಸಿ, ನಿರೂಪಿಸಿದರು. ಸಿಬ್ಬಂದಿಗಳಾದ ರಂಜನ್ ಹಾಗೂ ಶ್ರೀಮತಿ ಸವಿತಾ ಪ್ರಾರ್ಥಿಸಿದರು. ನಿರ್ದೇಶಕರಾದ ರಘುರಾಮ ಶೆಟ್ಟಿ ಸ್ವಾಗತಿಸಿ, ಜಯಂತ್ ಶೆಟ್ಟಿ ಧನ್ಯವಾದವಿತ್ತರು.