ಅರಸಿನಮಕ್ಕಿ : ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.)ಅರಸಿನಮಕ್ಕಿ ಇದರ ವಾರ್ಷಿಕ ಮಹಾಸಭೆಯು ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆ. 15ರಂದು ಸಹಕಾರಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ನಾಯಕ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ರಾಜು ಕೆ, ನಿರ್ದೇಶಕರಾದ ಕೊರಗಪ್ಪ ಗೌಡ, ರತೀಶ್ ಬಿ, ಧರ್ಮರಾಜ್ ಎ., ಶ್ರೀಮತಿ ಶ್ರೀಮತಿ ತಾರಾ ಟಿ. ಚಿಪ್ಳುಣ್ ಕರ್, ಶ್ರೀಮತಿ ಗಂಗಾವತಿ, ಶ್ರೀಮತಿ ಬೇಬಿ ನಾಗೇಶ್ ಜಿ.,ಕುಶಾಲಪ್ಪ ಗೌಡ, ಬೇಬಿ ಕಿರಣ್, ಮುರಳೀಧರ ಶೆಟ್ಟಿಗಾರ್, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ. ರವಿಚಂದ್ರ ರಾವ್ ಉಪಸ್ಥಿತರಿದ್ದರು.
ವರದಿ ವರ್ಷದಲ್ಲಿ ರೂ. 317ಕೋಟಿ ವ್ಯವಹಾರ ಆಗಿರುತ್ತದೆ ಮತ್ತು ಇದರಿಂದ ಸಂಘಕ್ಕೆ ರೂ.1.52 ಕೋಟಿ ಲಾಭ ಬಂದಿರುತ್ತದೆ, ಸದಸ್ಯರಿಗೆ ಶೇ.12 ಡಿವಿಡೆಂಡ್ ನೀಡುವುದಾಗಿ ಅಧ್ಯಕ್ಷರು ಘೋಷಿಸಿದರು.
ಈ ಸಂದರ್ಭ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪಿ ಇವರನ್ನು ಸನ್ಮಾನಿಸಲಾಯಿತು ಹಾಗೂ 2023- 24 ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಧನವಿತ್ತು ಪುರಸ್ಕರಿಸಲಾಯಿತು ಅಲ್ಲದೆ ನಿವೃತ್ತರಾದ ಶಿಕ್ಷಕಿಯರನ್ನು ಗೌರವಿಸಲಾಯಿತು. ಸುಂದರ ಉಪ್ಪರಕ್ಕ ರವರಿಗೆ ಕನ್ಯಾಡಿ ಸೇವಾ ಭಾರತಿ ವತಿಯಿಂದ ವೀಲ್ ಚರ್ ವಿತರಿಸಲಾಯಿತು
ಸುಜಿತಾ ರೈ ಪ್ರಾರ್ಥಿಸಿದರು ನಿರ್ದೇಶಕ ರತೀಶ್ ಗೌಡ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ. ರವಿ ಚಂದ್ರ ರಾವ್ ವಾರ್ಷಿಕ ವರದಿ ಓದಿದರು. ಉಪ ಕಾರ್ಯದರ್ಶಿ ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಮರಳೀಧರ ಶೆಟ್ಟಿಗಾರ್ ಧನ್ಯವಾದಗಳು