25.7 C
ಪುತ್ತೂರು, ಬೆಳ್ತಂಗಡಿ
May 19, 2025
ಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಗುರುವಾಯನಕೆರೆ ಎಕ್ಸೆಲ್ ವಿದ್ಯಾರ್ಥಿಗಳ ಪಾಲಕರ 301 ಶಿಕ್ಷಕರಿಗೆ ಗೌರವಾರ್ಪಣೆ : ಸಂಸ್ಕಾರಯುತ,ಗುಣಮಟ್ಟದ ಶಿಕ್ಷಣಕ್ಕೆ ಎಕ್ಸೆಲ್ ಕಾಲೇಜು ರಾಜ್ಯ ಮಟ್ಟದಲ್ಲಿ ಗುರುತಿಸಿದೆ: ಮೂಡುಬಿದಿರೆ ಭಟ್ಟಾರಕ ಶ್ರಿಗಳು

ಬೆಳ್ತಂಗಡಿ: ಭಾರತದ ಸಂಸ್ಕಾರ, ಸಂಸ್ಕೃತಿಯ ಪರಂಪರೆಯಿಂದ ಜಗತ್ತಿನಲ್ಲಿ ಭಾರತ ಉನ್ನತ ಮಟ್ಟದಲ್ಲಿ ಬೆಳಗುತ್ತಿದೆ.ಅದೇ ರೀತಿ ಗುರುವಾಯನಕೆರೆ ಎಕ್ಸೆಲ್ ಕಾಲೇಜು ಗುಣಮಟ್ಟದ ಶಿಕ್ಷಣದ ಜೊತೆ ಸಂಸ್ಕಾರಯುತ ಶಿಕ್ಷಣ ನೀಡುವುದರಿಂದ ರಾಜ್ಯದ ಪೋಷಕರು ಎಕ್ಸೆಲ್ ಕಾಲೇಜನ್ನು ಪ್ರೀತಿಸುತ್ತಿದ್ದು ಇಂದು ಶಿಕ್ಷಣ ಕ್ರಾಂತಿಯಲ್ಲಿ ಎಕ್ಸೆಲ್ ಕಾಲೇಜು ರಾಜ್ಯಮಟ್ಟದಲ್ಲಿ ಬೆಳೆದಿದೆ ಎಂದು ಹೇಳಲು ಸಂತೋಷವಾಗುತ್ತಿದೆ ಎಂದು ಮೂಡಬಿದರೆ ಜೈನ ಮಠದ ಸ್ವಸ್ತಿ ಶ್ರಿ ಭಾರತಭೂಷಣ ಡಾ ಚಾರುಕೀರ್ತಿ ಭಟ್ಟಾರಕ ಪಂಡಿತಾರ್ಯವರ್ಯ ಶ್ರಿ ಗಳು ನುಡಿದರು. ‌‌

‌‌‌ ಅವರು ಭಾನುವಾರ ಗುರುವಾಯನಕೆರೆ ಕುವೆಟ್ಟು ಎಕ್ಸೆಲ್ ಪದವಿ ಪೂರ್ವ ಕಾಲೇಜು ವಿದ್ಯಾಸಾಗರ ಕ್ಯಾಂಪಸ್ ಇಲ್ಲಿ ನಡೆದ ಎಕ್ಸೆಲ್ ವಿದ್ಯಾರ್ಥಿಗಳ‌ ಪಾಲಕರಾದ 301 ಶಿಕ್ಷಕರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿ ವಿದ್ಯಾರ್ಥಿಗಳು ಸಾಧಕರ ವಿದ್ವಾಂಸರ ಸಾಧನೆಗಳನ್ನು ಅರಿತುಕೊಳ್ಲುವ ಮನೋಭಾವ ವಿದ್ಯಾರ್ಥಿ ದೆಸೆಯಲ್ಲಿಯೇ ಬೆಳೆಸಬೇಕು.ಆಗ ದೇಶದ ಉತ್ತಮ ಪ್ರಜೆಗಳಾಗಳು ಸಾದ್ಯ ಎಂದರು. ವಿಧಾನ ಪರಿಷತ್ ಶಾಸಕ ಎಸ್ ಎಲ್ ಬೋಜೇಗೌಡ ಮಾತನಾಡಿ ಶಿಕ್ಷಣ ಮತ್ತು ಅರೋಗ್ಯ ಪ್ರಜಾಪ್ರಭುತ್ವ ರಾಷ್ಡದಲ್ಲಿ ಪ್ರತಿಯೊಬ್ವರ ಹಕ್ಕು. ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲಿ ನಾನು ಎಂಬ ಅಹಂ ಇಡದೆ ಶಿಕ್ಷಣವೇ ನನ್ನ ಗುರಿ ಎಂದು ಭಾವಿಸಬೇಕು. ಪೋಷಕರು ಕೂಡ ಮಕ್ಕಳಿಗೆ ತಮ್ಮ ಶ್ರಮ ಚಿಂತನೆಗಳನ್ನು ಮುಕ್ತವಾಗಿ ಹಂಚಿಕೊಳ್ಳ ಬೇಕು.ಮಕ್ಕಳೊಂದಿಗೆ ಪ್ರೀತಿಯ ಭಾವನೆ ಇಡಬೇಕು ಎಂದರು. ದೆಹಲಿ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ಪ್ರಾದ್ಯಾಪಕ ಪ್ರೊ| ಡಾ . ರಮೇಶ್ ಸಾಲಿಯಾನ್ ದಿಕ್ಸೂಚಿ ಭಾಷಣ ಮಾಡಿ ಗುರುವಾಯನಕೆರೆ ಎಂಬ ಪ್ರದೇಶ ಶಿಕ್ಷಣ ಕ್ಷೇತ್ರವಾಗಿ ಬೆಳಗಳು ಎಕ್ಸೆಲ್ ಕಾಲೇಜು ಕಾರಣವಾಗಿದೆ, ವಿದ್ಯಾರ್ಥಿಗಳಿಗೆ ಪದವಿ ,ಕಾಲೇಜು ಶಿಕ್ಷಣ ಭವಿಷ್ಯ ರೂಪಿಸುವ ತಾಣವಾಗುತ್ತದೆ. ಕಾಲೇಜಿನಲ್ಲಿ ಕಠಿಣ ಶಿಕ್ಷಣ ಸಿಗುತ್ತಿದೆ ಎಂದರೆ ಮಕ್ಕಳ ಭವಿಷ್ಯ ಸುಲಭವಾಗುತ್ತಿದೆ ಎಂದರ್ಥ. ಪೋಷಕರು ಮಕ್ಕಳ ಶಿಕ್ಷಣದಲ್ಲಿ ಅತಿಯಾದ ಅನುಕಂಪ ಬೇಡ ಕಲಿಯುವ ಸಮಯ ಕಲಿಯಲಿ ಮತ್ತೆ ಅವರ ಬದುಕು ನೆಮ್ಮದಿಯಿಂದ ಇರುತ್ತದೆ ಎಂದರು.ವಿದ್ಯಾರ್ಥಿಗಳು ಟೀಕೆಯ ಕಡೆ ಗಮನ ಹರಿಸಬೇಡಿ ಟೀಕೆಯನ್ನು ಭವಿಷ್ಯದ ಪಾಠ ಎಂದು ತಿಳಿಯಿರಿ. ಶಿಕ್ಷಣವನ್ನು ಒತ್ತಡ ಎಂದು ಎನ್ನದೆ ಪ್ರೀತಿಯಿಂದ ಕಾಣಬೇಕು ಎಂದರು.

ಗುರುವಾಯನಕೆರೆ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅದ್ಯಕ್ಷ ಸುಮಂತ್ ಕುಮಾರ್ ಜೈನ್ ಅದ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಕಾರ್ಯದರ್ಶಿ ಅಭಿರಾಮ್ ಜಿ .ಎಸ್, ಎಕ್ಸೆಲ್ ಅರಮಲೆ ಬೆಟ್ಡ ಕ್ಯಾಂಪಸ್ ನ ಪ್ರಭಾರ ಪ್ರಾಚಾರ್ಯ ಡಾ. ಪ್ರಜ್ವಲ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಡಾ. ನವೀನ್ ಕುಮಾರ್ ಮರಿಕೆ ಪ್ರಸ್ತ್ತಾವಿಸಿ ಸ್ವಾಗತಿಸಿದರು. ದಾಖಲೆಯಾಗಿ ಎಕ್ಸೆಲ್ ವಿದ್ಯಾರ್ಥಿಗಳ ಪಾಲಕರಾದ 301 ಶಿಕ್ಷಕರಿಗೆ ಗೌರವಾರ್ಪಣೆ ನಡೆಯಿತು. ಡಾ. ಪ್ರಜ್ವಲ್ ವಂದಿಸಿದರು. ಉಪನ್ಯಾಸಕರುಗಳಾದ ದುರ್ಗಾ ಪರಮೇಶ್ವರ್, ಪ್ರಜ್ವಿತ್,ಪ್ರಸನ್ನ ಕುಮಾರ್ ,ಸಂತೋಷ್ ಕೆ.ಕೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿಠಲ ನಾಯಕ್ ಕಲ್ಲಡ್ಕ ಬಳಗದವರಿಂದ ಗೀತ ಸಾಹಿತ್ಯ ಸಂಭ್ರಮ ನಡೆಯಿತು.

Related posts

ರಾಷ್ಟ್ರಮಟ್ಟದ ಹಿರಿಯರ ಟೆನ್ನಿಸ್ ವಾಲಿಬಾಲ್ ಪಂದ್ಯಾಟ: ಶ್ರೀ ಧ.ಮಂ. ಕ್ರೀಡಾ ಸಂಘದ ವಿದ್ಯಾರ್ಥಿಗಳು ತೃತೀಯ ಸ್ಥಾನ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಶೋನಮನ ಕಾರ್ಯಕ್ರಮ

Suddi Udaya

ಮಚ್ಚಿನ ಸರ್ಕಾರಿ ಪ್ರೌಢ ಶಾಲೆಗೆ ಹಸಿರು ನೈರ್ಮಲ್ಯ ಅಭ್ಯುದಯ ಪ್ರಶಸ್ತಿ ಪ್ರದಾನ

Suddi Udaya

ಪದ್ಮುಂಜ ಸ.ಹಿ.ಪ್ರಾ. ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಪುರುಷೋತ್ತಮ ಗೌಡ ಮುಗೆರೋಡಿ, ಉಪಾಧ್ಯಕ್ಷರಾಗಿ ಗೀತಾ ಶೆಟ್ಟಿ ಆಯ್ಕೆ

Suddi Udaya

ಶಿಶಿಲ: ದ್ವಿತೀಯ ಪಿಯು ಪರೀಕ್ಷೆ- ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಅಂಗನವಾಡಿ ಕಾರ್ಯಕರ್ತೆ

Suddi Udaya

ವಲಯ ಮಟ್ಟದ ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ: ವಾಣಿ ಆಂ.ಮಾ.ಪ್ರೌ. ಶಾಲೆಗೆ ರನ್ನರ್‍ಸ್ ಚಾಂಪಿಯನ್ ಮತ್ತು ಹಲವು ಪ್ರಶಸ್ತಿಗಳು

Suddi Udaya
error: Content is protected !!