25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ವಿಶ್ವಕರ್ಮಾಭ್ಯುದಯ ಸಭಾ ಇದರ ಶ್ರೀ ವಿಶ್ವಕರ್ಮ ಯಜ್ಞ ಮತ್ತು ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ

ಬೆಳ್ತಂಗಡಿ : ವಿಶ್ವಕರ್ಮಾಭ್ಯುದಯ ಸಭಾ ಇದರ ಶ್ರೀ ವಿಶ್ವಕರ್ಮ ಯಜ್ಞ ಮತ್ತು ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವು ಶಿವಪ್ರಸಾದ ಪುರೋಹಿತ್ ಸವಣಾಲು ಇವರ ಪೌರೋಹಿತ್ಯದಲ್ಲಿ ಸೆ.16ರಂದು ಲಾಯಿಲ ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು.

ಮುರ್ಡೇಶ್ವರ ಆರ್ ಎನ್ ಎಸ್ ಪಾಲಿಟೆಕ್ ನಿಕ್ ವಿಭಾಗೀಯ ಮುಖ್ಯಸ್ಥ ಚೇಂಪಿ ದಿನೇಶ್ ಆಚಾರ್ಯ ಧಾರ್ಮಿಕ ಉಪನ್ಯಾಸವನ್ನು ನೀಡಿ, ನಮ್ಮ ಮಕ್ಕಳಿಗೆ ಆಧ್ಯಾತ್ಮದ ಬಗ್ಗೆ ಅಧ್ಯಾಯನ ಮಾಡಿಸುವಂತಹ ಕೆಲಸಗಳಾಗಬೇಕು. ನಮ್ಮ ಸಂಸ್ಕಾರವನ್ನು ಮರೆಯದೆ ಬ್ರಾಹ್ಮಣತ್ವವನ್ನು ಕಾಪಾಡಿಕೊಂಡು ಹೋಗಬೇಕು. ಶಿಲ್ಪಕಲೆಯಿಂದಾಗಿ ಭಾರತ ಇಂದು ಪ್ರಪಂಚದಲ್ಲಿ ಗುರುತಿಸಲ್ಪಟ್ಟಿದೆ ಎಂದರು.

ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಸಾಧಕರಿಗೆ ವಿದ್ಯಾರ್ಥಿ ವೇತನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಸಭಾ ಅಧ್ಯಕ್ಷತೆಯನ್ನು ಬೆಳ್ತಂಗಡಿ ವಿಶ್ವಕರ್ಮಾಭ್ಯುದಯ ಸಭಾ ಇದರ ಅಧ್ಯಕ್ಷ ಗಣೇಶ್ ಆಚಾರ್ಯ ಬಲ್ಯಾಯಕೋಡಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಪ್ರತಾಪ್‌ ಸಿಂಹ ನಾಯಕ್ ಭಾಗವಹಿಸಿದ್ದರು.

ವೇದಿಕೆಯಲ್ಲಿ ಉದ್ಯಮಿ ಬಿ.ಕೆ. ಸತೀಶ ಆಚಾರ್ಯ, ಶ್ರೀ ವಿಶ್ವಕರ್ಮ ಕಮ್ಮಾರರ ಗುಡಿ ಕೈಗಾರಿಕಾ ಸಂಘದ ತಾಲೂಕು ಘಟಕ ಅಧ್ಯಕ್ಷ ಆನಂದ ಆಚಾರ್ಯ ಮಾಪಲಾಡಿ, ಯುವ ಉದ್ಯಮಿಗಳು ಶಿಲ್ಪಿ ಶಶಿಧರ ಆಚಾರ್ಯ, ಪ್ರಾಧ್ಯಾಪಕ ತಾರಾನಾಥ ಆಚಾರ್ಯ, ಬೆಳ್ತಂಗಡಿ ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಉಷಾ ಹರಿಪ್ರಸಾದ್ ಆಚಾರ್ಯ, ಶಿವಪ್ರಸಾದ್ ಪುರೋಹಿತರು ಉಪಸ್ಥಿತರಿದ್ದರು.

ವಿಶೇಷ ಕಾರ್ಯಕ್ರಮದ ಅಂಗವಾಗಿ ವಿ ಸ್ಕೂಲ್ ಆಫ್ ಡಾನ್ಸ್ ಕ್ಲಾಸ್ ಉಜಿರೆ ಇವರಿಂದ ನೃತ್ಯ ಕಾರ್ಯಕ್ರಮ ಹಾಗೂ ಆಕರ್ಷಣ ಕಲಾ ತಂಡ ಇವರಿಂದ “ಪಂಡಿನವು ನೆನಪಿಪ್ಪಡ್” ತುಳು ಸಾಮಾಜಿಕ ಸಾಂಸಾರಿಕ ಹಾಸ್ಯಮಯ ನಾಟಕ ನಡೆಯಿತು.

ಶ್ರೀಮತಿ ಲತಾ ಬಾಲಚಂದ್ರ ಆಚಾರ್ಯ ಹಾಗೂ ರುಕ್ಮಯ ಆಚಾರ್ಯ ಕನ್ನಾಜೆ ನಿರೂಪಿಸಿದರು. ಕು. ಜಯಶ್ರೀ ಪ್ರಾರ್ಥಿಸಿದರು. ಸದಾನಂದ ಆಚಾರ್ಯ ಅಳದಂಗಡಿ ಸ್ವಾಗತಿಸಿದರು. ಸೀತಾರಾಮ ಆಚಾರ್ಯ ಅಳದಂಗಡಿ ಧನ್ಯವಾದವಿತ್ತರು.

Related posts

ಮೈಸೂರು ದಸರಾ ಸಿ.ಎಂ ಕಪ್ ನ ಸ್ನಾಚ್, ಕ್ಲೀನ್ ಮತ್ತು ಜೆರ್ಕ್ ನಲ್ಲಿ ನಿಡ್ಲೆಯ ಪ್ರತ್ಯುಷ್‌ ರವರಿಗೆ ಗೋಲ್ಡ್ ಮೆಡಲ್

Suddi Udaya

ಪಟ್ರಮೆ ಗ್ರಾ.ಪಂ. ಅಧ್ಯಕ್ಷರಾಗಿ ಮನೋಜ್, ಉಪಾಧ್ಯಕ್ಷರಾಗಿ ಮೋಹಿನಿ ಆಯ್ಕೆ

Suddi Udaya

ಮಹಾ ಕುಂಭ ಮೇಳ: 5 ತಿಂಗಳ ಮಗು, ತಂದೆ- ತಾಯಿ ಸಮೇತ ಪುಣ್ಯ ಸ್ನಾನ ಮಾಡಿ ಆದಶ೯ರಾದ ಬೆಳ್ತಂಗಡಿಯ ಮಹೇಶ್ ಆಚಾರ್ಯ

Suddi Udaya

ಉಜಿರೆ ಎಸ್‌ಡಿಎಂ ಆಂ.ಮಾ. ಶಾಲೆಯಲ್ಲಿ “ಶುಭಮಸ್ತು” ಕಾರ್ಯಕ್ರಮ

Suddi Udaya

ಮುಂಡೂರು ನಾಗಕಲ್ಲುರ್ಟಿ ಕ್ಷೇತ್ರದಲ್ಲಿ ಕುಣಿತ ಭಜನೋತ್ಸವ

Suddi Udaya

ಬೆಳ್ತಂಗಡಿಯಲ್ಲಿ ನೂತನ ಶಾಖೆ ‘ಕೋಟಕ್ ಲೈಫ್’ ಉದ್ಘಾಟನೆ

Suddi Udaya
error: Content is protected !!