September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶುಭಾರಂಭ

ಬೆಳ್ತಂಗಡಿಯಲ್ಲಿ ನೂತನ ಶಾಖೆ ‘ಕೋಟಕ್ ಲೈಫ್’ ಉದ್ಘಾಟನೆ

ಬೆಳ್ತಂಗಡಿ: ಇಲ್ಲಿಯ ಮುಖ್ಯ ರಸ್ತೆ ವೈಭವ್ ಆರ್ಕೇಡ್ ನಲ್ಲಿ ನೂತನವಾಗಿ ಪ್ರಾರಂಭಗೊಂಡ ‘ಕೋಟಕ್ ಲೈಫ್’ (kotak life) ಉದ್ಘಾಟನಾ ಕಾರ್ಯಕ್ರಮವು ಜ.25 ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ನೆರವೇರಿಸಿ ಮಾತನಾಡಿ ಪ್ರಯತ್ನ, ತಾಳ್ಮೆ, ಶ್ರಮ , ನಂಬಿಕೆ, ವಿಶ್ವಾಸ ಇದ್ದಲ್ಲಿ ವ್ಯವಹಾರ ಯಶಸ್ವಿಯಾಗುವುದು ಹಾಗೂ ಜೀವನ ಭದ್ರತೆಯಲ್ಲಿ ಕೋಟಕ್ ಲೈಫ್ 2ನೇ ಸ್ಥಾನದಲ್ಲಿ ಇದೆ ಎಂದು ತಿಳಿಸಿ ಶುಭಹಾರೈಸಿದರು.

ಬೆಳ್ತಂಗಡಿ ಕೋಟಕ್ ಲೈಫ್ ಪ್ರೋವಿಜಿನಲ್ ಚೀಫ್ ಏಜೆನ್ಸಿ ಪಾಟ್ನರ್ ದಿನಕರ್ ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಂಗಳೂರು ಕೋಟಕ್ ಲೈಫ್ ರೀಜಿನಲ್ ಹೆಡ್ ಅಬ್ದುಲ್ ಗಫೂರ್, ಮಂಗಳೂರು ಕೋಟಕ್ ಲೈಫ್ ಏರಿಯಾ ಹೆಡ್ ಮೈಕಲ್ ಡಿ ಸೋಜ, ಬೆಳ್ತಂಗಡಿ ವೈಭವ್ ಆರ್ಕೇಡ್ ನ ಮಾಲಕ ಸೀತಾರಾಮ ಶೆಟ್ಟಿ, ಕೊಕ್ಕಡ ಉದ್ಯಮಿ ರಾಮಣ್ಣ ಗೌಡ ಕೆಚೋಡಿ, ಮಂಗಳೂರು ಕೋಟಕ್ ಲೈಫ್ ಚೀಫ್ ಏಜೆನ್ಸಿ ಪಾಟ್ನರ್ ಡೋಲ್ಫಿ ಮೊಂತೆರೊ, ಏರಿಯಾ ಮಾನ್ಯೇಜರ್ ಅಂಜನೇಯ, ಶಾಖಾ ಮಾನ್ಯೇಜರ್ ಗಳಾದ ನಿಸಾರ್ ಅಹಮ್ಮದ್ , ಪ್ರಜ್ವಲ್, ಪ್ರಿಮಿಯಂ ಏಜೆನ್ಸಿ ಮಾನೇಜರ್ ಕೃಪಾ ಉಪಸ್ಥಿತರಿದ್ದರು.


ಮಂಗಳೂರು ಕೋಟಕ್ ಲೈಫ್ ಎಕ್ಸಿಕ್ಯೂಟಿವ್ ಚೀಫ್ ಏಜೆನ್ಸಿ ಪಾಟ್ನರ್ ಸತ್ಯರಂಜನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಯೋಗೀಶ್ ಕೊಕ್ಕಡ ಆಳಂಬಿಲ ಸ್ವಾಗತಿಸಿ, ಗಿರೀಶ್ ಧನ್ಯವಾದವಿತ್ತರು.

Related posts

ನಾಲ್ಕೂರು : ಕಾಂಗ್ರೆಸ್ ಕಾರ್ಯಕರ್ತರು ಹಲವು ಮಂದಿ ಬಿಜೆಪಿ ಸೇರ್ಪಡೆ

Suddi Udaya

ಎಲ್‌.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸ್ವಚ್ಚತಾ ಅಭಿಯಾನ:

Suddi Udaya

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ತಣ್ಣೀರುಪಂತ: ಶಾಸಕ ಹರೀಶ್ ಪೂಂಜರ ಅನುದಾನದಲ್ಲಿ ಕೊಲ್ಯ-ಬೋಳ್ನಡ್ಕ ಕಾಂಕ್ರೀಟ್ ರಸ್ತೆ ನಿರ್ಮಾಣ ಪೂರ್ಣ

Suddi Udaya

ಉಜಿರೆ: ಗುರಿಪಳ್ಳ ಅಂಬಡೆಬೆಟ್ಟು ನೂತನ ಸೇತುವೆ ಸಂಚಾರಕ್ಕೆ ಮುಕ್ತ

Suddi Udaya

ಯುವ ಕಾಂಗ್ರೆಸ್ ದಕ ಜಿಲ್ಲಾ ಸಮಿತಿಯಿಂದ ಮತಗಳ್ಳತನ ವಿರುದ್ದ ಜನಜಾಗೃತಿ ಹೋರಾಟಕ್ಕೆ ಬೆಂಬಲವಾಗಿ ಮಂಗಳೂರಿನಲ್ಲಿ ಬ್ರಹತ್ ಪಂಜಿನ ಮೆರವಣಿಗೆ

Suddi Udaya
error: Content is protected !!